ಮಹಾಬಲೇಶ್ವರ ಹೆಗಡೆ ಕಲ್ಕಣಿ, ಬೆಂಗಳೂರು: ಒಂದು ಕಡೆ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಅಭಿಯಾನ ಹಿನ್ನಡೆ ಅನುಭವಿಸಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಶುಕ್ರವಾರ ಕೊರೊನಾ ಕೇಸು 1587 ಪ್ರಕರಣ ದಾಖಲಾಗಿದ್ದು, ಬಹು ಕಾಲದ ಬಳಿಕ ಬೆಂಗಳೂರು ಒಂದರಲ್ಲೇ 1000 ಕೇಸುಗಳ ಗಡಿ ದಾಟಿದೆ. ಕೋವಿಡ್ ವಿರುದ್ಧ ರಕ್ಷಣೆ ನೀಡುವ ಏಕೈಕ ಆಸರೆ ಲಸಿಕೆ ಎನ್ನುವುದು ಸ್ಪಷ್ಟವಾಗಿದ್ದರೂ ಅದನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ. ರಾಜ್ಯದಲ್ಲಿ ದಿನಕ್ಕೆ 3 ಲಕ್ಷ ಮಂದಿಗೆ ಲಸಿಕೆ ನೀಡುವ ಪ್ಲ್ಯಾನ್ ಇದೆಯಾದರೂ ಕಳೆದ ಮಾರ್ಚ್ 16ರಂದು ಶೇ. 38ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಶುಕ್ರವಾರಕ್ಕೆ ಅದು ಶೇ. 40ನ್ನೂ ದಾಟಿಲ್ಲ. ಕೊರೊನಾ ಅತಿ ಹೆಚ್ಚು ಆತಂಕ ಸೃಷ್ಟಿಸಿರುವ ಬೆಂಗಳೂರಿನಲ್ಲೇ ಶೇ. 30ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಆರಂಭವಾಗಿ 63 ದಿನಗಳಾದ್ರೂ ನಿರೀಕ್ಷಿತ ಮಟ್ಟ ತಲುಪದೆ ಇರುವುದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯೂ ಆಗಿದೆ. ಆರಂಭದಲ್ಲಿನಂಬರ್ 1 ಸ್ಥಾನದಲ್ಲಿದ್ದ ಕರ್ನಾಟಕ ಈಗ 17ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದಲ್ಲಿಜನರು ಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ. ತ್ವರಿತಗೊಳಿಸಲು ಸಲಹೆ ಕೊರೊನಾ ತಡೆಗೆ ಲಸಿಕೆಯೊಂದೇ ಮಾರ್ಗವಾಗಿರುವುದರಿಂದ ಈ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಬೇಕು ಎಂದು ತಜ್ಞರ ತಂಡ ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. 2ನೇ ಅಲೆ ಹರಡುವ ಈ ಸಂದರ್ಭದಲ್ಲಿಲಸಿಕೆ ಹಾಕುವ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೂ ಬಾರದ ಲಸಿಕೆ ಕೇಂದ್ರವು ರಾಜ್ಯಕ್ಕೆ ಮೊದಲ ಹಂತದಲ್ಲಿ30 ಲಕ್ಷ ಲಸಿಕೆ ಕಳುಹಿಸಿದೆ. ಇದರಲ್ಲಿ21.30 ಲಕ್ಷ ಲಸಿಕೆ ಈಗಾಗಲೇ ಬಳಕೆಯಾಗಿದೆ. ಇನ್ನು ಬಾಕಿ ಇರುವುದು ಕೇವಲ 7.70 ಲಕ್ಷ ಮಾತ್ರ. ಈಗಾಗಲೇ ಮತ್ತಷ್ಟು ಲಸಿಕೆಗೆ ಬೇಡಿಕೆ ಇಟ್ಟಿದ್ದರೂ ಕೇಂದ್ರ ಸರಕಾರ ಕಳುಹಿಸಿಕೊಡುವ ಖಾತರಿ ನೀಡಿಲ್ಲ. ಶುಕ್ರವಾರ ಲಸಿಕೆ ಪಡೆದವರು ಒಟ್ಟು ಲಸಿಕಾ ಕೇಂದ್ರಗಳು 3488 ದಿನದ ಗುರಿ ಇದ್ದದ್ದು 3 ಲಕ್ಷ 60 ವರ್ಷ ಮೇಲಿನವರು 88780 45-60 ವರ್ಷದವರು 22978 ಕೊರೊನಾ ಯೋಧರು 07561 ಒಟ್ಟು ಪಡೆದವರು 1,19,319 ಗುರಿಸಾಧನೆ ಶೇ. 40 ಕೋವಿಡ್ ಲಸಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವಿಡ್ ಲಸಿಕೆ ಪಡೆದುಕೊಳ್ಳಿ. ಇದು ನಿಮ್ಮ ಕುಟುಂಬದ ಮತ್ತು ಸಮಾಜದ ಸುರಕ್ಷತೆ ಖಚಿತಪಡಿಸುತ್ತದೆ. - ಬಿ.ಎಸ್. ಯಡಿಯೂರಪ್ಪ, ಸಿಎಂ ಸೋಂಕು ನಿಯಂತ್ರಿಸಲು ಎಲ್ಲರೂ ಲಸಿಕೆ ಪಡೆದುಕೊಳ್ಳುವುದು ಮುಖ್ಯ. ಮೊದಲು ಎರಡು ಲಕ್ಷ ಗುರಿ ಹಾಕಿಕೊಂಡಿದ್ದೆವು. ಈಗ ದಿನಕ್ಕೆ ಮೂರು ಲಕ್ಷ ಗುರಿ ಇಟ್ಟಿದ್ದೇವೆ. - ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವರು ಲಸಿಕೆಗೆ ನಿರ್ಲಕ್ಷ್ಯ ಬೇಡ
- ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಶ್ರೀರಕ್ಷೆ.
- ಲಸಿಕಾ ಕೇಂದ್ರಕ್ಕೆ ನೇರ ಹೋಗಿ ಇಲ್ಲವೇ ಕೋವಿನ್ ವೆಬ್‌ಸೈಟ್‌ನಲ್ಲಿನೋಂದಾಯಿಸಿ ಪಡೆಯಬಹುದು. ಆಶಾ ಕಾರ್ಯಕರ್ತೆಯರೂ ಮನೆಗೆ ಬರುತ್ತಾರೆ.
- ಎಲ್ಲಸರಕಾರಿ ಆಸ್ಪತ್ರೆಗಳಲ್ಲಿಒಟ್ಟಾರೆ 3500 ಕೇಂದ್ರಗಳಲ್ಲಿಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ250 ರೂ. ನೀಡಬೇಕಷ್ಟೆ.
- ವಯಸ್ಸಿನ ದೃಢೀಕರಣಕ್ಕೆ ಆಧಾರ್ ಇಲ್ಲವೇ ಮತದಾರರ ಗುರುತಿನ ಚೀಟಿ ಒಯ್ದರೆ ಸಾಕು.
- ಸಾರ್ವಜನಿಕರು ನಿರ್ಲಕ್ಷ್ಯ ಬಿಡಬೇಕು, ಸರಕಾರ ಅಭಿಯಾನ ತ್ವರಿತಗೊಳಿಸಬೇಕು.
- ಕೋವಿಡ್ ಪರೀಕ್ಷೆ ಮಾದರಿಯಲ್ಲೇ ಲಸಿಕೆಗೂ ಕ್ರಮ ಕೈಗೊಳ್ಳಬೇಕು.
- ಖಾಸಗಿ ಪಾಲುದಾರಿಕೆಗೂ ಹೆಚ್ಚು ಅವಕಾಶ ನೀಡಬೇಕು.
from India & World News in Kannada | VK Polls https://ift.tt/3cPHciz