ಕೊಹ್ಲಿಯನ್ನು ಕೆಳಗಿಳಿಸಿ ಈತನಿಗೆ ಓಡಿಐ ನಾಯಕತ್ವ ನೀಡಲು ಬಿಸಿಸಿಐ ಸಿದ್ದತೆ!

ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸಿದ ನಂತರ ಅವರ ಏಕದಿನ ತಂಡದ ನಾಯಕತ್ವದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ವಿರಾಟ್‌ ಕೊಹ್ಲಿ ಓಡಿಐ ತಂಡದ ನಾಯಕತ್ವ ತ್ಯಜಿಸಲಿದ್ದಾರೆಂದು ವರದಿಯಾಗಿದೆ. ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸುತ್ತಿರುವ ವೇಳೆ ವಿರಾಟ್‌ ಕೊಹ್ಲಿ, ಟೆಸ್ಟ್‌ ಹಾಗೂ ಓಡಿಐ ನಾಯಕತ್ವದಲ್ಲಿ ಮುಂದುವರಿಯುತ್ತೇನೆಂದು ಹೇಳಿದ್ದರು. ಆದರೆ, ಪ್ರಸ್ತುತ ಸನ್ನಿವೇಶ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿರಾಟ್‌ ಕೊಹ್ಲಿಯನ್ನು ಓಡಿಐ ನಾಯಕತ್ವದಿಂದ ಕೆಳಗೆ ಇಳಿಸುವ ಸಾಧ್ಯತೆ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಸೀಮಿತ ಓವರ್‌ಗಳ ಸ್ವರೂಪದ ತಂಡಕ್ಕೆ ಏಕೈಕ ನಾಯಕನನ್ನು ಹೊಂದಬೇಕೆಂಬ ಇಂಗಿತನ್ನು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್‌ ಶರ್ಮಾಗೆ ಏಕದಿನ ತಂಡದ ನಾಯಕತ್ವ ನೀಡಬೇಕೆಂಬ ಊಹಾಪೋಹಗಳು ಇವೆ. ದಕ್ಷಿಣ ಆಫ್ರಿಕಾ ಪ್ರವಾಸದ ಓಡಿಐ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ವಿರಾಟ್‌ ಕೊಹ್ಲಿಯ ಏಕದಿನ ತಂಡದ ನಾಯಕತ್ವ ಭವಿಷ್ಯವನ್ನು ನಿರ್ಧರಿಸಲಾಗುವುದು. ಮುಂದಿನ 2023ರ ಏಕದಿನ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾಗೆ ಹೆಚ್ಚಿನ ಸಮಯಾವಕಾಶ ನೀಡುವ ಸಲುವಾಗಿ ಈ ತೀರ್ಮಾನ ತೆಗೆದುಕೊಳ್ಳಬಹುದು. "ಅದರಂತೆ, ವಿರಾಟ್‌ ಕೊಹ್ಲಿ ತಮ್ಮ ಓಡಿಐ ತಂಡದ ನಾಯಕತ್ವವನ್ನು ಉಳಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ ಆದರೆ ಈ ವರ್ಷ ಏಕದಿನ ಕ್ರಿಕೆಟ್‌ಗೆ ಅಷ್ಟೊಂದು ಪ್ರಾಶಸ್ತ್ಯವಿಲ್ಲ. ಏಕೆಂದರೆ, ತವರು ಹಾಗೂ ವಿದೇಶಿ ಮಣ್ಣಿನಲ್ಲಿ ತುಂಬಾ ಕಡಿಮೆ ಪಂದ್ಯಗಳಿವೆ. ಆದರೆ, ಈ ನಿರ್ಧಾರವನ್ನು ವಿಳಂಬಗೊಳಿಸುವ ಬಗ್ಗೆಯೂ ಬಿಸಿಸಿಐ ಯೋಚಿಸಬಹುದು," ಎಂದು ಬಿಸಿಸಿಐನ ಹಿರಿಯ ಮೂಲವೊಂದು ಪಿಟಿಐಗೆ ತಿಳಿಸಿದೆ. "ಆದರೆ, ಎರಡೂ ಸ್ವರೂಪಗಳಿಗೆ ಪ್ರತ್ಯೇಕ ಯೋಚನೆಗಳು ನಮಗೆ ಯಾಕೆ ಬೇಕು ಎಂಬಂತೆಯೂ ಇಲ್ಲಿ ಚರ್ಚೆ ನಡೆಯಲಿದೆ. ಇದರಲ್ಲಿ ಬಹುತೇಕ ಮಂದಿ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಹಿನ್ನೆಲೆಯಲ್ಲಿ ಅವರೇ ಓಡಿಐ ತಂಡದ ನಾಯಕತ್ವವವನ್ನು ಅಲಂಕರಿಸಬೇಕು. ಆ ಮೂಲಕ ಮಹತ್ವದ ಟೂರ್ನಿಗೆ ತಯಾರಿ ನಡೆಸಲು ಅವರಿಗೆ ಹೆಚ್ಚಿನ ಸಮಯಾವಕಾಶ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟೆಸ್ಟ್‌ ಉಪ ನಾಯಕತ್ವದಿಂದ ರಹಾನೆಗೆ ಕೊಕ್‌ ಸಾಧ್ಯತೆ: ಸತತ ಕಳಪೆ ಫಾರ್ಮ್‌ ಅನ್ನು ಮುಂದುವರಿಸುತ್ತಿರುವ ಅಜಿಂಕ್ಯ ರಹಾನೆ ಅವರು ಭಾರತ ಟೆಸ್ಟ್‌ ತಂಡದ ಉಪ ನಾಯಕತ್ವವನ್ನು ಉಳಿಸಿಕೊಳ್ಳುವುದು ಬಹುತೇಕ ಅನುಮಾನವೆಂದು ಇದೇ ವೇಳೆ ಮೂಲಗಳು ದೃಢಪಡಿಸಿವೆ. ಗಾಯದಿಂದಾಗಿ ರಹಾನೆ ಇತ್ತೀಚೆಗೆ ಮುಕ್ತಾಯವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. "ನಿಸ್ಸಂಶಯವಾಗಿ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದಾರೆ. ಆದರೆ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಿಂದ ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ. ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿಲ್ಲವಾದರೆ, ಅವರನ್ನು ಉಪ ನಾಯಕನನ್ನಾಗಿ ಏಕೆ ಉಳಿಸಿಕೊಳ್ಳಬೇಕು? ರಹಾನೆಯನ್ನು ಕೆಳಗಿಳಿಸಿದರೆ, ರೋಹಿತ್‌ ಉಪ ನಾಯಕರಾಗಲಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಎರಡು ಪಂದ್ಯಗಳಲ್ಲಿಯೂ ರೋಹಿತ್ ಶರ್ಮಾ ಉಪ ನಾಯಕನಾಗಿ ಕಾರ್ಯನಿರ್ವಹಿಸಿದ್ದರು," ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Iq9MGa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...