ಶಿಶು ಮರಣ ತಡೆಗೆ ಸರಕಾರದ ಹೆಜ್ಜೆ: ಎದೆಹಾಲಿನ ಬಗ್ಗೆ ಜಾಗೃತಿ; ರಾಜ್ಯದ 78 ಕಡೆ ಕಾರ್ಯಕ್ರಮ ಜಾರಿ!

ಶಶಿಧರ ಮೇಟಿ ಬಳ್ಳಾರಿ ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಡಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಬಾಲ್ಯದಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗೆ ತಾಯಿಯ ಎದೆ ಹಾಲು ರಾಮಬಾಣ. ಇದರ ಮಹತ್ವ ಅರಿತಿರುವ ರಾಜ್ಯ ಸರಕಾರವು 'ನೋರಾ ಹೆಲ್ತ್‌ ಕೇರ್‌' ಯೋಜನೆ ಮೂಲಕ ಕೇರ್‌ ಕಂಪ್ಯಾನಿಯನ್‌ ಪ್ರೋಗ್ರಾಮ್‌ ಅನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ತಾಯಂದಿರು ಸಕಾಲಿಕ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ತಮ್ಮ ಮಕ್ಕಳಿಗೆ ಕೊಡುವಲ್ಲಿ ವಿಫಲರಾಗಿ ನವಜಾತ ಶಿಶುಗಳ ಸಾವಿಗೆ ಕಾರಣವಾಗುತ್ತಿದ್ದಾರೆ. ಎದೆಹಾಲು ಮತ್ತು ಎದೆಹಾಲು ಕೊಡುವ ಬಗ್ಗೆ ತಾಯಂದಿರಲ್ಲಿರುವ ಗೊಂದಲ ಹೋಗಲಾಡಿಸಿ, ಎದೆಹಾಲು ಕುಡಿಸಲು ನಿರಂತರ ಜಾಗೃತಿ ಮೂಡಿಸುವ ಕೆಲಸ ಬಳ್ಳಾರಿ ವಿಮ್ಸ್‌ ಸೇರಿದಂತೆ ರಾಜ್ಯದ 78 ಕಡೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾಸ್ಪತ್ರೆ, ದೊಡ್ಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎದೆಹಾಲಿನ ಮಹತ್ವವನ್ನು ಬಾಣಂತಿಯರಿಗೆ ತಿಳಿಸಲಾಗುತ್ತಿದೆ. ವಿಮ್ಸ್‌ ನಿರ್ದೇಶಕರಾದ ಗಂಗಾಧರ ಗೌಡ, ಅಧೀಕ್ಷಕ ಅಶ್ವಿನ್‌ಕುಮಾರ್‌ ಸಹಕಾರದೊಂದಿಗೆ ವಿಮ್ಸ್‌ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ದುರ್ಗಪ್ಪ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ.ಸುಮನ್‌ ಗಡ್ಡಿ ಬಳಗದ ತಂಡವು ಕೇರ್‌ ಕಂಪ್ಯಾನಿಯನ್‌ ಪ್ರೋಗ್ರಾಂ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಗುವು ಹುಟ್ಟಿದ ಒಂದು ತಾಸಿನೊಳಗೆ ತಾಯಿಯ ಎದೆಹಾಲು ಕುಡಿಸಿದರೆ ನವ ಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಡೆಯಬಹುದು. ಪ್ರಸೂತಿಯಾದ ಮೂರು ದಿನಗಳವರೆಗೆ ತಾಯಿಯ ಎದೆಹಾಲಿನಲ್ಲಿ ಕೊಲೆಸ್ಟಮ್‌ ಎನ್ನುವ ಅಂಶವು ಮಗುವಿಗೆ ಒಂದು ರೀತಿಯ ನೈಸರ್ಗಿಕ ಲಸಿಕೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಮಗು ಹುಟ್ಟಿದ ಒಂದು ತಾಸಿನೊಳಗೆ ತಾಯಿಯು ಎದೆಹಾಲು ನೀಡಬೇಕೆಂಬುದು ಮಕ್ಕಳ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಓ) ಅಭಿಪ್ರಾಯ. 6 ತಿಂಗಳ ಮೇಲಿನ ಮಗುವಿಗೆ ಮೃದು ಆಹಾರ ಸೇರಿದಂತೆ ಎದೆಹಾಲನ್ನು ನಿಯಮಾನುಸಾರ ಕುಡಿಸುವುದರಿಂದ ಶೇ.19ರಷ್ಟು 5 ವರ್ಷ ಒಳಗಿನ ಮಕ್ಕಳ ಸಾವು ತಡೆಗಟ್ಟಬಹುದು. ಶೇ.40ರಷ್ಟು ಹೆಚ್ಚು ತಾಯಂದಿರಿಗೆ ಮಗುವಿಗೆ ಹಾಲು ಕುಡಿಸುವ ವಿಧಾನ ತಿಳಿಯದೆ ಮಗು ಹಾಲು ಕುಡಿಯುತ್ತಿಲ್ಲ ಎಂದು ಕೊರಗುತ್ತಾರೆ. 2 ವರ್ಷದವರೆಗೆ ಕಡ್ಡಾಯಮಗುವಿನ ಹುಟ್ಟಿನಿಂದ 6 ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನಷ್ಟೇ ನೀಡಬೇಕು. ಎರಡು ಗಂಟೆಗೊಮ್ಮೆ ಅಂದಾಜು 15-20 ನಿಮಿಷಗಳ ಎದೆ ಹಾಲು ಉಣಿಸಬೇಕು. ಇನ್ನು 6 ತಿಂಗಳ ನಂತರದಲ್ಲಿ ತಾಯಿಯ ಎದೆಹಾಲಿನೊಂದಿಗೆ ಮೃದು ಆಹಾರ ನೀಡಬೇಕು. ಯಾವುದೇ ಕಾರಣಕ್ಕೆ 2 ವರ್ಷದವರೆಗೆ ಎದೆಹಾಲನ್ನು ಮಗುವಿಗೆ ಕೊಡುವುದನ್ನು ನಿಲ್ಲಿಸಬಾರದು ಎಂಬುದು ಮಕ್ಕಳ ತಜ್ಞರ ಅಭಿಪ್ರಾಯವಾಗಿದೆ.


from India & World News in Kannada | VK Polls https://ift.tt/30KNYEg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...