ಬಳ್ಳಾರಿ: ಇಲ್ಲಿನ ಕೊರ್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಭರತರೆಡ್ಡಿ ಹೆಸರಿನಡಿ ಅನಾಮಧೇಯ ವ್ಯಕ್ತಿಯೋರ್ವ ನಕಲಿ ಫೇಸ್ ಬುಕ್ ಖಾತೆ ತೆರೆದು, ಆ ಫೇಸ್ ಬುಕ್ ಖಾತೆಯ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ನಾರಾ ಭರತ್ ರೆಡ್ಡಿ ಯುವರ್ಸ್ ಫ್ರೆಂಡ್ಸ್ ಆನ್ ಫೇಸ್ ಬುಕ್ ಲೈವ್ಸ್ ಇನ್ ಹೊಸಪೇಟೆ (Nara your's in Facebook lives in Hospet) ಎಂಬ ಹೆಸರಿನಡಿ ಅನಾಮಧೇಯ ವ್ಯಕ್ತಿಯು ಫೇಸ್ ಬುಕ್ ಖಾತೆ ತೆರೆದಿದ್ದು, ಖುದ್ದಾಗಿ ಭರತ ರೆಡ್ಡಿ ಅವರೊಂದಿಗಿನ ಚಾಟಿಂಗ್ ಮಾಡಿ ಹಣದ ಬೇಡಿಕೆ ಇಟ್ಟಿ ರೋದು ಅಚ್ಚರಿ ಸಂಗತಿಯಾಗಿದೆ. ಈ ನಕಲಿ ಫೇಸ್ ಬುಕ್ ಖಾತೆಗೆ ಎನ್.ಭರತ ರೆಡ್ಡಿ ಅವರನ್ನ ಆಹ್ವಾನಿಸಿದ್ದಲ್ಲದೇ, ಅವರೊಂದಿಗೆ ಚಾಟಿಂಗ್ ನಡೆಸುವ ಮೂಲಕ ನಮ್ಮ ಸಂಬಂಧಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನನಗೆ ತುರ್ತಾಗಿ 13000 ರೂ.ಗಳ ಹಣ ಬೇಕಾಗಿದೆ. ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಈ ಹಣ ಸಂದಾಯ ಮಾಡುವಂತೆ ಅನಾಮಧೇಯ ವ್ಯಕ್ತಿ ಕೇಳಿದ್ದಾನೆ. ಆಗ ಭರತರೆಡ್ಡಿ, ಹಣವನ್ನು ನಿಮ್ಮ ಕೈಗೆ ತಲುಪಿಸುವೆ. ಅಥವಾ ನಿಮ್ಮ ಸಂಬಂಧಿಕರು ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅಂತ ಹೇಳಿ ಅಲ್ಲಿಗೆ ಹಣ ತಲುಪಿ ಸೋದಾಗಿ ತಿಳಿಸಿದ್ದಾರೆ. ಆದರೆ, ಆ ಅನಾಮಧೇಯ ವ್ಯಕ್ತಿಯಿಂದ ಯಾವುದೇ ರೀತಿಯ ಸ್ಪಂದನೆ ಬಾರದ ಹಿನ್ನಲೆ ಈ ಫೇಸ್ ಬುಕ್ ಖಾತೆ ನಕಲಿ ಎಂದು ಖಚಿತಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಾರಾ ಭರತ್ ರೆಡ್ಡಿ, ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆಯನ್ನ ರಚಿಸಲಾಗಿದೆ. ಮತ್ತು ಹಣವನ್ನ ಕಳುಹಿಸಲು ಜನರನ್ನು ಕೇಳುತ್ತಿದ್ದಾರೆ. ಈ ಬಗ್ಗೆ ಜನತೆ ಎಚ್ಚರವಹಿಸಿ, ಇಂತಹ ಯಾವುದೇ ಸಂದೇಶಗಳಿಗೆ ಪ್ರತಿ ಕ್ರಿಯಿಸದಂತೆ ಕೋರಿದ್ದಾರೆ.
from India & World News in Kannada | VK Polls https://ift.tt/3ffrgbX