ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳಿಂದ ಶೀತದಿಂದ ಜನರು ನಡುಗಲಾರಂಭಿಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಮಲೆನಾಡು, ಉತ್ತರ ಭಾಗದಲ್ಲಿ ದಟ್ಟ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದೆ. ಬೀದರ್, ವಿಜಯಪುರ ಮೊದಲಾದ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಾಮಾನ್ಯಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಹಜ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ, ಉತ್ತರ ಕರ್ನಾಟಕ ಭಾಗದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲೂ ಚಳಿ ಅಧಿಕವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯರಾತ್ರಿಯಿಂದ ಮುಂಜಾವಿನ ತನಕ ತಾಪಮಾನ ಕನಿಷ್ಠ ಪ್ರಮಾಣ ತಲುಪುತ್ತಿದೆ. ಡಿ.25ರಂದು ರಾಜ್ಯದಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣರಿಗೆ ನಸುಕಿನಲ್ಲೇ ಎದ್ದು ಕೃಷಿ ಚಟುವಟಿಕೆ ಕೈಗೊಳ್ಳಲು ಹಿನ್ನಡೆಯಾಗಿದೆ. ಪ್ರತಿನಿತ್ಯ ಮುಂಜಾನೆ 5 ಗಂಟೆಗೆಲ್ಲ ಹಾಸಿಗೆಯಿಂದ ಎದ್ದು ತಂಪಾದ ಹವಾಮಾನ ಸವಿಯಲು ವಾಯುವಿಹಾರಕ್ಕೆ ಹೊರಡುತ್ತಿದ್ದ ಯುವಕರು ಮತ್ತು ಮಧ್ಯ ವಯಸ್ಕರು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ ಗಢ ಗಢ ನಡುಗುವ ಚಳಿಗೆ ಹೆದರಿ ಮನೆಯಲ್ಲೇ ಉಳಿಯುವಂತಾಗಿದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ವೇಳೆ ಹಾಲು ಉತ್ಪಾದಕರಂತೂ ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಮುಂಜಾನೆಯ ಕೊರೆಯುವ ಚಳಿಯಲ್ಲಿ ಹಾಲು ಕರೆದು ಡೇರಿಗೆ ತಂದು ಹಾಕಲು ಹರಸಾಹಸ ಪಡುವಂತಾಗಿದೆ. ದನ ಕರುಗಳಿಗೆ ಮೇವು ಹೊಂದಿಸಲು ಕಷ್ಟಪಡುವಂತಾಗಿದೆ. ತೇವಾಂಶ ಹೆಚ್ಚಾಗಿರುವ ಕಾರಣದಿಂದ ಕುರಿ, ಮೇಕೆಗಳನ್ನು ಸಾಕುವುದು, ಕೃಷಿಕರು ಬೆಳಗಿನ ಜಾವ ತೋಟಗಳಿಗೆ ನೀರು ಹರಿಸಲು ಹೋಗಲಾದೆ, ಚಳಿಗೆ ಗಢ ಗಢ ನಡಗುವಂತಾಗಿದೆ. ವಾಹನ ಸವಾರರ ಪಾಡಂತೂ ಹೇಳಲಾಗದು. ಆಕಾಶ ಭೂಮಿ ಒಂದಾದಂತೆ ಹಿಮ ಆವರಿಸಿದ್ದು ಎದರುಗಡೆ ಬರುವ ಯಾವುದೇ ವಾಹನಗಳು ಸಂಪೂರ್ಣ ಹತ್ತಿರಕ್ಕೆ ಬರುವವರೆಗೆ ಕಣ್ಣಿಗೆ ಕಾಣಿಸುವುದೇ ಇಲ್ಲ. ಹಾಗಾಗಿ ಬೆಳಗಿನ ಪ್ರಯಾಣ ದುಸ್ತರವಾಗಿದೆ. ಬೆಳಗಿನ ಜಾವ 8 ಗಂಟೆಯಾದರು ಜನ ಮನೆ ಬಿಟ್ಟು ಹೊರಬರಲಾರದ ಸನ್ನಿವೇಶ ಉಂಟಾಗಿದ್ದು, ದೂರದ ತಾಲೂಕು ಹಾಗೂ ಜಿಲ್ಲಾಕೇಂದ್ರಗಳಿಗೆ ತೆರಳುವ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ಸಂಕಟ ಸನ್ನಿವೇಶ ಸೃಷ್ಟಿಯಾಗಿದ್ದು, ಸಾಕಪ್ಪಾ ಈ ಚಳಿಗಾಲದ ಸಹವಾಸ ಎನ್ನುವಂತಾಗಿದೆ.
from India & World News in Kannada | VK Polls https://ift.tt/3pqjCQL