ಅಮೆರಿಕಕ್ಕೆ ಬಂದಿಳಿದ ಪ್ರಧಾನಿ ಮೋದಿ: ಮಳೆಯನ್ನೂ ಲೆಕ್ಕಿಸದೆ ಸ್ವಾಗತಿಸಿದ ಭಾರತೀಯ ಸಮುದಾಯ

ವಾಷಿಂಗ್ಟನ್: ಮೂರು ದಿನಗಳ ಭೇಟಿಗಾಗಿ ವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿನ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಸ್ವಾಗತಿಸಿದರು. ಅಧ್ಯಕ್ಷ ಅವರ ಸರ್ಕಾರದ ಹಿರಿಯ ಅಧಿಕಾರಿಗಳು, ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಹೂಗುಚ್ಛ ನೀಡಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದ ಹೊರಗೆ ವಾಹನದಿಂದ ಕೆಳಕ್ಕಿಳಿದ ಮೋದಿ, ಕಾಯುತ್ತಿದ್ದ ಅನಿವಾಸಿ ಭಾರತೀಯರೊಂದಿಗೆ ಸಂವಾದಿಸಿದರು. 2020ರ ಜನವರಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ತೀವ್ರಗೊಳ್ಳಲು ಆರಂಭಿಸಿದ ಸಂದರ್ಭದಿಂದ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಏಷ್ಯಾ ಹೊರಗೆ ಪ್ರಯಾಣ ಮಾಡಿದ್ದಾರೆ. ಮಳೆಯ ನಡುವೆಯೂ ಅಲ್ಲಿ ನೆರೆದಿದ್ದ ಜನರು, ಮೋದಿ ಅವರ ಹೆಸರನ್ನು ಕೂಗಿ ಉತ್ಸಾಹ ಪ್ರದರ್ಶಿಸಿ, ತ್ರಿವರ್ಣ ಧ್ವಜವನ್ನು ಬೀಸಿ ಸಂಭ್ರಮಿಸಿದರು. ಮೋದಿ ನಗುತ್ತಾ, ಎದುರುಗೊಂಡ ಭಾರತೀಯ ಸಮುದಾಯದ ಜನರ ಕೈಕುಲುಕಿದರು. 'ಬೆಚ್ಚನೆಯ ಸ್ವಾಗತ ನೀಡಿದ ವಾಷಿಂಗ್ಟನ್ ಡಿಸಿಯಲ್ಲಿನ ಭಾರತೀಯ ಸಮುದಾಯಕ್ಕೆ ಕೃತಜ್ಞತೆಗಳು. ನಮ್ಮ ಸಮುದಾಯ ನಮ್ಮ ಬಲ. ಭಾರತೀಯ ಸಮುದಾಯವು ಜಗತ್ತಿನಾದ್ಯಂತ ಸಾಧನೆ ಮಾಡುತ್ತಿರುವುದ ಶ್ಲಾಘನೀಯ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮೂರೂ ದಿನವೂ ಪ್ರಧಾನಿ ಮೋದಿ ಬಿಡುವಿಲ್ಲದ ಸತತ ಕಾರ್ಯಕ್ರಮಗಳನ್ನು ಹೊಂದಿದ್ದಾರೆ. ಗುರುವಾರ ಜಾಗತಿಕ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶುಕ್ರವಾರ ಶ್ವೇತಭವನಲ್ಲಿ ಜೋ ಬೈಡನ್ ಮತ್ತು ಪ್ರಧಾನಿ ಮೋದಿ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. ಜನವರಿಯಲ್ಲಿ ಜೋ ಬೈಡನ್ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಉಭಯ ನಾಯಕರ ನಡುವಿನ ಮೊದಲ ಸಭೆ ಇದಾಗಿದೆ. ನೂರು ಕೋಟಿ ಲಸಿಕೆಇದೇ ವೇಳೆ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ಕ್ವಾಡ್ ದೇಶಗಳ ಮೊದಲ ಮುಖಾಮುಖಿ ಸಭೆ ನಡೆಯಲಿದೆ. ಕ್ವಾಡ್ ಪಾಲುದಾರಿಕೆಯು 2022ರ ವೇಳೆಗೆ ಭಾರತದಲ್ಲಿ ಕನಿಷ್ಠ ನೂರು ಕೋಟಿ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲಿವೆ ಎಂದು ಜೋ ಬೈಡನ್ ಹೇಳಿದ್ದಾರೆ. ಕೋವಿಡ್ 19 ಅನ್ನು ಮಣಿಸಲು ಜತೆಯಾಗಿ ಕೆಲಸ ಮಾಡುವುದಕ್ಕಿಂತ ತುರ್ತು ಯಾವುದೂ ಇಲ್ಲ. ಇದರಿಂದ ಜಗತ್ತು ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ಉತ್ತಮ ಸಿದ್ಧತೆ ನಡೆಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.


from India & World News in Kannada | VK Polls https://ift.tt/3AzobLH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...