ಮದ್ಯ ಸೇವನೆಗಿರುವ ಕಾನೂನುಬದ್ಧ ಕನಿಷ್ಠ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದ ದಿಲ್ಲಿ‌ ಸರಕಾರ!

ಹೊಸದಿಲ್ಲಿ: ಸೇವನೆಗೆ ಈ ತನಕ ದಿಲ್ಲಿ ಯುವಕರು ತಮ್ಮ 25ನೇ ವಯಸ್ಸಿನ ತನಕ ಕಾಯಬೇಕಿತ್ತು. ಈಗ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರಕಾರವು 21 ವರ್ಷಕ್ಕೆ ಇಳಿಸಿದೆ. ಮದ್ಯ ಸೇವನೆಗಿರುವ ಕಾನೂನುಬದ್ಧ ಕನಿಷ್ಠ ವಯಸ್ಸನ್ನು ಇಳಿಸಲು ದಿಲ್ಲಿ ಸಂಪುಟವು ಸೋಮವಾರ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಪ್ರಕಟಿಸಿದ್ದಾರೆ. ''ಸಚಿವರ ಸಮಿತಿಯ ಶಿಫಾರಸಿನ ಅನ್ವಯ ನೂತನ ಅಬಕಾರಿ ನೀತಿಯನ್ನು ರೂಪಿಸಲಾಗಿದೆ. ಮದ್ಯಪಾನಕ್ಕೆ ಕಾನೂನು ಬದ್ಧ ವಯಸ್ಸನ್ನು ಇಳಿಸಿದ್ದರೂ, ಹೊಸ ಮದ್ಯದಂಗಡಿಗಳಿಗೆ ಅವಕಾಶ ನೀಡಿಲ್ಲ,'' ಎಂದು ವಿವರಿಸಿದ್ದಾರೆ. ದಿಲ್ಲಿಯಲ್ಲಿನ ಶೇ.60ರಷ್ಟು ಮದ್ಯದಂಗಡಿಗಳನ್ನು ರಾಜ್ಯ ಸರಕಾರವು ನಿರ್ವಹಿಸುತ್ತಿದೆ. ಅಬಕಾರಿ ಇಲಾಖೆಯಲ್ಲಿನ ಸುಧಾರಣೆಗಳ ಪರಿಣಾಮ ಆದಾಯವು ಶೇ.20ರಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ.


from India & World News in Kannada | VK Polls https://ift.tt/397oBxk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...