'ಇದು ನನಗೆ ತುಂಬಾ ಸುಲಭ' ಬ್ರಾವೋಗೆ ರೂಪಿಸಿದ್ದ ಗೇಮ್‌ ಪ್ಲಾನ್‌ ತಿಳಿಸಿದ ಹೆಟ್ಮಾಯೆರ್‌!

ದುಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಡೆತ್‌ ಓವರ್‌ಗಳಲ್ಲಿ ಡ್ವೇವ್‌ ಬ್ರಾವೋ ಅವರ ಬೌಲಿಂಗ್‌ನಲ್ಲಿ ತಾವು ರೂಪಿಸಿದ್ದ ಯೋಜನೆಯನ್ನು ಬ್ಯಾಟ್ಸ್‌ಮನ್‌ ಬಹಿರಂಗಪಡಿಸಿದ್ದಾರೆ. ಸೋಮವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 137 ರನ್‌ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 19.4 ಓವರ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ ಗೆಲುವಿನ ದಡ ಸೇರಿತ್ತು. ಈ ಗೆಲುವಿನೊಂದಿಗೆ ಡೆಲ್ಲಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿತು. ಅಂದಹಾಗೆ, ಚೆನ್ನೈ ಸೂಪರ್‌ ಕಿಂಗ್ಸ್ ನೀಡಿದ್ದ ಸಾಧಾರಣ ಗುರಿಯನ್ನು ಮುಟ್ಟಲು ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ಗಳು ಹರ ಸಾಹಸ ಮಾಡಿದ್ದರು. ಅದರಂತೆ ಕೊನೆಯ ಎರಡು ಓವರ್‌ಗಳಲ್ಲಿ ಶಿಮ್ರಾನ್‌ ಹೆಟ್ಮಾಯರ್‌ ಬಿರುಸಿನ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಕೇವಲ 18 ಎಸೆತಗಳಲ್ಲಿ 28 ರನ್‌ ಚೆಚ್ಚಿ ಡೆಲ್ಲಿಗೆ 3 ವಿಕೆಟ್‌ ಗೆಲುವು ತಂದುಕೊಟ್ಟಿದ್ದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಡ್ವೇನ್‌ ಬ್ರಾವೋ ಸವಾಲನ್ನು ಶಿಮ್ರಾನ್‌ ಹೆಟ್ಮಾಯೆರ್‌ ಸುಲಭವಾಗಿ ಮೆಟ್ಟಿ ನಿಂತಿದ್ದರು. ಪಂದ್ಯದ ಬಳಿಕ ಬ್ರಾವೋ ಬೌಲಿಂಗ್‌ಗೆ ತಾವು ರೂಪಿಸಿದ್ದ ಯೋಜನೆ ಏನೆಂಬುದನ್ನು ಡೆಲ್ಲಿ ಬ್ಯಾಟ್ಸ್‌ಮನ್‌ ಬಹಿರಂಗಪಡಿಸಿದ್ದಾರೆ. ವೆಸ್ಟ್ ಇಂಡೀಸ್‌ ಸಹ ಆಟಗಾರ ಡ್ವೇನ್‌ ಬ್ರಾವೋ ಅವರ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಹಾಗೂ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ಇದರಿಂದ ಅವರನ್ನು ಡೆತ್‌ ಓವರ್‌ಗಳಲ್ಲಿ ಎದುರಿಸುವುದು ಬಹಳಾ ಸುಲಭವಾಗಿದೆ ಎಂದು ಎಡಗೈ ಆಟಗಾರ ಬಹಿರಂಗಪಡಿಸಿದ್ದಾರೆ. "ಇದು ನನಗೆ ತುಂಬಾ ಸುಲಭ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ. ಡ್ವೇನ್‌ ಬ್ರಾವೋ ಅವರು ಫೀಲ್ಡ್‌ ನಿಲ್ಲಿಸಿಕೊಂಡು ವೈಡ್‌ ಅಗಿ ನನಗೆ ಬೌಲ್‌ ಮಾಡುತ್ತಾರೆಂದು ನನಗೆ ಗೊತ್ತಿತ್ತು. ಹಾಗಾಗಿ, ಮಿಡ್‌ ವಿಕೆಟ್‌ ಅಥವಾ ಬೇರೆ ಜಾಗವನ್ನು ತಪ್ಪಿಸಿ ಆಡುತ್ತಿದ್ದೆ. ಅದರಂತೆ ಯಶಸ್ವಿಯಾದೆ. ಈ ಬಗ್ಗೆ ನನಗೆ ಸಂತೋಷವಿದೆ," ಎಂದು ಹೇಳಿದರು. 137 ರನ್‌ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 98 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ವೇಳೆ ಶಿಮ್ರಾನ್‌ ಹೆಟ್ಮಾಯೆರ್‌ ಕ್ರೀಸ್‌ಗೆ ಬಂದಿದ್ದರು. ಈ ವೇಳೆ ಡೆಲ್ಲಿಗೆ 35 ಎಸೆತಗಳಿಗೆ 39 ರನ್ ಅಗತ್ಯವಿತ್ತು. ಅಲ್ಲದೆ, ಕೊನೆಯ 16 ಎಸೆತಗಳಿಗೆ 22 ರನ್‌ ಅಗತ್ಯವಿದ್ದ ವೆಳೆ ಡ್ವೇನ್‌ ಬ್ರಾವೋ ಎಸೆತದಲ್ಲಿ ಹೆಟ್ಮಾಯೆರ್‌ ಕ್ಯಾಚ್‌ ಅನ್ನು ಕೆ. ಗೌತಮ್‌ ಲಾಂಗ್‌ ಆಫ್‌ನಲ್ಲಿ ಕ್ಯಾಚ್‌ ಕೈ ಚೆಲ್ಲಿದ್ದರು. "ಈ ವೇಳೆ ನಾನು ಔಟ್‌ ಎಂದೇ ಭಾವಿಸಿದ್ದೆ ಹಾಗೂ ಕ್ಯಾಚ್‌ ಕೈ ಚೆಲ್ಲಬೇಕೆಂದು ದೇವರಲ್ಲಿ ಫ್ರಾರ್ಥಿಸಿದ್ದೆ. ಅದರಂತೆ ಆತ ನನ್ನ ಕ್ಯಾಚ್‌ ಬಿಟ್ಟರು. ಇದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. 19ನೇ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿ ಪಂದ್ಯವನ್ನು ಆದಷ್ಟು ಬೇಗ ಪಂದ್ಯವನ್ನು ಮುಗಿಸುವುದು ನನ್ನ ಯೋಜನೆಯಾಗಿತ್ತು," ಎಂದು ಹೇಟ್ಮಾಯೆರ್‌ ಹೇಳಿಕೊಂಡರು. "ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಂದ್ಯವನ್ನು ಆದಷ್ಟು ಬೇಗ ಮುಗಿಸುವುದು ನನ್ನ ಕೆಲಸವಾಗಿದೆ. ಅದರಂತೆ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಯಶಸ್ವಿಯಾಗಿ ಮುಗಿಸಿದ್ದೇನೆ. ಮುಂದಿನ ಪಂದ್ಯಗಳಲ್ಲಿಯೂ ಕೂಡ ಇದೇ ಕೆಲಸವನ್ನು ಮಾಡುತ್ತೇನೆ," ಎಂದು ಶಿಮ್ರಾನ್‌ ಹೆಟ್ಮಾಯೆರ್‌ ಭರವಸೆ ನೀಡಿದ್ದಾರೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಅ.8 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uIhXXG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...