ಚೀನಾದಲ್ಲಿ 'ಕೊರೊನಾ ವೈರಸ್' ಸಂಹಾರ ಮಾಡ್ತಿದ್ದಾಳೆ ರಾಖಿ ಸಾವಂತ್..! ನಾಸಾ ಔಷಧ ಕೊಡ್ಬೇಕಂತೆ, ಮೋದಿ ಪ್ರಾರ್ಥನೆ ಮಾಡಬೇಕಂತೆ..!

ಮುಂಬಯಿ: ತಮ್ಮ ವಿವಾದಾತ್ಮಕ ಮಾತುಗಳಿಂದ, ಹುಚ್ಚಾಟಗಳಿಂದಲೇ ಹೆಸರಾಗಿರುವ , ಇದೀಗ ಮತ್ತೊಮ್ಮೆ ಹಾಸ್ಯದ ವಸ್ತುವಾಗಿದ್ದಾರೆ. ವಿಶ್ವಾದ್ಯಂತ ನಿದ್ರೆಗೆಡಿಸಿರುವ ಕೊರೊನಾ ವೈರಸ್‌ ಕೊಲ್ಲೋಕೆ ಆಕೆ ಹೊರಟಿದ್ಧಾಳೆ..! ಆಕೆ ‘ಕೊರೊನಾ ವೈರಸ್‌ ಕೊಲ್ಲುವ’ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಸೆಲ್ಫಿ ವಿಡಿಯೋ ಮಾಡಿಕೊಂಡಿರುವ ರಾಖಿ ಸಾವಂತ್, ವಿಮಾನವೊಂದರಲ್ಲಿ ಕುಳಿತಿದ್ದಾರೆ. ಚೈನಾ ಮಾದರಿಯ ಕಂದು ಬಣ್ಣದ ಕ್ಯಾಪ್ ಧರಿಸಿದ್ದಾರೆ. ತಮ್ಮ ‘ಭಾಷಣ’ದ ಆರಂಭದಲ್ಲೇ ತಾವು ಚೀನಾಗೆ ಹೋಗ್ತಿರೋದಾಗಿ ರಾಖಿ ಘೋಷಿಸುತ್ತಾರೆ. ಚೀನಾದಲ್ಲಿ ಎಲ್ಲ ಕರೋನಾ ವೈರಸ್‌ಗಳನ್ನೂ ಕೊಲ್ಲೋದಾಗಿ ರಾಖಿ ಪಣ ತೊಡುತ್ತಾರೆ..! ಬಳಿಕ ವಿಮಾನದಲ್ಲಿದ್ದ ಸಹ ಪ್ರಯಾಣಿಕರತ್ತ ಕ್ಯಾಮೆರಾ ತಿರುಗಿಸುವ ರಾಖಿ ಸಾವಂತ್, ಇವರೆಲ್ಲರೂ ನನ್ನ ಜೊತೆ ಬರುತ್ತಿರುವ ಯೋಧರು ಎಂದು ಬಣ್ಣಿಸುತ್ತಾಳೆ. ನಾವೆಲ್ಲರೂ ಸೇರಿಕೊಂಡು ಡೆಡ್ಲಿ ವೈರಸ್‌ಅನ್ನು ನಿರ್ಮೂಲನೆ ಮಾಡೋದಾಗಿ ಘೋಷಿಸುತ್ತಾಳೆ. ಬನ್ನಿ ಎಲ್ಲರೂ ಚೀನಾಗೆ ಹೋಗೋಣ, ವೈರಸ್ ವಿರುದ್ಧ ಹೋರಾಡೋಣ, ಕೊಂದು ಬರೋಣ ಎಂದು ರಾಖಿ ಸಾವಂತ್ ‘ಕರೆ’ ಕೊಡುತ್ತಾರೆ. ಸಹಪ್ರಯಾಣಿಕರೂ ತಮಾಷೆಯಾಗಿ ರಾಖಿಗೆ ದನಿ ಗೂಡಿಸುತ್ತಾರೆ. ಇದೇ ವೇಳೆ ತಮ್ಮ ವಿಡಿಯೋದಲ್ಲಿ ಪ್ರಧಾನಿ ಮೋದಿ ಹೆಸರನ್ನೂ ರಾಖಿ ಸಾವಂತ್ ಎಳೆದು ತರುತ್ತಾರೆ. ಪ್ರಧಾನಿಯವರೇ ನನಗಾಗಿ ಪ್ರಾರ್ಥಿಸಿ, ನಾನು ಹೋರಾಡಲು ಹೋಗುತ್ತಿದ್ದೇನೆ. ಇನ್ಮುಂದೆ ಯಾರೂ ಖಾಯಿಲೆ ಬೀಳೋದಿಲ್ಲ ಎಂದು ಭರವಸೆ ಕೊಡ್ತಾಳೆ ರಾಖಿ..! ಇದರ ಮಧ್ಯೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೂ ರಾಖಿ ಸಾವಂತ್ ಆರ್ಡರ್ ಮಾಡಿದ್ದಾಳೆ..! ಕೊರೊನಾ ವೈರಸ್‌ಗೆ ವಿಶೇಷ ಮದ್ದು ಕಂಡು ಹಿಡಿಯುವಂತೆ ಆಗ್ರಹಿಸುತ್ತಾಳೆ, ತನ್ನ ಹೋರಾಟಕ್ಕೆ ಬೆಂಬಲ ನೀಡುವಂತೆ ಹುರಿದುಂಬಿಸಿದ್ದಾಳೆ. ರಾಖಿ ಸಾವಂತ್ ತನ್ನ ಸೆಲ್ಫಿ ವಿಡಿಯೋದಲ್ಲಿ ಪದೇ ಪದೇ ಚೀನಾಗೆ ಹೋಗ್ತೀನಿ, ಕರೋನಾ ವೈರಸ್‌ ನಾಶ ಮಾಡ್ತೀನಿ ಎನ್ನುತ್ತಿರುವಾಗಲೇ ಮಧ್ಯ ಪ್ರವೇಶಿಸುವ ಗಗನಸಖಿಯೊಬ್ಬರು, ವಿಡಿಯೋ ಸಾಕು ಆಡಿ ಮೊಬೈಲ್ ಆಫ್ ಮಾಡಿ ಎಂದು ಆಗ್ರಹಿಸುತ್ತಾರೆ. ಆಗ ರಾಖಿ ಸಾವಂತ್, ಗಗನ ಸಖಿಯನ್ನೂ ತನ್ನ ವೀಕ್ಷಕರಿಗೆ ಪರಿಚಯ ಮಾಡಿಕೊಡ್ತಾಳೆ. ನನ್ನ ಹೋರಾಟಕ್ಕೆ ಈಕೆ ಅಡ್ಡಿ ಮಾಡ್ತಿದ್ದಾಳೆ ಅಂತಾ ಆರೋಪ ಮಾಡ್ತಾಳೆ. ಲ್ಯಾಂಡ್ ಆದ ಬಳಿಕವೂ ರಾಖಿ ಸಾವಂತ್ ವಿಡಿಯೋ ಮಾಡಿದ್ದಾಳೆ. ಕೆಲವೊಂದು ಚೀನೀ ಭಾಷೆಯ ಪದಗಳನ್ನು ಮಾತನಾಡಲು ಯತ್ನಿಸಿದ್ದಾಳೆ. ಆಕೆಯ ಸುತ್ತಲೂ ಮಾಸ್ಕ್‌ ಧರಿಸಿರುವ ಜನರು ಓಡಾಟ ನಡೆಸೋದು ಕಂಡು ಬರುತ್ತೆ. ಇದೀಗ ರಾಖಿ ಸಾವಂತ್ ಚೀನಾದಲ್ಲಿ ಇದ್ದಾರಾ ಅನ್ನೋದು ದೃಢಪಟ್ಟಿಲ್ಲ. ಆದ್ರೆ, ಆಕೆಯ ಹುಚ್ಚಾಟ ಬಲ್ಲವರು ಮಾತ್ರ ನಕ್ಕು ಸುಮ್ಮನಾಗಿದ್ದಾರೆ.


from India & World News in Kannada | VK Polls https://ift.tt/371rYBS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...