ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಪ್ರತಿಮೆ ಭಗ್ನಗೊಳಿಸಿ, ಪುಂಡಾಟಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವ ಹೇಳಿದ್ದಾರೆ. ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಡಿ ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾತನಾಡುವ ಜನತೆ, ಅತ್ಯಂತ ಅನ್ಯೋನ್ಯತೆ, ಪ್ರೀತಿ ಹಾಗೂ ಸಾಮರಸ್ಯದಿಂದ ಇದ್ದಾರೆ. ರಾಯಣ್ಣ ಹಾಗೂ ಶಿವಾಜಿಯವರಂಥ ಮಹನೀಯರ ಬಗ್ಗೆ ಎಳ್ಳಷ್ಟೂ ಗೌರವವಿಲ್ಲದ ದುಷ್ಕರ್ಮಿಗಳ ಒಂದೇ ಉದ್ದೇಶ, ಸಮಾಜದಲ್ಲಿನ ನೆಮ್ಮದಿಗೆ ಭಂಗ ತರುವುದಾಗಿದ್ದು, ಅವರನ್ನು ಬಗ್ಗು ಬಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ, ಸಂಬಂಧಿಸಿದ ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಕಿಡಿಗೇಡಿಗಳು ಎರಡು ಕಡೆಗಳಲ್ಲಿ ಕ್ರಾಂತಿವೀರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ಹಾಗೂ ಪೊಲೀಸರ ವಾಹನಗಳಿಗೂ ಹಾನಿ ಉಂಟು ಮಾಡಿದ್ದಾರೆ. ಪುಂಡರ ಈ ಕೃತ್ಯ ಕನ್ನಡಿಗರನ್ನು ಕೆರಳಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 27 ಮಂದಿಯನ್ನು ಬಂಧಿಸಲಾಗಿದೆ. ಘಟನೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಸುವರ್ಣ ಸೌಧ ಚಲೋ ಹೋರಾಟ ಹಮ್ಮಿಕೊಂಡಿವೆ ಎಂದರು.
from India & World News in Kannada | VK Polls https://ift.tt/3FaQCSJ