ಹೆಡ್‌ ಕೋಚ್‌ ಹುದ್ದೆಗೆ ದ್ರಾವಿಡ್‌ರನ್ನು ಒಪ್ಪಿಸಿದ್ದೇಗೆಂದು ತಿಳಿಸಿದ ಗಂಗೂಲಿ!

ಹೊಸದಿಲ್ಲಿ: ಹೆಡ್‌ ಕೋಚ್‌ ಸ್ಥಾನ ಅಲಂಕರಿಸುವಂತೆ ಅವರನ್ನು ಒಪ್ಪಿಸಿದ್ದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ() ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜೇ ಶಾ ಹಾಗೂ ತಾನು ನಿರಂತರವಾಗಿ ರಾಹುಲ್‌ ದ್ರಾವಿಡ್‌ಗೆ ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಅಂತಿಮವಾಗಿ ತಮ್ಮ ಮನಸನ್ನು ಬದಲಾಯಿಸಿಕೊಂಡು ಭಾರತ ತಂಡದ ಮುಖ್ಯ ಕೋಚ್‌ ಸ್ಥಾನವನ್ನು ಅಲಂಕರಿಸಿದ್ದರು ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ತಿಳಿಸಿದ್ದಾರೆ. ಪತ್ರಕರ್ತ ಬೊರಿಯಾ ಮಜುಂದಾರ್‌ ಅವರ "ಬ್ಯಾಕ್‌ಸ್ಟೇಜ್‌ ವಿಥ್‌ ಬೊರಿಯಾ" ಶೋನಲ್ಲಿ ಮಾತನಾಡಿದ್ದ ಟೀಮ್‌ ಇಂಡಿಯಾ ಕೋಚ್‌ ಸ್ಥಾನ ಅಲಂಕರಿಸುವಂತೆ ರಾಹುಲ್‌ ದ್ರಾವಿಡ್‌ ಅವರನ್ನು ಒಪ್ಪಿಸಲು ಪಟ್ಟಿದ್ದ ಹರಸಾಹಸವನ್ನು ರಿವೀಲ್‌ ಮಾಡಿದ್ದಾರೆ. " ರಾಹುಲ್‌ ದ್ರಾವಿಡ್ ದೀರ್ಘಾವಧಿ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಆಗಬೇಕೆಂಬುದು ನನಗೆ ಹಾಗೂ ಜೇ ಶಾ ಅವರಿಗೂ ಇಂಗಿತವಾಗಿತ್ತು. ಆದರೆ, ಈ ಹುದ್ದೆಗೆ ರಾಹುಲ್‌ ದ್ರಾವಿಡ್‌ ಅವರನ್ನು ಒಪ್ಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಇಬ್ಬರು ಮಕ್ಕಳನ್ನು ಹೊಂದಿರುವ ದ್ರಾವಿಡ್‌, ಒಂದು ವರ್ಷದಲ್ಲಿ ನ್ಯಾಷನಲ್‌ ಟೀಮ್‌ ಜೊತೆ 8 ರಿಂದ 10 ತಿಂಗಳ ಕಾಲ ದೇಶದಿಂದ ಹೊರಗುಳಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಆರಂಭದಲ್ಲಿ ಒಪ್ಪಿರಲಿಲ್ಲ," ಎಂದು ಗಂಗೂಲಿ ಹೇಳಿದರು. "ದ್ರಾವಿಡ್‌ ಅವರನ್ನು ಒಪ್ಪಿಸುವುದು ಅಸಾಧ್ಯದ ಕೆಲಸ ಎಂದು ನಮಗೆ ಮನವರಿಕೆಯಾಗಿತ್ತು. ನ್ಯಾಷನಲ್ ಕ್ರಿಕೆಟ್‌ ಅಕಾಡೆಮಿಯ ನಿರ್ದೇಶಕರ ಹುದ್ದೆಯನ್ನು ಮತ್ತೊಮ್ಮೆ ದ್ರಾವಿಡ್‌ ಅಲಂಕರಿಸಿದ್ದರು. ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಅವರು ಸಂದರ್ಶನದ ಮೂಲಕ ಎನ್‌ಸಿಎಗೆ ನೇಮಕವಾದರು. ಇದರ ಹೊರತಾಗಿಯೂ ನಾವು ದ್ರಾವಿಡ್‌ ಅವರನ್ನು ಒತ್ತಾಯಿಸುತ್ತಲೇ ಇದ್ದೆವು," ಎಂದು ತಿಳಿಸಿದರು. ಸೌರವ್‌ ಗಂಗೂಲಿ ವೈಯಕ್ತಿಕವಾಗಿ ಕರೆಗಳನ್ನು ಮಾಡಿದ ಬಳಿಕ ಹಾಗೂ ಟೀಮ್ ಇಂಡಿಯಾ ಆಟಗಾರರು ಕೂಡ ಒಲವು ಹೊಂದಿದ್ದರಿಂದ ಅಂತಿಮವಾಗ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಹುದ್ದೆಯನ್ನು ಅಲಂಕರಿಸಲು ಒಪ್ಪಿಗೆ ಸೂಚಿಸಿದ್ದರು. "ಯಾವ ಬಗೆಯ ವ್ಯಕ್ತಿತ್ವವುಳ್ಳ ಹೆಡ್‌ ಕೋಚ್‌ ಟೀಮ್‌ ಇಂಡಿಯಾಗೆ ಬೇಕೆಂದು ಆಟಗಾರರ ಬಳಿಯೂ ಮಾತನಾಡಲಾಗಿತ್ತು. ಅದರಂತೆ ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌ ಹುದ್ದೆಗೆ ಬರಬೇಕೆಂಬ ಬಗ್ಗೆ ಆಟಗಾರರು ಕೂಡ ಒಲವು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಹಲವು ಬಾರಿ ಕರೆ ಮಾಡಿ ದ್ರಾವಿಡ್‌ ಬಳಿ ಮಾತನಾಡಿದ್ದೆ. ಸತತ ಎರಡು ವರ್ಷಗಳಿಂದ ಒತ್ತಾಯ ಮಾಡಿದ ಬಳಿಕ ನಮ್ಮ ಪ್ರಯತ್ನ ಸಕಾರವಾಯಿತು," ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದರು. ಮನಸು ಬದಲಿಸಿದ ದ್ರಾವಿಡ್‌: "ಅದೃಷ್ಟವೆಂಬಂತೆ ಅವರು ಹೆಡ್‌ ಕೋಚ್‌ ಅಲಂಕರಿಸಲು ಒಪ್ಪಿಗೆ ಸೂಚಿಸಿದರು. ಆದರೆ, ಅವರು (ದ್ರಾವಿಡ್) ತಮ್ಮ ಮನಸನ್ನು ಬದಲಿಸಿಕೊಳ್ಳುತ್ತಾರೆಂದು ನಾನು ಭಾವಿಸಿರಲಿಲ್ಲ. ರವಿ ಶಾಸ್ತ್ರಿ ಬಳಿಕ ಟೀಮ್‌ ಇಂಡಿಯಾಗೆ ಅತ್ಯುತ್ತಮ ಕೋಚ್‌ ಅನ್ನು ನಾವು ನೇಮಕ ಮಾಡಿದ್ದೇವೆಂದು ನಮಗೆ ಅನಿಸಿತು," ಎಂದು ಸೌರವ್ ಗಂಗೂಲಿ ಹೇಳಿದರು. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಆಗಿ ರವಿ ಶಾಸ್ತ್ರಿ ಸ್ಥಾನವನ್ನು ರಾಹುಲ್‌ ದ್ರಾವಿಡ್‌ ತುಂಬಿದರುರು. ಎನ್‌ಸಿಎ ಮುಖ್ಯಸ್ದರಾಗಿ, 19 ವಯೋಮಿತಿ ಭಾರತ ತಂಡ ಹಾಗೂ ಭಾರತ 'ಎ' ತಂಡಗಳ ಹೆಡ್‌ ಕೋಚ್‌ ಆಗಿ ಅಪಾರ ಅನುಭವನ್ನು ಹೊಂದಿರುವ ದ್ರಾವಿಡ್‌ ಭಾರತ ಹಿರಿಯರ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ಸೂಕ್ತ ಆಯ್ಕೆ. ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಡಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಇದೀಗ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಿವೆ. ಎರಡನೇ ಟೆಸ್ಟ್ ಗೆಲ್ಲಲು ಭಾರತ ತಂಡಕ್ಕೆ ಕೇವಲ 5 ವಿಕೆಟ್‌ ಅಗತ್ಯವಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yaMdfX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...