ವಾಷಿಂಗ್ಟನ್: ಅಮೆರಿಕದ ಕೊಲೊರಾಡೊದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಬಂಧೂಕುಧಾರಿಯೊಬ್ಬನ ಅಟ್ಟಹಾಸಕ್ಕೆ ಹತ್ತು ಮಂದಿ ಹತರಾಗಿದ್ದಾರೆ. ಹೌದು, ಅಮೆರಿಕದ ಕೊಲೊಡಾಡೊದಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳದಿಂದ ಮಧ್ಯ ವಯಸ್ಸಿನ ಶರ್ಟ್ ಧರಿಸದೆ ಇದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸುವ ವೇಳೆ ಆತನ ಕಾಲು ಹಾಗೂ ದೇಹ ರಕ್ತಸಿಕ್ತವಾಗಿತ್ತು. ನೋಡು ನೋಡುತ್ತಿದ್ದಂತೆ ಗುಂಡಿನ ದಾಳಿಯನ್ನು ದುಷ್ಕರ್ಮಿ ನಡೆಸಿದ್ದ. ಏಕಾಏಕಿ ಗುಂಡೇಟಿಗೆ ಹಲವರು ಕೆಳಗುರುಳಿದ್ದಾರೆ. ಪೊಲೀಸ್ ಆತನನ್ನು ತಡೆಯಲು ಹೋದಾಗ ಪೊಲೀಸ್ ಅಧಿಕಾರಿ ಮೇಲೆಯೂ ಬಂದೂಕುಧಾರಿ ದಾಳಿ ನಡೆಸಿ ಕೊಂದು ಹಾಕಿದ್ದಾನೆ. ಇನ್ನು ಗುಂಡಿನ ದಾಳಿ ನಡೆದ ಸ್ಥಳ ರಕ್ತದಿಂದ ಆವೃತವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಶಂಕಿತ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಶೂಟೌಟ್‌ಗೆ ಪ್ರಮುಖ ಕಾರಣವೇನು ಎನ್ನುವುದು ಇನ್ನಷ್ಟೆ ತನಿಖೆಯಿಂದ ಬೆಳಕಿಗೆ ಬರಬೇಕಷ್ಟೆ. ಸೂಪರ್ ಮಾರ್ಕೆಟ್‌ನ ಸುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
from India & World News in Kannada | VK Polls https://ift.tt/3tQTdLv