ಅಬಕಾರಿ ಆದಾಯಕ್ಕೆ ಕತ್ತರಿ ಹಾಕಿದ ಕೊರೊನಾ, ಲಾಕ್‌ಡೌನ್, 'ವರ್ಕ್ ಫ್ರಂ‌ ಹೋಂ‌'..!

ಬೆಂಗಳೂರು: ಅಬಕಾರಿ ಇಲಾಖೆ ಹೆಚ್ಚಳಗೊಳಿಸಲು ವರ್ಕ್ ಫ್ರಂ‌ ಹೋಂ‌ ಸಂಸ್ಕೃತಿ ಕೈ ಬಿಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಅಬಕಾರಿ ಸಚಿವ ನಾಗೇಶ್‌ ಹೇಳಿದ್ದಾರೆ. ಅಬಕಾರಿ ಇಲಾ ಖೆಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದ ಅಧಿಕಾರಿಗಳೊಂದಿಗೆ ಪ್ರಗತಿ ಪರಿ ಶೀಲನಾ ಸಭೆ ನಡೆಸಿದ ವೇಳೆ ಅವರು ಈ ವಿಷಯ ತಿಳಿಸಿದರು. 'ಕೊರೊನಾ, ಲಾಕ್‌ಡೌನ್‌, ವರ್ಕ್ ಫ್ರಮ್‌ ಹೋಮ್‌ ಸಂಸ್ಕೃತಿಯಿಂದಾಗಿ ಇಲಾಖೆಯ ಆದಾಯವು ಕಡಿಮೆಯಾಗಿದೆ' ಎಂದ ನಾಗೇಶ್, 'ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಆದರೆ ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಆದಾಯ ಹೆಚ್ಚಳವಾಗಿರುವುದು ಪ್ರಶಂಸನೀಯ' ಎಂದರು. 'ರಾಜ್ಯದ ತರೆ ಜಿಲ್ಲೆಗಳಲ್ಲೂ ಇಲಾಖೆಯ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಅಧಿಕಾರಿಗಳಿಗೆ ನಾಗೇಶ್ ಸೂಚಿಸಿದರು. 'ಅಕ್ರಮ, ನಕಲಿ , ಮಾದಕ ವಸ್ತುಗಳ ಬಳಕೆಯನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಅಬಕಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು' ಎಂದೂ ಸಚಿವ ನಾಗೇಶ್ ಸೂಚನೆ ನೀಡಿದ್ದಾರೆ. 'ಅಬಕಾರಿ ಅಧಿಕಾರಿಗಳು ಮತ್ತು ಉಪ ನಿರೀಕ್ಷಕರಿಗೆ ಹೊಸ ವಾಹನಗಳನ್ನು ಪೂರೈಸಲಾಗುವುದು. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳನ್ನು ಸ್ವೀಕರಿಸಿ ಕೂಡಲೇ ಕ್ರಮ ಜರುಗಿಸಬೇಕು' ಎಂದು ಸಚಿವರು ಸೂಚನೆ ನೀಡಿದ್ದಾರೆ.


from India & World News in Kannada | VK Polls https://ift.tt/2LdjD95

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...