ಬ್ರಿಟನ್‌ನಲ್ಲಿ ಓಮಿಕ್ರಾನ್ ಕೇಸ್‌ಗಳ ಅಲೆ: ಎಚ್ಚರಿಕೆ ಗಂಟೆ ಮೊಳಗಿಸಿದ ಲಂಡನ್

ಲಂಡನ್: ಬ್ರಿಟನ್‌ನಲ್ಲಿ ತಳಿ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 10 ಸಾವಿರಕ್ಕೂ ಅಧಿಕ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಶನಿವಾರ ಸಂಜೆಯ ವೇಳೆಗೆ ಅಲ್ಲಿನ ಹೊಸ ತಳಿ ಪ್ರಕರಣಗಳು 25,000 ಕ್ರಮಿಸಿದೆ. ಆದರೆ ಇದಿನ್ನೂ ಬೃಹತ್ ಬೆಟ್ಟದ ಮೇಲಿನ ಸಣ್ಣ ಮಂಜುಗಡ್ಡೆಯಷ್ಟೇ ಎಂದು ಸರ್ಕಾರದ ಸಲಹೆಗಾರರು ಎಚ್ಚರಿಕೆ ನೀಡಿದ್ದಾರೆ. ಓಮಿಕ್ರಾನ್ ತಳಿ ಹೆಚ್ಚು ಅಪಾಯಕಾರಿ ಅಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದರೂ, ಬ್ರಿಟನ್‌ನಲ್ಲಿ ಗುರುವಾರದ ವೇಳೆಗೆ ಓಮಿಕ್ರಾನ್ ಸೋಂಕಿಗೆ ಒಳಗಾದ ಏಳು ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಕಳೆದ ಕೆಲವು ದಿನಗಳಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಸರ್ಕಾರದ ದಾಖಲೆಗಳಿಗಿಂತಲೂ ವಾಸ್ತವ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪ್ರತಿದಿನವೂ ಸಾವಿರಾರು ಮಂದಿ ಈ ಹೊಸ ತಳಿ ವೈರಸ್‌ಗೆ ಒಳಗಾಗುತ್ತಿರುವುದು ಖಚಿತ. ಆದರೆ ಅವರೆಲ್ಲರ ಲೆಕ್ಕ ಸಿಗುತ್ತಿಲ್ಲ ಎಂದು ತುರ್ತು ಪರಿಸ್ಥಿತಿಗಳ ಬ್ರಿಟಿಷ್ ಸರ್ಕಾರದ ವೈಜ್ಞಾನಿಕ ಸಲಹಾ ಸಮೂಹ (ಎಸ್‌ಎಜಿಇ) ತಿಳಿಸಿದೆ. ಇಂಗ್ಲೆಂಡ್‌ನಲ್ಲಿ ಇದೇ ಗತಿಯಲ್ಲಿ ಓಮಿಕ್ರಾನ್ ಸ್ಥಿತಿಯಲ್ಲಿ ಹೆಚ್ಚಳ ಮುಂದುವರಿದರೆ ಪ್ರತಿ ದಿನ ಕನಿಷ್ಠ 3,000 ಮಂದಿ ಆಸ್ಪತ್ರೆಗೆ ದಾಖಲಾಗುವುದನ್ನು ನಿರೀಕ್ಷಿಸಲಾಗಿದೆ ಎಂದು SAGE ತಿಳಿಸಿದೆ. ದೇಶದಲ್ಲಿ ಈಗಿನ ಕೊರೊನಾ ವೈರಸ್ ನಿಯಂತ್ರಣ ಕ್ರಮಗಳನ್ನು ಕಠಿಣಗೊಳಿಸಬೇಕು ಎಂದು ಅದು ಸಲಹೆ ನೀಡಿದೆ. ಜನವರಿಯಲ್ಲಿ ದೇಶವ್ಯಾಪಿ ಲಡಿಕೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ದೈನಂದಿನ ಆಸ್ಪತ್ರೆ ದಾಖಲೀಕರಣ 4 ಸಾವಿರಕ್ಕಿಂತ ಹೆಚ್ಚಾಗಿತ್ತು. ಈಗ ಮತ್ತೆ ಅದೇ ಸ್ಥಿತಿ ಬರುವ ಅಪಾಯದ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಮೇಯರ್ ಸಾದಿಕ್ ಖಾನ್ ಅವರು ಸಾರ್ವಜನಿಕ ಸಂಸ್ಥೆಗಳು ಮತ್ತು ಹೆಚ್ಚಿನ ಕೇಂದ್ರ ಸರ್ಕಾರಿ ನೆರವಿನ ನಡುವೆ ಸಮೀಪದ ಸಮನ್ವಯತೆಗೆ ಅವಕಾಶ ನೀಡುವಂತೆ 'ಗಂಭೀರ ಪರಿಣಾಮದ ಸನ್ನಿವೇಶ'ದ ಘೋಷಣೆ ಮಾಡಿದ್ದಾರೆ. ಲಂಡನ್‌ನಲ್ಲಿ ಕೋವಿಡ್ 19 ಆಸ್ಪತ್ರೆ ದಾಖಲೀಕರಣ ಈ ವಾರ ಶೇ 30ರಷ್ಟು ಏರಿಕೆಯಾಗಿದೆ. ಇಲ್ಲಿ ಆರೋಗ್ಯ ಕಾರ್ಯಕರ್ತರ ಕೊರತೆಯೂ ಎದುರಾಗಿದೆ. ಹೀಗಾಗಿ ಪರಿಸ್ಥಿತಿ ಬಹಳ ಗಂಭೀರವಾಗುತ್ತಿದೆ ಎಂದು ಸಾದಿಕ್ ಖಾನ್ ತಿಳಿಸಿದ್ದಾರೆ. ಕೋವಿಡ್ ಅಧಿಕ ಅಪಾಯದ ದೇಶಗಳ ಪಟ್ಟಿಗೆ ಅನ್ನು ಜರ್ಮನಿ ಸೇರ್ಪಡೆಗೊಳಿಸಿದೆ. ಬ್ರಿಟನ್‌ನ ಕೋವಿಡ್ 19 ಪ್ರಕರಣಗಳಲ್ಲಿ ಶೇ 80ರಷ್ಟು ಓಮಿಕ್ರಾನ್ ಪ್ರಕರಣಗಳೇ ಇವೆ ಎಂದು ಊಹಿಸಲಾಗಿದೆ. ಆದರೆ ಪ್ರತಿ ಮಾದರಿಯನ್ನೂ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಲು ಸಾಧ್ಯವಾಗದ ಕಾರಣ ಒಟ್ಟಾರೆ ಕೇಸ್‌ಗಳನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ.


from India & World News in Kannada | VK Polls https://ift.tt/3e615CX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...