ಚೆನ್ನೈ: ‘ಪೌರತ್ವ ತಿದ್ದುಪಡಿ ಕಾಯಿದೆಯಿಂದ ನಮ್ಮ ದೇಶದ ಯಾವುದೇ ಪ್ರಜೆಗಳಿಗೂ ತೊಂದರೆ ಆಗುವುದಿಲ್ಲ. ಒಂದೊಮ್ಮೆ ಇದರಿಂದ ಮುಸ್ಲಿಮರಿಗೆ ತೊಂದರೆಯಾದರೆ ಅವರ ಪರವಾಗಿ ಎದ್ದು ನಿಲ್ಲುವ ಮೊದಲ ವ್ಯಕ್ತಿ ನಾನು,’ ಎಂದು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹೇಳಿದ್ದಾರೆ. ಚೆನ್ನೈನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೇಶ ವಿಭಜನೆ ನಂತರ ಭಾರತದಲ್ಲೇ ಉಳಿದುಕೊಳ್ಳಲು ಇಚ್ಛಿಸಿದ ಮುಸ್ಲಿಮರನ್ನು ದೇಶದಿಂದ ಹೊರಗಟ್ಟಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. “ಸಿಎಎನಿಂದ ಭಾರತೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಸರಕಾರ ಭರವಸೆ ನೀಡಿದೆ. ತಮ್ಮ ಸ್ವಾರ್ಥಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಜನರನ್ನು ವಿರುದ್ಧ ಎತ್ತಿಕಟ್ಟುತ್ತಿವೆ,” ಎಂದು ಅವರ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.
ಇನ್ನು, “ಹೊರಗಿನವರನ್ನು ಪತ್ತೆ ಹಚ್ಚಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ () ಅನಿವಾರ್ಯ. ಎನ್‌ಆರ್‌ಸಿಯನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ,” ಎಂದು ಅವರು ವಿವರಿಸಿದ್ದಾರೆ.
from India & World News in Kannada | VK Polls https://ift.tt/2SjFfAz