ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿರುವ ಇಲ್ಲಿನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲಲು ಭಾರತ ತಂಡಕ್ಕೆ ಸೋಮವಾರ ಕೇವಲ 5 ವಿಕೆಟ್ ಅಗತ್ಯವಿದೆ. ಮಳೆ ಕಾಟದ ನಡುವೆಗೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 325 ರನ್ ಗಳಿಸಿ, ಬಳಿಕ ಕಿವೀಸ್ ಪಡೆಯನ್ನು ಪ್ರಥಮ ಇನಿಂಗ್ಸ್‌ನಲ್ಲಿ 62 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್ ಮಾಡಿತು. ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೂರನೇ ದಿನ 70 ಓವರ್‌ಗಳಲ್ಲಿ 7 ವಿಕೆಟ್‌ಗೆ 276 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಎದುರಾಳಿಗೆ 540 ರನ್‌ಗಳ ಅಸಾಧ್ಯದ ಗುರಿ ನೀಡಿದೆ. ಗುರಿ ಬೆನ್ನತ್ತಿದ ಕಿವೀಸ್ 3ನೇ ದಿನದ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟದಲ್ಲಿ 140 ರನ್‌ಗಳನ್ನು ಗಳಿಸಿದೆ. ದ್ವಿತೀಯ ಟೆಸ್ಟ್ ಪಂದ್ಯದ (ಮೂರನೇ ದಿನದ ಅಂತ್ಯಕ್ಕೆ)ಭಾರತ: 109.5 ಓವರ್‌ಗಳಲ್ಲಿ 325 ರನ್‌ಗೆ ಆಲ್‌ಔಟ್ : 28.1 ಓವರ್‌ಗಳಲ್ಲಿ 62 ರನ್‌ಗಳಿಗೆ ಆಲ್‌ಔಟ್ ಭಾರತ: 2ನೇ ಇನಿಂಗ್ಸ್ 70 ಓವರ್‌ಗಳಲ್ಲಿ 7 ವಿಕೆಟ್‌ಗೆ 276ರನ್ ಡಿ. (ಮಯಾಂಕ್ ಅರ್ವಾಲ್ 62, ಚೇತೇಶ್ವರ್ ಪೂಜಾರ 47; ಏಜಾಝ್ ಪಟೇಲ್ 106ಕ್ಕೆ 4). ನ್ಯೂಜಿಲೆಂಡ್: 45 ಓವರ್‌ಗಳಲ್ಲಿ 5 ವಿಕೆಟ್‌ಗೆ 140 ರನ್ (ಡ್ಯಾರಿಲ್ ಮಿಚೆಲ್ 60, ಹೆನ್ರಿ ನಿಕೋಲ್ಸ್ 36*; ಆರ್ ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1). ಭಾರತ ಟೆಸ್ಟ್ ತಂಡಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ರವಿಚಂದ್ರನ್ ಅಶ್ವಿನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಚೇತೇಶ್ವರ ಪೂಜಾರ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಇಶಾಂತ್ ಶರ್ಮಾ, ಶುಭಮನ್ ಗಿಲ್, ಉಮೇಶ್ ಯಾದವ್, ಜಯಂತ್ ಯಾದವ್. ನ್ಯೂಜಿಲೆಂಡ್ ಟೆಸ್ಟ್ ತಂಡಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡಲ್ (ವಿಕೆಟ್‌ಕೀಪರ್), ಡೆವೋನ್ ಕಾನ್ವೇ, ಕೈಲ್ ಜೇಮಿಸನ್, ಟಾಮ್ ಲೇಥಮ್, ಹೆನ್ರಿ ನಿಕೋಲ್ಸ್, ಎಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸಮರ್‌ವಿಲ್ಲೇ, ಟಿಮ್ ಸೌಥೀ, ರಾಸ್ ಟೇಲರ್, ವಿಲ್ ಯಂಗ್ ಮತ್ತು ನೈಲ್ ವ್ಯಾಗ್ನರ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Ig3XLg