ಅಮ್ಮನ ಅಕ್ರಮ ಸಂಬಂಧ ಪ್ರಶ್ನಿಸಿದ್ದ ಮಗ; ಪ್ರಿಯಕರನ ಜತೆ ಸೇರಿ ಮಗನ ಕೊಲೆಗೈದ ತಾಯಿ!

ಬೆಂಗಳೂರು: ತಾಯಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜತೆ ಸೇರಿ ತಾಯಿಯೇ ಹೆತ್ತ ಮಗನನ್ನೇ ಕೊಲೆಗೈದಿರುವ ಘಟನೆ ಹಲಸೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮರ್ಫಿಟೌನ್‌ ನಿವಾಸಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ನಂದು (16) ಕೊಲೆಯಾದ ಬಾಲಕ. ಕೊಲೆಗೈದ ಗೀತಾ (35), ಆಕೆಯ ಪ್ರಿಯಕರ ಆಟೋ ಚಾಲಕ ಶಕ್ತಿವೇಲು (24) ಬಂಧಿತ ಆರೋಪಿಗಳು. ಏನಿದು ಘಟನೆ? ಮರ್ಫಿಟೌನ್‌ ನಿವಾಸಿ ಗೀತಾ ಅವರಿಗೆ ಫೇಸ್‌ಬುಕ್‌ ಮೂಲಕ ಶಕ್ತಿವೇಲು ಪರಿಚಯವಾಗಿತ್ತು. ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಹಾಗಾಗಿ, ಶಕ್ತಿವೇಲು ಆಗಾಗ ಗೀತಾ ಮನೆಗೆ ಬಂದು ಹೋಗುತ್ತಿದ್ದ. ಇದರಿಂದ ಬೇಸತ್ತ ನಂದು ತನ್ನ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ. ಇದೇ ವಿಷಯದ ಸಂಬಂಧ ಇಬ್ಬರ ನಡುವೆ ಆಗಾಗ್ಗೆ ಜಗಳ ಕೂಡ ನಡೆದಿತ್ತು. ನಂದು, ಶಕ್ತಿವೇಲುನನ್ನು ತಮ್ಮ ಮನೆಗೆ ಬರಬೇಡವೆಂದು ಬೈದಿದ್ದ. ಆದರೂ ಸೋಮವಾರ ಶಕ್ತಿವೇಲು ಪಾನಮತ್ತನಾಗಿ ಗೀತಾ ಮನೆಗೆ ಬಂದಿದ್ದ. ಈ ವೇಳೆ ಮನೆಯಲ್ಲಿ ನಂದು ಇದ್ದು, ಇಬ್ಬರ ನಡುವೆ ಜಗಳವಾಗಿದೆ. ಶಕ್ತಿವೇಲು ಹಾಗೂ ಗೀತಾ ಇಬ್ಬರು ಸೇರಿ ನಂದುವಿನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. 17 ವರ್ಷಗಳ ಹಿಂದೆ ವಿವಾಹ ಗೀತಾ 17 ವರ್ಷಗಳ ಹಿಂದೆ ಪರಮೇಶ್ವರ್‌ ಎಂಬಾತನನ್ನು ವಿವಾಹವಾಗಿದ್ದಳು. ಪರಮೇಶ್ವರ್‌ ಮೊದಲೇ ವಿವಾಹಿತನಾಗಿದ್ದು, ಗೀತಾ ಎರಡನೇ ಪತ್ನಿಯಾಗಿದ್ದಳು. ಆದರೆ, ಪರಮೇಶ್ವರ್‌ ಮತ್ತು ಗೀತಾ ನಡುವೆ ವೈವಾಹಿಕ ಕಲಹ ಉಂಟಾಗಿ ಆರು ವರ್ಷಗಳ ಹಿಂದೆ ಇಬ್ಬರು ದೂರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3Dfj8kK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...