ಮಕ್ಕಳ ಮತಾಂತರ ಆರೋಪ: ಕ್ಯಾಥೋಲಿಕ್ ಶಾಲೆ ಮೇಲೆ ಹಿಂದೂಪರ ಸಂಘಟನೆಗಳ ದಾಳಿ

ವಿದಿಶಾ: ಬಜರಂಗ ದಳ (Bajrang Dal) ಮತ್ತು ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಯಾಥೋಲಿಕ್ ಶಾಲೆಯೊಂದರ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿ ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯಪ್ರದೇಶದ ಜಿಲ್ಲೆಯ ಗಂಜ್ ಬಸೋಡಾ ತಾಲೂಕಿನ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಶಾಲೆಗೆ ಹಾನಿ ಮಾಡಲಾಗಿದೆ. ಎಂಟು ವಿದ್ಯಾರ್ಥಿಗಳನ್ನು ಮಾಡಲಾಗಿದೆ ಎಂಬ ಆರೋಪದಡಿ ಈ ದಾಳಿ ನಡೆದಿದೆ. ಆದರೆ ಶಿಕ್ಷಣ ಸಂಸ್ಥೆ ಆರೋಪವನ್ನು ನಿರಾಕರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಿಂದ 48 ಕಿಮೀ ದೂರದಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ 12.10ರ ವೇಳೆಗೆ ದಾಳಿ ನಡೆದಿದೆ. ಆಗ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಐಪಿಸಿಯ (IPC) ವಿವಿಧ ಸೆಕ್ಷನ್‌ಗಳ ಅಡಿ ಗಲಭೆ ಪ್ರಕರಣಗಳನ್ನು ದಾಖಲಿಸಲಾಗಿದೆ ಸಬ್ ಡಿವಿಷನ್ ಆಫೀಸರ್ ಆಫ್ ಪೊಲೀಸ್ (SDOP) ಭರತ್ ಭೂಷಣ್ ಶರ್ಮಾ ತಿಳಿಸಿದ್ದಾರೆ. ಶಾಲೆಯ ಆವರಣಕ್ಕೆ ಕಲ್ಲುಗಳು ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದು ನುಗ್ಗಿದ ಸುಮಾರು 300 ಜನರ ಗುಂಪು, ಅಲ್ಲಿರುವ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಕಟ್ಟಡದ ಗಾಜುಗಳಿಗೆ ಕಲ್ಲುಗಳನ್ನು ಎಸೆದು ಪುಡಿ ಮಾಡಿದ್ದಾರೆ. ಶಾಲೆಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವಾಗ 'ಜೈ ಶ್ರೀರಾಮ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಬ್ರದರ್ ಆಂಟನಿ ಟಿನುಮ್ಕಲ್ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ವಿಎಚ್‌ಪಿ ಪದಾಧಿಕಾರಿ ನೀಲೇಶ್ ಅಗರ್ವಾಲ್ ನಿರಾಕರಿಸಿದ್ದಾರೆ. ತಮ್ಮ ಗುಂಪು ಶಾಲಾ ಆವರಣದಲ್ಲಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದೆ. ಬಳಿಕ ಸ್ಥಳೀಯ ಆಡಳಿತಕ್ಕೆ ಮನವಿ ಪತ್ರ ನೀಡಿದೆ. ಶಾಲೆಯ ಮೇಲೆ ನಡೆದ ದಾಳಿ, ಗದ್ದಲಗಳಿಗೆ ವಿಎಚ್‌ಪಿ ಯಾವ ಕಾರಣಕ್ಕೂ ಹೊಣೆಗಾರನಲ್ಲ. ಶಾಲೆಯಲ್ಲಿ ಮತಾಂತರ ಆಗುತ್ತಿದೆ ಎಂದು ಅನೇಕ ಸಂಘಟನೆಗಳು ಕಳೆದ ಒಂದು ವಾರಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ತನಿಖೆಗೆ ಒತ್ತಾಯಿಸುತ್ತಿವೆ. ಬೇರೆ ರಾಜ್ಯಗಳಿಂದ ಕರೆದುಕೊಂಡು ಬಂದ ಬಡ ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅಕ್ಟೋಬರ್ 31ರಂದು ಎಂಟು ಹಿಂದೂ ವಿದ್ಯಾರ್ಥಿನಿಯರನ್ನು ಮತಾಂತರ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗ್ ಅವರೂ ವಿದಿಶಾ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ನೀಲೇಶ್ ತಿಳಿಸಿದ್ದಾರೆ. ಆದರೆ ಶಾಲೆಯಲ್ಲಿ ಇಂತಹ ಮತಾಂತರ ಚಟುವಟಿಕೆ ನಡೆದಿಲ್ಲ. ಅಂದಿನ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿದೆ. ಎಂಟು ಕ್ರೈಸ್ತ ವಿದ್ಯಾರ್ಥಿಗಳು ಹಿಂದೂ ಧರ್ಮದ ವೇಷಭೂಷಣ ಪ್ರದರ್ಶಿಸಿದ್ದರು. ಇದನ್ನು ಮತಾಂತರ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಶಾಲಾ ಆಡಳಿತ ಪ್ರತಿಪಾದಿಸಿದೆ.


from India & World News in Kannada | VK Polls https://ift.tt/3pBJEzx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...