ಸದನದಲ್ಲಿ ಜಾರಕಿಹೊಳಿ ಸಿ.ಡಿ ಪ್ರದರ್ಶಿಸಿದ ಕಾಂಗ್ರೆಸ್: ಕಲಾಪದ ಆರಂಭದಲ್ಲೇ ಫೈಟ್!

ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಡುವಿನ ಹೋರಾಟ ಮತ್ತೊಂದು ಹಂತ ತಲುಪಿದ್ದು, ವಿಧಾನಸಭೆಯಲ್ಲಿ ಇಂದು(ಮಾ.23-ಮಂಗಳವಾರ) ಸದಸ್ಯರು ಜಾರಕಿಹೊಳಿ ಸಿ.ಡಿ ಪ್ರದರ್ಶಿಸಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೇ, ಜಾರಕಿಹೊಳಿ ಸಿ.ಡಿ ಪ್ರದರ್ಶಿಸಿ ಕಾಂಗ್ರೆಸ್ ಸದಸ್ಯರು, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರು ಏಕಾಏಕಿ ಸಿ.ಡಿ ಪ್ರದರ್ಶನ ಮಾಡಿದ್ದರಿಂದ ಅವಕ್ಕಾದ ಆಡಳಿತ ಪಕ್ಷದ ಸದಸ್ಯರು, ಕಾಂಗ್ರೆಸ್ ವರ್ತನೆಯನ್ನು ಖಂಡಿಸಿದರು. ಸಿ.ಡಿ ಪ್ರಕರಣದಲ್ಲಿ ಸರ್ಕಾರ ಯಾರನ್ನೋ ರಕ್ಷಿಸಲು ಮುಂದಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಸದಸ್ಯರು ಸಿ.ಡಿ ಪ್ರದರ್ಶನ ಮಾಡುತ್ತಿದ್ದಂತೇ ಕೋಲಾಹಲ ಉಂಟಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದ್ದಾರೆ. ಪ್ರಶ್ನೋತ್ತರ ಕಲಾಪ ಆರೆಂಭವಾಗುತ್ತಿದ್ದಂತೇ ಕಾಂಗ್ರೆಸ್ ಸದಸ್ಯರಿಂದ ಸದನದಲ್ಲಿ ಜಾರಕಿಹೊಳಿ ಸಿ.ಡಿ ಪ್ರದರ್ಶನವಾಗಿದ್ದು, ದಿನವೀಡಿ ಕಲಾಪದಲ್ಲಿ ಸಿ.ಡಿ ಪ್ರಕರಣ ಸದ್ದು ಮಾಡಲಿದೆ ಎಂಬುದುನ್ನು ಖಚಿತಪಡಿಸಿದೆ.


from India & World News in Kannada | VK Polls https://ift.tt/3lINfct

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...