ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣದ ತನಿಖೆ ಸಿಬಿಐಗೆ: ಯೋಗಿ ಆದಿತ್ಯನಾಥ್

ಲಕ್ನೋ: ಸೋಮವಾರ ಸಂಜೆ ಪ್ರಯಾಗ್‌ರಾಜ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮುಖ್ಯಸ್ಥ ಅವರ ಸಾವಿನ ಪ್ರಕರಣವನ್ನು ಸರ್ಕಾರ ಸಿಬಿಐಗೆ ಒಪ್ಪಿಸಿದ್ದಾರೆ. 'ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ, ಅಖಾಡ ಪರಿಷದ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಖೇದಕರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ತನಿಖೆಗೆ ಶಿಫಾರಸು ಮಾಡಲಾಗಿದೆ' ಎಂದು ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ. ನರೇಂದ್ರ ಗಿರಿ ಅವರ ಪರಮಾಪ್ತ ಶಿಷ್ಯನಾಗಿದ್ದ ಆನಂದ್ ಗಿರಿ ಜತೆಗಿನ ಮನಸ್ತಾಪದ ಬಳಿಕ ಇಬ್ಬರೂ ಬೇರ್ಪಟ್ಟಿದ್ದರು. ಅದರಲ್ಲದೆ, ತಮ್ಮ ಶಿಷ್ಯನಿಂದ ಮಾನಸಿಕ ಕಿರುಕುಳ, ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವುದಾಗಿ ನರೇಂದ್ರ ಗಿರಿ ಅವರು ಮೃತಪಟ್ಟ ಕೊಠಡಿಯಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. ಆನಂದ್ ಗಿರಿ ಕಿರುಕುಳದಿಂದ ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆನಂದ್ ಗಿರಿ ಸೇರಿದಂತೆ ಮೂವರು ಶಿಷ್ಯರನ್ನು ಬಂಧಿಸಲಾಗಿದೆ. ಅವರ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿದೆ. ಇದು ಪೂರ್ವನಿಯೋಜಿತ ಕೊಲೆ ಎಂದು ಅವರ ಅನುಯಾಯಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ತನಿಖೆಗೆ 18 ಸದಸ್ಯರ ವಿಶೇಷ ತನಿಖಾ ತಂಡವನ್ನು ಕೂಡ ರಾಜ್ಯ ಪೊಲೀಸರು ರಚಿಸಿದ್ದಾರೆ. 'ಕೆಲವು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ತಪ್ಪಿತಸ್ಥರನ್ನು ಬಿಡುವುದಿಲ್ಲ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ವಿರೋಧಪಕ್ಷ ಕಾಂಗ್ರೆಸ್, ಸಿಬಿಐ ತನಿಖೆಗೆ ಆಗ್ರಹಿಸಿತ್ತು. ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಆಳ್ವಿಕೆ ವೇಳೆ 21 ಸನ್ಯಾಸಿಗಳ ಹತ್ಯೆ ಅಥವಾ ಅನುಮಾನಾಸ್ಪದ ಸಾವುಗಳು ನಡೆದಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. 'ಮರಣೋತ್ತರ ಪರೀಕ್ಷೆ ವರದಿ ಬರುವ ಮುನ್ನವೇ ಇದನ್ನು ಆತ್ಮಹತ್ಯೆ ಎಂದು ಪೊಲೀಸರು ಹೇಳಲು ಯಾವ ಒತ್ತಡ ಕಾರಣ? ಘಟನೆಯ ಹಿಂದಿನ ದಿನವಷ್ಟೇ ಮಹಾಂತ ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ನಡೆದಿದ್ದ ಮಾತುಕತೆ ಏನು? ಈ ವಿಚಾರಗಳನ್ನೂ ತನಿಖೆಗೆ ಒಳಪಡಿಸಬೇಕು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಪ್ರಚೋದನೆ ನೀಡಿದ ಅಂಶವಾದರೂ ಏನು?' ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಪ್ರಶ್ನಿಸಿದ್ದಾರೆ. ತಲೆಯಲ್ಲಿ ಗಾಯವಾಗಿತ್ತುನರೇಂದ್ರ ಗಿರಿ ಅವರ ಕೊಠಡಿಯಲ್ಲಿ ಸಿಕ್ಕ ಡೆತ್ ನೋಟ್, ಅವರು ಬರೆದಿರುವುದಲ್ಲ ಎಂದು ನಿರಂಜನಿ ಅಖಾಡ ಮಹಾಂತ ರವೀಂದ್ರ ಪುರಿ ವಾದಿಸಿದ್ದಾರೆ. ನೇಣು ಹಾಕಿಕೊಂಡ ಬಳಿಕ ವ್ಯಕ್ತಿಯ ತಲೆಗೆ ಗಾಯವಾಗಲು ಹೇಗೆ ಸಾಧ್ಯ? ಅವರ ಕಣ್ಣುಗಳು ಹೊರಗೆ ಬಂದಿರಲಿಲ್ಲ. ನಾಲಿಗೆ ಹೊರಚಾಚಿರಲಿಲ್ಲ. ಹೀಗಿರುವಾಗ ಅವರು ನೇಣು ಹಾಕಿಕೊಂಡು ಸಾಯಲು ಹೇಗೆ ಸಾಧ್ಯ? ಈ ಪತ್ರವನ್ನು ಯಾರೋ ಬಿಎ ಪದವೀಧರ ಬರೆದಿರುವಂತೆ ಕಾಣಿಸುತ್ತದೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3i1G0Mf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...