ಬಿಬಿಎಂಪಿ ಬಜೆಟ್‌ಗೆ ಕ್ಷಣಗಣನೆ; ಬೆಳಗ್ಗೆ 10 ಗಂಟೆಗೆ ಆಡಳಿತಾಧಿಕಾರಿ ಗೌರವ್ ಗುಪ್ತರಿಂದ ಬಜೆಟ್‌ ಮಂಡನೆ

ಬೆಂಗಳೂರು: ಬಿಬಿಎಂಪಿಯ 2021-22ನೇ ಸಾಲಿನ ಆಯವ್ಯಯವು ಆಡಳಿತಾಧಿಕಾರಿ ಗೌರವ್‌ ಗುಪ್ತ ಅಧ್ಯಕ್ಷತೆಯಲ್ಲಿ ಮಲ್ಲೇಶ್ವರದಲ್ಲಿನ ಐಪಿಪಿ ತರಬೇತಿ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ಮಂಡನೆಯಾಗಲಿದೆ. ಬಜೆಟ್‌ ಗಾತ್ರವು 8 ಸಾವಿರ ಕೋಟಿ ರೂ.ಗಳಿಗೆ ಸೀಮಿತವಾಗಿರುವ ಸಾಧ್ಯತೆಗಳಿವೆ. ಪ್ರಸಕ್ತ ಸಾಲಿನ ಬಜೆಟ್‌, ಆದಾಯದ ನೈಜ ಲೆಕ್ಕಾಚಾರಕ್ಕೆ ಅನುಗುಣವಾಗಿ ವಾಸ್ತವಿಕವಾಗಿರಬಹುದೆಂದು ನಿರೀಕ್ಷಿಸಲಾಗಿದೆ. 2015-16ರಲ್ಲಿ ಪಾಲಿಕೆಯ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್‌ ಅವರು 5411 ಕೋಟಿ ರೂ. ವೆಚ್ಚದ ಬಜೆಟ್‌ ಮಂಡಿಸಿದ್ದರು. ಇದೀಗ ಆಡಳಿತಾಧಿಕಾರಿಯಾಗಿರುವ ಗೌರವ್‌ ಗುಪ್ತ ಆಯವ್ಯಯವನ್ನು ಮಂಡನೆ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಆದಾಯ ಸ್ವೀಕೃತಿಗಳನ್ನು ಪರಿಗಣಿಸದೆ, ಬಜೆಟ್‌ಗೆ ಅನುಮೋದನೆ ನೀಡುತ್ತಿರುವುದರಿಂದ ಪಾಲಿಕೆಯ ಹಣಕಾಸು ನಿರ್ವಹಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿರೀಕ್ಷಿತ ಆದಾಯ ಬರದಿದ್ದರೂ ವೆಚ್ಚಗಳಿಗೆ ಒದಗಿಸಿರುವ ಅನುದಾನಕ್ಕೆ ಅನುಗುಣವಾಗಿ ಜಾಬ್‌ ಸಂಖ್ಯೆಗಳನ್ನು ಪಡೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳ ಅಂತರ ಹೆಚ್ಚಾಗುತ್ತಿದೆ. ಹೀಗಾಗಿಯೇ, ಗುತ್ತಿಗೆದಾರರಿಗೆ 22 ಸಾವಿರ ಕೋಟಿಗಿಂತ ಹೆಚ್ಚು ಬಾಕಿ ನೀಡಬೇಕಿದೆ. ಹಾಗಾಗಿ, ಈ ಸಲ ಪಾಲಿಕೆಯ ಆದಾಯದ ನೈಜ ಲೆಕ್ಕಾಚಾರಗಳನ್ನು ಮರೆ ಮಾಚಿ, ವಾಸ್ತವವಲ್ಲದ ಬಜೆಟ್‌ ಮಂಡಿಸುವ ಪರಿಪಾಠಕ್ಕೆ ಇತಿಶ್ರೀ ಹಾಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಬಿಬಿಎಂಪಿಯ ಆಸ್ತಿ ತೆರಿಗೆ, ಇತರೆ ವರಮಾನ, ರಾಜ್ಯ ಸರಕಾರ ಮತ್ತು ಕೇಂದ್ರದಿಂದ ನೀಡಲಿರುವ ಅನುದಾನ ಆಧರಿಸಿ ಬಜೆಟ್‌ ಮಂಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. 2021-22ನೇ ಸಾಲಿನ ಆಯವ್ಯಯದ ಗಾತ್ರವು 8,000 ಕೋಟಿ ರೂ.ಗಳಿಗೆ ಸೀಮಿತವಾಗಿರಲಿದೆ. 2020-21ನೇ ಸಾಲಿನಲ್ಲಿ ಬಿಜೆಪಿ ಆಡಳಿತವು ಮಂಡಿಸಿದ 11715.15 ಕೋಟಿಗೆ ಹೋಲಿಸಿದರೆ, ಈ ಸಲ 3715 ಕೋಟಿ ರೂ. ಕಡಿಮೆ ವೆಚ್ಚದ ಆಯವ್ಯಯ ಮಂಡಿಸುವ ಸಾಧ್ಯತೆಗಳಿವೆ.


from India & World News in Kannada | VK Polls https://ift.tt/3stw4OW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...