ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾರ್ಭಟ..! 9 ವಿದ್ಯಾರ್ಥಿನಿಯರಿಗೆ ಸೋಂಕು..

: ಓಮಿಕ್ರಾನ್‌ ವೈರಸ್‌ ಹರಡುವಿಕೆ ಆತಂಕದ ನಡುವೆ ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್‌) 9 ಮಂದಿ ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಡಿಸೆಂಬರ್ 24 ರಂದು 4 ಮಂದಿಗೆ ಹಾಗೂ 25 ರಂದು 5 ಮಂದಿಗೆ ಸೋಂಕು ತಗುಲಿರುವುದು ಸ್ವಾಬ್‌ ಟೆಸ್ಟ್‌ ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಈ 9 ಮಂದಿಯಲ್ಲಿ 8 ಮಂದಿ ಕೇರಳ ರಾಜ್ಯದವರಾಗಿದ್ದಾರೆ. ಎಂಬಿಬಿಎಸ್‌ ವ್ಯಾಸಂಗಕ್ಕಾಗಿ ಕೇರಳದಿಂದ ಮಂಡ್ಯಕ್ಕೆ ಬಂದಿರುವ 8 ಡಿಸೆಂಬರ್ 8 ರಂದು ಕೇರಳಕ್ಕೆ ತೆರಳಿ 14 ರಂದು ಮಂಡ್ಯಕ್ಕೆ ವಾಪಸ್ಸಾಗಿದ್ದರು. ಬಳಿಕ ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 4 ಮಂದಿಗೆ ಸೋಂಕು ತಗುಲಿರುವುದು ಡಿಸೆಂಬರ್ 24 ರಂದು ದೃಢಪಟ್ಟಿತ್ತು. ಹೀಗಾಗಿ ಅದೇ ದಿನದಂದು ಹಾಸ್ಟೆಲ್‌ನ ಉಳಿದೆಲ್ಲ 145 ವಿದ್ಯಾರ್ಥಿನಿಯರ ಸ್ವಾಬ್‌ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 5 ಮಂದಿಗೆ ಸೊಂಕು ತಗುಲಿರುವುದು ಡಿಸೆಂಬರ್ 25 ರಂದು ಖಚಿತವಾಗಿದೆ. ಹೀಗಾಗಿ ಎಲ್ಲ 9 ವಿದ್ಯಾರ್ಥಿನಿಯರನ್ನು ಮಹಿಳಾ ಹಾಸ್ಟೆಲ್‌ನ 4ನೇ ಮಹಡಿಯ ಖಾಲಿ ಕೊಠಡಿಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಜತೆಗೆ, ಬಾಲಕರ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ನಿರ್ದೇಶಕ ಡಾ. ಎಂ. ಆರ್. ಹರೀಶ್‌ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಮದ್ದೂರಿನಲ್ಲಿ ಅಪಘಾತದಲ್ಲಿ ವ್ಯಕ್ತಿ ಸಾವು ಬೆಂಗಳೂರು - ಮೈಸೂರು ರಸ್ತೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲನಿ ಬಳಿ ಭಾನುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ಸ್ಥಳದಲ್ಲೇ ಅಸು ನೀಗಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ತಂದೆ ನರಸಿಂಹ ಮೂರ್ತಿ ಅವರ ಅಸ್ತಿಯನ್ನು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಸರ್ಜಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ನರಸಿಂಹ ಮೂರ್ತಿ ಅವರ ಮಗ ಸುದರ್ಶನ್‌ (61) ಸ್ಥಳದಲ್ಲೇ ಮೃತಪಟ್ಟು ಇವರ ಜೊತೆಯಲ್ಲಿ ಬಂದಿದ್ದ ಮತ್ತಿಬ್ಬರಾದ ಸುಬ್ರಮಣ್ಯ ಹಾಗೂ ಮುರುಳೀಧರ್ ಗಾಯಗೊಂಡಿದ್ದು ಮದ್ದೂರು ಗುರು ಶಾಂತಪ್ಪ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಹರೀಶ್‌ ಮತ್ತು ಸಂಚಾರಿ ಪಿಎಸ್‌ಐ ರವಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮುಂದಿನ ಕ್ರಮ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/3Han9J9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...