ಬೆಟ್ಟದಪುರ: ನಗರದಲ್ಲಿ 5400 ಬಸ್‌ಗಳು ಸಂಚಾರ ನಡೆಸುತ್ತಿದ್ದರೂ ಹಲವು ಭಾಗಗಳಲ್ಲಿ ರಾತ್ರಿ ವೇಳೆ ಬಸ್‌ಗಳ ಸಂಚಾರದ ಕೊರತೆ ಉಂಟಾಗಿ ಸಾರ್ವಜನಿಕರು ತಮ್ಮ ಸ್ಥಳಗಳಿಗೆ ತೆರಳಲು ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದಾರೆ. ಲಾಕ್‌ಡೌನ್ ಮುಗಿದು ಎಲ್ಲೆಡೆ ಕಾರ್ಯಚಟುವಟಿಕೆಗಳು ಆರಂಭಗೊಂಡಿದ್ದರೂ, ಬಿಎಂಟಿಸಿ ಬಸ್‌ಗಳು ಮಾತ್ರ ಪೂರ್ಣಾವಧಿ ಪ್ರಮಾಣದಲ್ಲಿ ಸೇವೆ ಆರಂಭಿಸಿಲ್ಲ. ಹೀಗಾಗಿ, ಉದ್ಯೋಗಿಗಳು, ಕೂಲಿ ಕಾರ್ಮಿಕರು ಹಾಗೂ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸುವ ಸಾರ್ವಜನಿಕರಿಗೆ ತಮ್ಮ ಸ್ಥಳಗಳಿಗೆ ತೆರಳಲು ಬಸ್‌ಗಳಿಲ್ಲದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ನಗರದ ಬಹುತೇಕ ಕೈಗಾರಿಕೆಗಳು, ಹೋಟೆಲ್, ಗಾರ್ಮೆಂಟ್ಸ್, ಬೇಕರಿಗಳು, ಮರಳಿ ಹಳಿಗೆ ಬಂದಿರುವುದರಿಂದ ಹಿಂದಿನಂತೆಯೇ ಉದ್ಯೋಗಿಗಳು ಕೆಲಸಕ್ಕೆ ತೆರಳಬೇಕಾಗಿದೆ. ಈ ಕ್ಷೇತ್ರದ ಬಹುತೇಕ ಉದ್ಯೋಗಿಗಳು ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಬಿಎಂಟಿಸಿ ಬಸ್ ಸೇವೆ ಅನಿವಾರ್ಯವಾಗಿದೆ. ರಾತ್ರಿ 9.30ರ ಬಳಿಕ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೇವಲ ಆಯ್ದ ಭಾಗಗಳಿಗಷ್ಟೇ ಬಸ್ ಸಂಚಾರವಿರುತ್ತದೆ. ಇನ್ನು ಹಲವು ಭಾಗಗಳಿಗೆ ಬಸ್‌ಗಳೇ ಇರುವುದಿಲ್ಲ. ಮೆಜೆಸ್ಟಿಕ್‌ಗೆ ಹೋಗಿ ವಿಚಾರಿಸಿದರೂ ಪ್ರಯೋಜನವಿಲ್ಲ. ರಾತ್ರಿ 10ರವರೆಗೂ ಬಸ್ ಸಂಚರಿಸಬೇಕಲ್ಲವೇ'' ಎಂದು ಕೇಳಿದರೆ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬರುವುದಿಲ್ಲ. ಹಾಗಾಗಿ, ಬಸ್ ಹೊರಡುವುದಿಲ್ಲ. ಪರ್ಯಾಯ ಮಾರ್ಗ ನೋಡಿಕೊಳ್ಳಿ ಎನ್ನುತ್ತಾರೆ ಎಂದು ಪ್ರಯಾಣಿಕ ಶಿವನಂಜಪ್ಪ ಹೇಳಿದರು. ರಾತ್ರಿ ಪಾಳಿಯವರಿಗೆ ತೀವ್ರ ತೊಂದರೆಬೆಳಗಿನ ಸಮಯದಲ್ಲಿಸ್ವಲ್ಪ ತಡವಾದರೂ ಬಸ್ ಸೇವೆ ದೊರೆಯುತ್ತದೆ. ಆದರೆ ರಾತ್ರಿ ಪಾಳಿಯಲ್ಲಿ ಹಾಗೂ ತಡ ರಾತ್ರಿ (ಸುಮಾರು 9 ಗಂಟೆಯ ಮೇಲೆ) ಕೆಲಸ ಮುಗಿಸಿ ಮನೆಗೆ ತೆರಳುವವರು ಬಸ್‌ಗಾಗಿ ಕಾದು ಕಾದು ಹೈರಾಣಾಗುತ್ತಾರೆ. ಗಂಟೆಗಟ್ಟಲೆ ಕಾದರೂ ಬಸ್ ಸಿಗದಿದ್ದಾಗ ಅನಿವಾರ್ಯವಾಗಿ ಪರ್ಯಾಯ ವಾಹನದತ್ತ ಮುಖ ಮಾಡುತ್ತಾರೆ. ಇನ್ನೂ ಕೆಲವರು ನಡೆದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ಪೀಣ್ಯ, ಕಾಮಾಕ್ಷಿಪಾಳ್ಯ, ರಾಜಾಜಿನಗರ, ಹೆಗಡೆ ನಗರ, ಮಲ್ಲೇಶಪಾಳ್ಯ, ದೊಡ್ಡ ಬಿದರಕಲ್ಲು, ಹೆಬ್ಬಾಳ, ಜ್ಞಾನಭಾರತಿ, ಮಲ್ಲತ್ತಹಳ್ಳಿ, ಲಗ್ಗೆರೆ, ಕತ್ರಿಗುಪ್ಪೆ, ಬನಶಂಕರಿ, ಬ್ಯಾಂಕ್ ಕಾಲೊನಿ, ಹನುಮಂತನಗರ, ನೆಟ್ಟಕಲ್ಲಪ್ಪ ವೃತ್ತ ಮತ್ತು ಏರ್‌ಪೋರ್ಟ್ ಸೇರಿದಂತೆ ಹಲವು ಭಾಗಗಳಲ್ಲಿ ಬಸ್‌ಗಳ ಕೊರತೆಯಿದೆ. ಬಸ್ ನಿಲ್ದಾಣದಲ್ಲೇ ಕಾಯುವ ಪ್ರಯಾಣಿಕರು:ನೈರುತ್ಯ ರೈಲ್ವೆ ಸೇವೆ ಪ್ರಾರಂಭವಾಗಿರುವುದರಿಂದ ರಾಜ್ಯ, ಹೊರ ರಾಜ್ಯಗಳಿಂದಲೂ ನಗರಕ್ಕೆ ಪ್ರಯಾಣಿಕರು ಬರುತ್ತಾರೆ. ರಾತ್ರಿ ವೇಳೆ ಬಂದಿಳಿದ ಪ್ರಯಾಣಿಕರಿಗೆ ತಮ್ಮ ಸ್ಥಳಗಳಿಗೆ ತೆರಳಲು ಬಸ್‌ಗಳಿರುವುದಿಲ್ಲ. ತಡರಾತ್ರಿವರೆಗೂ ಬಸ್‌ಗಾಗಿ ಕಾದು ಬರದಿದ್ದಾಗ ಖಾಸಗಿ ವಾಹನಗಳ ಮೊರೆ ಹೋಗುತ್ತಾರೆ. ಖಾಸಗಿ ವಾಹನಗಳಿಂದ ಸುಲಿಗೆ:ರಾತ್ರಿ ವೇಳೆ ಬಸ್ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ, ಟ್ಯಾಕ್ಸಿಗಳು ಮನಬಂದಂತೆ ಪ್ರಯಾಣಿಕರಿಂದ ವಸೂಲಿ ಮಾಡುತ್ತಿವೆ. ರಾತ್ರಿ ವೇಳೆಯಾಗಿರುವುದರಿಂದ ವಿಧಿಯಿಲ್ಲದೆ ಚಾಲಕರು ಕೇಳಿದಷ್ಟೇ ಹಣ ನೀಡಿ ಪ್ರಯಾಣಿಕರು ಪ್ರಯಾಣಿಸಬೇಕಾಗುತ್ತದೆ. ಮೆಜೆಸ್ಟಿಕ್‌ನಿಂದ ಶೇಷಾದ್ರಿಪುರಂಗೆ ತೆರಳಲು 100 ರೂ. ನೀಡಬೇಕು. ಮೆಜೆಸ್ಟಿಕ್‌ನಿಂದ ವಿಜಯನಗರಕ್ಕೆ ತೆರಳಲು 200 ರೂ. ನೀಡಬೇಕು. 8 ಕಿ.ಮೀ. ದೂರದ ವ್ಯಾಪ್ತಿಗೆ ತೆರಳಬೇಕಾದರೆ 500 ರೂ. ಪ್ರಯಾಣ ಶುಲ್ಕ ವಿಧಿಸುತ್ತಾರೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ಮಹಿಳೆಯರ ಅಸಹಾಯಕತೆ:ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿ ಮನೆ ಸೇರಲು ರಾತ್ರಿ 9 ಗಂಟೆಗೆ ಹೊರಟು ಬಸ್ ನಿಲ್ದಾಣಕ್ಕೆ ಬಂದರೆ, ಬಿಎಂಟಿಸಿ ಬಸ್ ಇರುವುದಿಲ್ಲ. ರಸ್ತೆಯಲ್ಲೇ ಒಬ್ಬಂಟಿಗರಾಗಿ ಬಸ್ ಕಾಯಬೇಕು. ದಾರಿಹೋಕರೆಲ್ಲ ನಮ್ಮನ್ನೇ ನೋಡುತ್ತಿರುತ್ತಾರೆ. ಜತೆಗೆ ಕುಡುಕರ ಹಾವಳಿ ಬೇರೆ ಇದೆ. ಗಂಟೆಗಟ್ಟಲೇ ಕಾದು ಕಾದು ಸಾಕಾಗಿ ಆಟೋ ಹಿಡಿದು ಮನೆ ಸೇರಬೇಕಾದ ಸ್ಥಿತಿ ಎದುರಾಗಿದೆ ಎಂದು ಮಲ್ಲೇಶಪಾಳ್ಯದ ಕಮಲಮ್ಮ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಕೋವಿಡ್ ಮುನ್ನ ಬಸ್‌ಗಳ ಸಂಚಾರ: 6400 ನಿತ್ಯ ಪ್ರಯಾಣಿಕರ ಸಂಖ್ಯೆ: 35 ಲಕ್ಷ ಮಂದಿ ಆದಾಯ: 3.5 ಕೋಟಿ ರೂ. === ಕೋವಿಡ್ ಬಳಿಕ ಬಸ್‌ಗಳ ಸಂಚಾರ: 5400 ನಿತ್ಯ ಪ್ರಯಾಣಿಕರ ಸಂಖ್ಯೆ: 22 ಲಕ್ಷ ಮಂದಿ ಆದಾಯ: 2.5 ಕೋಟಿ ರೂ. 11 ಗಂಟೆಯವರೆಗಿತ್ತು ಸೇವೆರಾತ್ರಿ 9 ಗಂಟೆಗೆ ಮೆಟ್ರೊ ರೈಲು ಸಂಚಾರ ಕೊನೆಗೊಳ್ಳುತ್ತದೆ. ಹೀಗಾಗಿ, ಬಿಎಂಟಿಸಿ ಬಸ್‌ಗಳು ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಕೋವಿಡ್‌ಗೂ ಮುನ್ನ ರಾತ್ರಿ 11 ಗಂಟೆಯವರೆಗೂ ಬಸ್‌ಗಳ ಸಂಚಾರದ ವ್ಯವಸ್ಥೆ ಇತ್ತು. ಇದೀಗ 9 ಗಂಟೆಗೆ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವುದರಿಂದ ಸಮಸ್ಯೆ ಉಂಟಾಗುತ್ತಿದೆ. ತಡರಾತ್ರಿಯವರೆಗೆ ಕೇವಲ ಕೇಂದ್ರ ನಿಲ್ದಾಣಗಳ ಕಡೆಗಳಷ್ಟೇ ಬಸ್ ಸಂಚಾರವಿರುತ್ತದೆ.
from India & World News in Kannada | VK Polls https://ift.tt/3cg40bU