ಜಿಲ್ಲಾಡಳಿತ ನಡೆ ಗ್ರಾಮದ ಕಡೆ, ಗದಗ ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು ಗ್ರಾಮ ವಾಸ್ತವ್ಯ!

: ಸರಕಾರದ ನಿರ್ದೇಶನದಂತೆ‌ ಜಿಲ್ಲಾಡಳಿತ ನಡೆ ಹಳ್ಳಿಯ ಕಡೆ ಅನ್ನೋ ಕಾರ್ಯಕ್ರಮದಡಿ ಗದಗ ಜಿಲ್ಲೆಯಲ್ಲಿಯೂ ಮಾ.21ರಂದು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ‌ ಕಾರ್ಯಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿದೆ. ಗ್ರಾಮದಲ್ಲಿರೋ ಕಂದಾಯ ಇಲಾಖೆ‌ ಸಂಬಂಧಿಸಿದಂತೆ‌ ಗ್ರಾಮದ ಅನೇಕ ಸಮಸ್ಯೆಗಳನ್ನ ಸ್ಥಳದಲ್ಲೇ ಬಗೆಹರಿಸುವ ಪ್ರಯತ್ನ ನಡೆಸಲಿದ್ದಾರೆ. ಇನ್ನು ಲಿಂಗದಾಳ‌ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸುಂದರೇಶಬಾಬು ಅವರನ್ನ ಗ್ರಾಮದ ಸರಕಾರಿ‌ ಪ್ರೌಢಶಾಲಾ ವಿದ್ಯಾರ್ಥಿನಿಯರು ಗುಲಾಬಿ ಹೂ‌ ನೀಡುವ ಮೂಲಕ ಬರಮಾಡಿಕೊಂಡರು. ನಂತರ ಶಾಲಾ‌‌‌ ಆವರಣದಲ್ಲಿ ಸಸಿಗೆ‌ ನೀರುಣಿಸುವ ಮೂಲಕ‌ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ ಸಹ ಲಿಂಗದಾಳ ಗ್ರಾಮಕ್ಕೆ ಭೇಟಿ‌ ನೀಡಿದರು. ಈ ವೇಳ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸಿ.ಎಂ ಯಡಿಯೂರಪ್ಪನವರ ಸರ್ಕಾರ ಜನರ ಜೊತೆಗೆ‌ ಇದೆ‌ ಅನ್ನೋದನ್ನ ತೋರಿಸಿಕೊಟ್ಟಿದೆ. ಅಧಿವೇಶನ ರಜೆ ಹಿನ್ನೆಲೆ ನಾನೂ ಸಹ ಗ್ರಾಮಕ್ಕೆ ಆಗಮಿಸಿದ್ದು ಈಗಾಗಲೇ ಗ್ರಾಮದಲ್ಲಿ‌ ಅಭಿವೃದ್ಧಿ ಕಾರ್ಯಗಳಾಗಿವೆ. ಉಳಿದ ಅಭಿವೃದ್ಧಿ‌ ಕಾಮಗಾರಿಗಳ ಬಗ್ಗೆ ಗಮನ ನೀಡಲಾಗುವುದು ಎಂದು ಹೇಳಿದರು. ಇ‌ನ್ನು ಇದೇ‌ ವೇಳೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಮಾತನಾಡಿ, ಕಂದಾಯ ಇಲಾಖೆಗೆ ಸಂಭವಿಸಿದ ವಿಷಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಮಾಸಾಶನ, ಪಹಣಿ ಪತ್ರಿಕೆಯ ದೋಷಗಳು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಮಸ್ಯೆಗಳನ್ನ ಬಗೆ ಹರಿಸುತ್ತೇವೆ. ಇನ್ನು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದರೆ ಅಥವಾ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಫೋಕಸ್ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲಿ ಬಂದು ಚರ್ಚೆ ಮಾಡುತ್ತಾರೆ. ಅತೀ ಹೆಚ್ಚು ಚರ್ಚೆಗಳು ಗ್ರಾಮದ ಅಭಿವೃದ್ಧಿ ಬಗ್ಗೆ ಆಗುತ್ತವೆ. ಸಾಧ್ಯವಾದಷ್ಟು ಸಮಸ್ಯೆ ಇತ್ಯರ್ಥ ಮಾಡಲು ಪ್ರಯತ್ನ ಮಾಡುತ್ತೇನೆ ಅಂದರು. ಆದರೆ, ಒಂದೇ ದಿನದಲ್ಲಿ ಕೆಲವು ಸಮಸ್ಯೆ ಬಗೆ ಹರಿಸುವುದು ಕಷ್ಟವಾಗುತ್ತದೆ. ಇನ್ನು ಕೆಲವು ಸಮಸ್ಯೆ ಇತ್ಯರ್ಥಕ್ಕೆ ಅನುದಾನದ ಅವಶ್ಯವಿರುತ್ತೆ. ಹೀಗಾಗಿ ಅಂತಹ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ‌ ಎಂದು ಡಿಸಿ‌ ಸುಂದರೇಶಬಾಬು ತಿಳಿಸಿದ್ದಾರೆ. ಅಲ್ಲದೇ ಗ್ರಾಮ ವಾಸ್ತವ್ಯದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಅಂತ ವಿನಂತಿ ಮಾಡಿಕೊಳ್ಳುತ್ತೇನೆ. ಇನ್ನು ಗ್ರಾಮದಲ್ಲಿರುವ ದೊಡ್ಡ ಸಮಸ್ಯೆಗಳ ಬಗ್ಗೆ ಅರ್ಜಿ ಕೊಡಿ ಹೊರತು ಸಣ್ಣಪುಟ್ಟ ಕೆಲಸದ ಬಗ್ಗೆ ಅರ್ಜಿ ಕೊಡಬೇಡಿ. ಯಾಕೆಂದರೆ ಅಂಥ ಸಮಸ್ಯೆಗಳನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಿಸಿಕೊಳ್ಳಬಹುದು ಎಂದು ಡಿಸಿ ಸುಂದರೇಶಬಾಬು ತಿಳಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಜೊತೆಗೆ ಸಿಇಒ ಭರತ್, ಎಸಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.


from India & World News in Kannada | VK Polls https://ift.tt/3vKrcqA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...