ಮಾಸ್ಕ್‌ ಹಾಕದಿದ್ದರೆ ಪೊಲೀಸ್‌, ಹೆಲ್ತ್‌ ಇನ್‌ಸ್ಪೆಕ್ಟರ್‌, ಪಿಡಿಒ, ಗ್ರಾಮ ಪಂ. ಕಾರ್ಯದರ್ಶಿಗೆ ದಂಡ ವಿಧಿಸಲು ಅಧಿಕಾರ

ಬೆಂಗಳೂರು: ಮಾಸ್ಕ್‌ ಧರಿಸದವರಿಗೆ ಈ ವರೆಗೆ ಮಾರ್ಷಲ್‌ಗಳು ಮಾತ್ರವೇ ದಂಡ ಹಾಕುತ್ತಿದ್ದರೆ. ಆದರೆ, ಪರಿಷ್ಕೃತ ಆದೇಶದ ಪ್ರಕಾರ ಇನ್ನು ಮುಂದೆ ಹೆಡ್‌ಕಾನ್ಸ್‌ಟೆಬಲ್‌ ಕೂಡ ದಂಡವನ್ನು ವಿಧಿಸಬಹುದಾಗಿದೆ. ಜೊತೆಗೆ, ಬಿಲ್‌ ಕಲೆಕ್ಟರ್‌, ಹೆಲ್ತ್‌ ಇನ್‌ಸ್ಪೆಕ್ಟರ್‌, ಪಿಡಿಒ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೂಡ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸತತ ಎರಡನೇ ದಿನ ಕೊರೊನಾ ಪ್ರಕರಣಗಳು 2 ಸಾವಿರಕ್ಕಿಂತ ಹೆಚ್ಚು ದಾಖಲಾಗುತ್ತಿದ್ದಂತೆ ಸರಕಾರ ಕಠಿಣ ಕ್ರಮ ಜಾರಿ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿಮಾಸ್ಕ್‌ ಧರಿಸದವರಿಗೆ 250 ರೂ. ದಂಡ ವಿಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸುವಂತೆ ಸರಕಾರ ಸೂಚಿಸಿದೆ. ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ 250 ರೂ., ಮದುವೆ ಹಾಲ್‌, ಸಭೆ, ಸಮಾರಂಭಗಳಲ್ಲಿಸೀಮಿತ ಜನರನ್ನು ಹೊರತುಪಡಿಸಿ ಹೆಚ್ಚು ಜನ ಇದ್ದರೆ, ಮಾಸ್ಕ್‌ ಧರಿಸದೇ ಇದ್ದರೆ ಅಂತಹ ಪಾರ್ಟಿ ಹಾಲ್‌‍ಗಳಿಗೆ 5 ಸಾವಿರ ರೂ., ಎಸಿ ಹಾಲ್‌ಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಸ್ಟಾರ್‌ ಹೋಟೆಲ್‌‍ಗಳಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ನಡೆಸಿದರೆ 10 ಸಾವಿರ ದಂಡ ವಿಧಿಸುವ ಕುರಿತು ಸರಕಾರದ ಆದೇಶದಲ್ಲಿತಿಳಿಸಲಾಗಿದೆ. - ಎಷ್ಟು ಜನ ಸೇರಬಹುದು? - ವಿವಾಹ ಸೇರಿದಂತೆ ಇತರೆ ಸಭೆ- ಸಮಾರಂಭಗಳಿಗೆ ಒಳಾಂಗಣ ಸಭಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನ ಸೇರಲು ಅನುಮತಿ ನೀಡಲಾಗಿದೆ. ಹುಟ್ಟುಹಬ್ಬದ ಸಮಾರಂಭಗಳಿಗೆ ಹೊರಾಂಗಣದಲ್ಲಿ 100 ಹಾಗೂ ಒಳಾಂಗಣ ಸಭಾಂಗಣದಲ್ಲಿ 50 ಜನರಿಗೆ ಮಾತ್ರ ಅವಕಾಶ. ಸಾವಿನ ಮನೆಯಲ್ಲಿ, ಮನೆಯ ಒಳಗೆ 50, ಹೊರಗೆ 100 ಜನರು, ಧಾರ್ಮಿಕ ಕಾರ್ಯಕ್ರಮದಲ್ಲಿ ಹೊರಾಂಗಣವಾದರೆ 500, ರಾಜಕೀಯ ಕಾರ್ಯಕ್ರಮ ಹೊರಾಂಗಣವಾದರೆ 500 ಜನರಿಗೆ ಅನುಮತಿ ನೀಡಲಾಗಿದೆ. ಇದಕ್ಕೂ ಹೆಚ್ಚು ಜನ ಸೇರಿದರೆ ದಂಡ ವಿಧಿಸಲಾಗುತ್ತದೆ.


from India & World News in Kannada | VK Polls https://ift.tt/31giAdk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...