ಸಣ್ಣ ಪ್ರಮಾಣದಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಕೈತುಂಬಾ ಲಾಭ ಗಳಿಸಿದ ರೈತ; ಇಲ್ಲಿದೆ ಮಾದರಿ ರೈತನ ಸ್ಟೋರಿ

ವಿ.ಸುಕುಮಾರ್‌ ತಾಯಲೂರು: ಮುಳಬಾಗಲು ತಾಲೂಕಿನಲ್ಲೇ ಪ್ರಥಮ ಬಾರಿಗೆ ಗುಮ್ಮಕಲ್‌ ಗ್ರಾಮದ ರೈತ ರಾಮರೆಡ್ಡಿ ಎಂಬುವರು ನೂತನ ಹೊಸ ತಳಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯುವುದರ ಮೂಲಕ ಯಶಸ್ವಿ ಹಾದಿಯಲ್ಲಿದ್ದಾರೆ. ಕೃಷಿಕರು ಪ್ರಯೋಗಾತ್ಮಕ ಚಟುವಟಿಕೆಗಳ ಮೂಲಕ ಹೊಸ ಹೊಸ ತಳಿಗಳನ್ನು ತಮ್ಮ ತೋಟಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆದು ಸಾಧಕ ಬಾಧಕಗಳನ್ನು ನೋಡಿಕೊಂಡು ಇನ್ನಷ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ಮುಂದಾಗುವುದು ಬಲು ಅಪರೂಪ. ಅದರಂತೆ ಮುಳಬಾಗಲು ತಾಲೂಕಿನ ತಾಯಲೂರು ಹೋಬಳಿ ಗುಮ್ಮಕಲ್‌ ಗ್ರಾಮದ ಟಿ.ರಾಮರೆಡ್ಡಿ ಡ್ರ್ಯಾಗನ್‌ ಫ್ರೂಟ್ಸ್‌ ಮತ್ತು ಅಕಾಲಿಕ ಮಾವು ಬೆಳೆ ಬೆಳೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಯಶಸ್ವಿಯ ಹಾದಿಯಲ್ಲಿದ್ದಾರೆ. ಕಳೆದ ವರ್ಷ ಪ್ರಾಯೋಗಿಕವಾಗಿ ತಮ್ಮ 8 ಗುಂಟೆ ಜಮೀನಿನಲ್ಲಿ 140 ಕಲ್ಲುಕೂಚುಗಳನ್ನು ಹೂಳಿ ಸುತ್ತಲೂ 4 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಟ್ಟು ಕೊಟ್ಟಿಗೆ ಗೊಬ್ಬರ ಸೇರಿದಂತೆ ಅಗತ್ಯ ಪೋಷಕಾಂಶಗಳ ಗೊಬ್ಬರಗಳನ್ನು ನೀಡಿ ಬೆಳೆ ಬೆಳೆದಿದ್ದು 8 ಗುಂಟೆಗೆ 85 ಸಾವಿರ ವೆಚ್ಚ ಮಾಡಿದ್ದು ಈಗ ಫಸಲು ಜೂನ್‌ನಿಂದ ಬರುತ್ತಿದೆ. ಈಗಾಗಲೇ 300 ಕೆಜಿ ಹಣ್ಣುಗಳನ್ನು ಕೋಲಾರದ ಹಾಪ್‌ಕಾಮ್ಸ್‌ ಸೇರಿದಂತೆ ಸ್ಥಳೀಯ ಹಣ್ಣು ವ್ಯಾಪಾರಿಗಳಿಗೆ ಕೆಜಿಗೆ 150 ರೂ.ನಂತೆ ಮಾರಾಟ ಮಾಡಿ 300 ಕೆಜಿಯನ್ನು ಹಂತ ಹಂತವಾಗಿ ಮಾರಾಟ ಮಾಡಿ 45 ಸಾವಿರ ಗಳಿಸಿದ್ದಾರೆ. ಇನ್ನೂ ಡಿಸೆಂಬರ್‌ ತಿಂಗಳ ಕೊನೆಯವರೆಗೂ ಹಂತ ಹಂತವಾಗಿ ಡ್ರ್ಯಾಗನ್‌ ಫ್ರೂಟ್ಸ್‌ ಸಿಗಲಿದೆ. ಒಟ್ಟಾರೆಯಾಗಿ ಈ ವರ್ಷ ಒಂದು ಸಾವಿರ ಕೆಜಿ ಹಣ್ಣು ಬೆಳೆಯುವ ನಿರೀಕ್ಷೆಯನ್ನು ಟಿ.ರಾಮರೆಡ್ಡಿ ಹೊಂದಿದ್ದಾರೆ. ಕಾಯಿಲೆಗಳಿಗೆ ರಾಮಬಾಣ ಡ್ರಾಗನ್‌ ಫ್ರೂಟ್ಸ್‌ ತಿನ್ನುಲು ರುಚಿಕರವಾಗಿರುತ್ತದೆ ಹಾಗೂ ಔಷಧ ಗುಣಗಳನ್ನು ಹೊಂದಿದೆ. ಇದರಿಂದ ಬಹುಬೇಡಿಕೆ ಹಣ್ಣಾಗಿದೆ. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ, ಗ್ಯಾಸ್ಟ್ರಿಕ್‌ ಸೇರಿದಂತೆ ಇತರೆ ಕಾಯಿಲೆಗಳಿಗೆ ಈ ಹಣ್ಣು ರಾಮ ಬಾಣವಾಗಿದೆ. ಅಲ್ಲದೆ ಇದರ ಸಿಪ್ಪೆ ತೆಗೆದು ಚರ್ಮ ಕಾಯಿಲೆ ಇರುವುವವರು 2 ರಿಂದ 3 ಬಾರಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ಮಾಯವಾಗುತ್ತದೆ ಎನ್ನುತ್ತಾರೆ ರೈತ ರಾಮರೆಡ್ಡಿ. ಅನ್‌ಸೀಸನಲ್‌ ಮಾವಿನಲ್ಲೂ ಇದಲ್ಲದೆ ಅಕಾಲಿಕ ಮಾವು ಬೆಳೆಯುವ ಪ್ರಯೋಗಕ್ಕೂ ಕೈ ಹಾಕಿದ್ದು ಒಂದು ಎಕರೆ ಜಮೀನಿನಲ್ಲಿ 760 ಸಸಿಗಳನ್ನು ನೆಟ್ಟಿದ್ದು ಅನ್‌ಸೀಸನಲ್‌ ಪುನಸರಾಯಲ್‌ ಮಾವು ಬೆಳೆ ಜನವರಿಯಲ್ಲಿ ಫಸಲಿಗೆ ಬರುತ್ತದೆ. ಈಗಾಗಲೇ 2 ವರ್ಷ ಕಳೆದಿರುವ ಮಾವಿನ ಗಿಡಗಳಿಂದ ಮೂರನೇ ವರ್ಷದಿಂದ ಫಸಲು ಸಿಗಲಿದೆ. ಪ್ರಾಯೋಗಿಕವಾಗಿ ಒಂದು ಕಾಯಿಯನ್ನು ಗಿಡದಲ್ಲಿ ಬಿಟ್ಟಿದ್ದು ಉಳಿದಂತೆ ಎಲ್ಲಾ ಗಿಡಗಳಲ್ಲಿದ್ದ ಹೂವನ್ನು ಕಿತ್ತು ಗಿಡ ಬೆಳವಣಿಗೆಗೆ ಒತ್ತು ನೀಡಿದ್ದಾರೆ. ಒಂದು ಎಕರೆಗೆ ಒಂದು ಲಕ್ಷ ಖರ್ಚು ಬಂದಿದ್ದು ಎರಡು ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು ಈ ವರ್ಷದ ಜನವರಿಯಿಂದ ಫಸಲು ಸಿಗುವ ನಿರೀಕ್ಷೆಯಲ್ಲಿದ್ದು ಶೇಕಡ 30 ರಷ್ಟು ಫಸಲು ಮಾತ್ರ ಕೈಗೆ ಸಿಗಲಿದೆ.


from India & World News in Kannada | VK Polls https://ift.tt/3mgtTwW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...