ತೊಕ್ಕೊಟ್ಟು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಮಜಲಿನಲ್ಲಿ ಅಬೀದ್ ಎಂಬವರ ಮನೆಯಿಂದ 700ಗ್ರಾಂ ಚಿನ್ನ ಹಾಗೂ 5ಲಕ್ಷ ರೂ. ನಗದು ಕಳವು ಮಾಡಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಕಳವು ನಡೆದ ಮನೆಯಲ್ಲಿ ಮುಂದಿನ ವಾರ ಮದುವೆ ಸಂಭ್ರಮವಿತ್ತು. ಪರಿಚಿತರ ಸಹಕಾರದಿಂದಲೇ ಕಳ್ಳತನ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಕೋಡಿಜಾಲ್ ಇಬ್ರಾಹಿಂ ಅವರ ಪುತ್ರ ಹಬೀಬ್ ಮನೆಯಲ್ಲಿ ಈ ಘಟನೆ ನಡೆದಿದೆ. ಹಬೀಬ್ ಅವರ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಮಲಗಿದ್ದಾಗ, ಯಾರಿಗೂ ಅರಿವಿಗೆ ಬಾರದಂತೆ ಕೃತ್ಯವೆಸಗಲಾಗಿದೆ. ಮನೆಯ ಮಹಡಿಯ ಮೇಲಿನ ಬಾಗಿಲ ಚಿಲಕ ಒಡೆದು ಮನೆ ಪ್ರವೇಶಿಸಿದ್ದರು. ಶ್ವಾನದಳ, ಬೆರಳಚ್ವು ತಜ್ಞರಿಂದ ಶೋಧ ಕಾರ್ಯ ನಡೆಯುತ್ತಿದೆ.
from India & World News in Kannada | VK Polls https://ift.tt/3d6TqmS