ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲ್ಲಿಸಿದ ಪತ್ನಿ!

ಬೆಂಗಳೂರು: ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿಸಿದ್ದ ಮಹಿಳೆ ಸೇರಿ 9 ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಾ.19ರಂದು ಮೈಸೂರಿನ ಮೊಹಮ್ಮದ್‌ ಶಫಿ (32)ಎಂಬುವರನ್ನು ಗುರಪ್ಪನಪಾಳ್ಯದ ಬಂಬೂ ಬಜಾರ್‌ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತನ ಪತ್ನಿ ತಸ್ಲೀಂ ಬಾನು(29), ಈಕೆಯ ಪ್ರಿಯಕರ ಅಪ್ಸರ್‌ ಖಾನ್‌(41) ಮತ್ತು ಸುಪಾರಿ ಹಂತಕರಾದ ಜಯನಗರದ ತಬ್ರೇಜ್‌ ಪಾಷ(26), ಸೈಯದ್‌ ವಾಸೀಂ(26), ವೆಂಕಟೇಶ(19), ಭರತ್‌(18), ಚೇತನ್‌(19), ಇಬ್ರಾಹಿಂ(19) ಬಂಧಿಸಲಾಗಿದೆ. ಒಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ಡಿಸಿಪಿ ಶ್ರೀನಾಥ್‌ ಮಹಾದೇವ್‌ ತಿಳಿಸಿದರು. ರಿಯಲ್‌ ಎಸ್ಟೇಟ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದ ಮೊಹಮ್ಮದ ಶಫಿ ಮತ್ತು ತಸ್ಲೀಂ ಬಾನು ನಡುವೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿದೆ. ದಂಪತಿ ಮೈಸೂರಿನಲ್ಲಿ ನೆಲೆಸಿದ್ದರು. 2 ವರ್ಷಗಳ ಹಿಂದೆ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ತಸ್ಲೀಂ ಬಾನು ಮತ್ತು ಅಪ್ಸರ್‌ ಖಾನ್‌ ಪರಿಚಯವಾಗಿದ್ದರು. ಆಕರ್ಷಿತರಾಗಿ ಇಬ್ಬರು ಮುಂದುವರೆಸಿದ್ದರು. ಈ ಸಂಬಂಧಕ್ಕೆ ಶಫಿ ಅಡ್ಡಿಯಾಗುತ್ತಾನೆ ಎಂದು ಯೋಚಿಸಿ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದರು. ಬೆಂಗಳೂರಿಗೆ ಕರೆಸಲು ಪ್ಲ್ಯಾನ್! ಮೈಸೂರಿನಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ 75 ಲಕ್ಷ ರೂ. ಹೂಡಿಕೆ ಮಾಡಿಸಿ ನಿನಗೆ 5 ಲಕ್ಷ ರೂ. ಕಮಿಷನ್‌ ಕೊಡಿಸುತ್ತೇನೆ ಎಂದು ಹೇಳಿದ ಅಪ್ಸರ್‌ಖಾನ್‌, ಶಫಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ. ಮಾ.19ರಂದು ರಿಯಲ್‌ ಎಸ್ಟೇಟ್‌ ವ್ಯವಹಾರದ ಕಮಿಷನ್‌ ಕೊಡುತ್ತೇನೆ ಬೆಂಗಳೂರಿಗೆ ಬಾ ಎಂದು ಕರೆಸಿಕೊಂಡ ಅಪ್ಸರ್‌ಖಾನ್‌, ಕೊಲೆ ಮಾಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು. ಇದಕ್ಕೂ ಮೊದಲು ಒಮ್ಮೆ ಮಾಟ ಮಂತ್ರ ಮಾಡಿ ಶಫಿ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದು, ಅದರಲ್ಲಿ ವಿಫಲರಾಗಿದ್ದರು. ನಂತರ ಕ್ರಿಮಿನಲ್‌ ಹಿನ್ನೆಲೆ ಇರುವ ತಬ್ರೇಜ್‌ ಹಾಗೂ ವಾಸೀಂನನ್ನು ಸಂಪರ್ಕಿಸಿ ಸುಪಾರಿ ನೀಡಿದ್ದರು. ತಲಾ 2 ಲಕ್ಷ ರೂ. ನಗದು ಹಾಗೂ ಖರ್ಚನ್ನು ನೀಡುವುದಾಗಿ ಸುಪಾರಿ ಒಪ್ಪಂದ ಮಾಡಿಕೊಂಡಿದ್ದರು. ಉಡುಗೊರೆ ವಶಕ್ಕೆ ಅಪ್ಸರ್‌ ಖಾನ್‌, ತಸ್ಲೀಂಗೆ ನೀಡಿದ್ದ ಉಡುಗೊರೆ, ಸುಪಾರಿ ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3rnMXJt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...