ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ರಾಗಿ ಮುದ್ದೆ ತಿನ್ನುವ ಸ್ಪರ್ಧೆ, ಗ್ರಾಮೀಣ ಆಟಗಳನ್ನು ಆಡುವ ಸ್ಪರ್ಧೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಆಯೋಜನೆ ಮಾಡಲಾಗುತ್ತಿದೆ. ಮಾ.5ರಂದು ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರಿನಲ್ಲಿ ಸ್ಪರ್ಧೆ ಆಯೋಜನೆಗೊಳ್ಳುತ್ತಿದ್ದು ಅಧಿಕ ಕರೆದವರಿಗೆ 25 ಸಾವಿರ ನಗದು ಬಹುಮಾನವಿರಲಿದ್ದು ಹೀಗಾಗಿ ಅತ್ಯುತ್ತಮ ಹಾಲು ಕರೆಯುವ ಕೌಶಲವುಳ್ಳವರಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಲಿದೆ. ಯಾರಿಂದ ಸ್ಪರ್ಧೆ?ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಜಂಟಿ ಸಹಯೋಗದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, 3 ಹಂತಗಳ ನಗದು ಘೋಷಿಸಲಾಗಿದೆ. ಜತೆಗೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತನಿಗೂ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮಾ. 4ರ ಮಧ್ಯಾಹ್ನ 12 ಗಂಟೆಯೊಳಗೆ 100ರೂ. ಶುಲ್ಕದೊಂದಿಗೆ ಸ್ಪರ್ಧೆ ನಡೆಯುವ ಜಾಗದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನಿಬಂಧನೆಗಳಿವೆ ನೋಡಿ ಬಿಡಿ
- ಕಿವಿ ಓಲೆ ಅಳವಡಿಸಿದ ಹಸುವಿನೊಂದಿಗೆ ನೋಂದಣಿ ಕಡ್ಡಾಯ
- ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿಸಿದ ದೃಢೀಕರಣ ಪತ್ರ ತರಬೇಕು
- ದಿನಕ್ಕೆ ಕನಿಷ್ಠ 20ಲೀ. ಹಾಲು ಕರೆಯುವ ಹಸುಗಳಿಗೆ ಮಾತ್ರ ಎಂಟ್ರಿ
- ಹಸುವಿನ ಮಾಲೀಕರು, ಹಾಲು ಕರೆಯುವ ಒಬ್ಬರಿಗೆ ಮಾತ್ರ ಅವಕಾಶ
- ಮಾ.5ರಂದು ಬೆಳಗ್ಗೆ 6.30ಕ್ಕೆ ಮತ್ತು ಸಂಜೆ 5.30ಕ್ಕೆ ತೀರ್ಪುಗಾರರ ಮುಂದೆ ಹಾಲು ಕರೆಯಬೇಕು
- 20 ನಿಮಿಷ ಕಾಲಾವಕಾಶದಲ್ಲಿ ಹಾಲು ಕರೆಯಬೇಕು.
- ಹಾಲಿನ ಇಳುವರಿಯಲ್ಲಿ5 ಕಿಲೋಗಿಂತ ಹೆಚ್ಚಿನ ವ್ಯತ್ಯಾಸವಿದ್ದರೆ ಸ್ಪರ್ಧೆಯಿಂದ ಅನರ್ಹ
- ಪ್ರಥಮ : 25 ಸಾವಿರ
- ದ್ವಿತೀಯ : 20 ಸಾವಿರ
- ತೃತೀಯ : 10 ಸಾವಿರ
- ಉಳಿದವರಿಗೆ ಸಮಾಧಾನಕರ ಬಹುಮಾನ(ಪ್ರಮಾಣ ಪತ್ರ, ಮೊಮೆಂಟೋ)
- ಪ್ರವೇಶ ಶುಲ್ಕ 100ರೂ.
- ಮಾ.5ರಂದು ಬೆಳಗ್ಗೆ 6.30ಕ್ಕೆ, ಸಂಜೆ 5.30
- ಸ್ಥಳ: ಯಲಿಯೂರು, ದೇವನಹಳ್ಳಿ ತಾಲೂಕು
from India & World News in Kannada | VK Polls https://ift.tt/3uKZqtK