ರಾಷ್ಟ್ರ ರಾಜಕೀಯದ‌ ಆಸಕ್ತಿ ಸಿದ್ದರಾಮಯ್ಯಗೆ ಇದ್ಯಾ; ಪದೇ ಪದೇ ಈ ವಿಚಾರ ಚರ್ಚೆ ಆಗುತ್ತಿರುವುದೇಕೆ?!

ಬೆಂಗಳೂರು: ವಿರೋಧ ಪಕ್ಷದ ನಾಯಕ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರಾ? ಹೌದು, ಇಂತಹದೊಂದು ಚರ್ಚೆ ರಾಜ್ಯ ನಲ್ಲಿ ಪದೇ ಪದೇ ನಡೆಯುತ್ತಿದೆ. ಆದರೆ ಇದರ ಹಿಂದೆ ಒಂದು ಉದ್ದೇಶ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರೇ ಹೇಳಿದಂತೆ ಎರಡು ಬಾರಿ ಅವರು ಸಂಸದ ಸ್ಥಾನಕ್ಕೆ ಸ್ಪರ್ಧೆ ನಡೆಸಿ ಸೋತಿದ್ದಾರೆ. ಇದಾದ ಬಳಿಕ ರಾಷ್ಟ್ರ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನನ್ನದೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ದೆಹಲಿ ಭೇಟಿಯ ಸಂದರ್ಭದಲ್ಲೂ ಇದೇ ವಿಚಾರ ಮುನ್ನಲೆಗೆ ಬಂದಿದೆ. ಸಿದ್ದರಾಮಯ್ಯ ಅವರಿಗೆ ಬುಲಾವಿನ ಹಿಂದೆ ರಾಷ್ಟ್ರ ರಾಜಕಾರಣದಲ್ಲಿ ಸ್ಥಾನ ಮಾನ‌ ನೀಡುವ ಉದ್ದೇಶ ಇದೆ ಎಂದು ಸುದ್ದಿಯಾಗುತ್ತಿದೆ. ಆದರೆ ಈ ವಿಚಾರವನ್ನು ಸಿದ್ದರಾಮಯ್ಯ ಮತ್ತೊಮ್ಮೆ ತಿರಸ್ಕಾರ ಮಾಡಿದ್ದಾರೆ. ರಾಷ್ಟ್ರರಾಜಕಾರಣ ದಲ್ಲಿ‌ ನನಗೆ ಆಸಕ್ತಿ‌ ಇಲ್ಲ‌. ನಮ್ಮಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಈ ಹಿಂದೆ ಆಹ್ವಾನಿಸಿದಾಗಲೇ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ರಾಜಕೀಯದಲ್ಲಿ‌ ಸಕ್ರಿಯನಾಗಿರುವವರೆಗೆ ರಾಜ್ಯಕ್ಕೆ ಸೀಮಿತವಾಗಿರುವೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾಗಾಂಧಿಯವರ ಜೊತೆಗಿನ ಭೇಟಿ‌‌ ಎಂದಿನಂತೆ ಸೌಹಾರ್ದಯುತವಾಗಿತ್ತು. ರಾಜ್ಯ ಮತ್ತು ರಾಷ್ಟ್ರದಲ್ಲಿ‌ ಕಾಂಗ್ರೆಸ್ ಸಂಘಟನೆಯ ಬಗ್ಗೆ ಚರ್ಚೆ ನಡೆಯಿತು. ರಾಷ್ಟ್ರರಾಜಕಾರಣಕ್ಕೆ ಅವರು ನನಗೆ ಆಹ್ವಾನ ನೀಡಿರಲಿಲ್ಲ. ಇವೆಲ್ಲ ಊಹಾಪೋಹದ ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಪದೇ ಪದೇ ಈ ಚರ್ಚೆ ಮುನ್ನಲೆಗೆ ಬರುತ್ತಿರುವುದೇಕೆ? ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೆ ಎಂಬ ಚರ್ಚೆ ಪದೇ ಪದೇ ಉದ್ದೇಶ ಪೂರ್ವಕವಾಗಿ ಮುನ್ನಲೆಗೆ ತರಲಾಗುತ್ತಿದೆ ಎಂಬ ಮಾತಿದೆ. ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವವರೇ ಈ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ ಎಂಬುವುದು ಸಿದ್ದರಾಮಯ್ಯ ಆಪ್ತರ ವಾದವಾಗಿದೆ. ಈ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸುವ ಉದ್ದೇಶ ಇದರ ಹಿಂದಿರುವ ತಂತ್ರಗಾರಿಕೆ ಎಂಬುವುದು ಇವರ ವಾದವಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದ ವದಂತಿಯೂ ಕಾಂಗ್ರೆಸ್ ವಲಯದಲ್ಲೂ ಹಲವು ಆಯಾಮದ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.


from India & World News in Kannada | VK Polls https://ift.tt/2YoQPkI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...