ನೌಕಾಪಡೆ ದಿನಾಚರಣೆಗೆ ಪ್ರಧಾನಿ ಮೋದಿ ಶುಭಾಶಯ: ಸಮರ ಸ್ಮಾರಕದಲ್ಲಿ ಯೋಧರಿಂದ ಗೌರವ ನಮನ

ಹೊಸ ದಿಲ್ಲಿ: ಭಾರತೀಯ ದಿನಾಚರಣೆ ಅಂಗವಾಗಿ ನೌಕಾಪಡೆಯ ವೀರರಿಗೆ ನಮನ ಅರ್ಪಿಸಿದ್ದಾರೆ. ನೌಕಾಪಡೆ ಯೋಧರ ಸೇವೆ, ತ್ಯಾಗ, ಬಲಿದಾನದಿಂದಾಗಿ ಭಾರತ ಸುರಕ್ಷಿತ ಹಾಗೂ ಸುಭದ್ರವಾಗಿದೆ ಎಂದು ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ. ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ನೌಕಾಪಡೆ ದಿನಾಚರಣೆಗೆ ಶುಭ ಕೋರಿದ್ಧಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ನೌಕಾಪಡೆ ದಿನಾಚರಣೆಗೆ ಕೋರಿದ್ದಾರೆ. ಭಾರತೀಯ ನೌಕಾಪಡೆ ನಂಬಿಕಸ್ತ ಹಾಗೂ ದೇಶದ ಹೆಮ್ಮೆ ಎಂದು ರಕ್ಷಣಾ ಸಚಿವರು ಹೊಗಳಿದ್ದಾರೆ. ಯೋಧರಿಗೆ ನಮನ ಸಲ್ಲಿಸಿದ್ದಾರೆ. ನೌಕಾಪಡೆ ದಿನಾಚರಣೆ ಅಂಗವಾಗಿ ಹೊಸ ದಿಲ್ಲಿಯ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಗೌರವ ನಮನ ಅರ್ಪಿಸಿದರು. ಯುದ್ಧ ಭೂಮಿಯಲ್ಲಿ ಹುತಾತ್ಮರಾಧ ಯೋಧರಿಗೆ ನೌಕಾಪಡೆ ಮುಖ್ಯಸ್ಥರು ಗೌರವ ವಂದನೆ ಸಲ್ಲಿಸಿದರು. ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆ ದಿನಾಚರಣೆ ಆಚರಿಸಲಾಗುತ್ತದೆ. 1971ರಿಂದ ಭಾರತೀಯ ನೌಕಾಪಡೆ ದಿನಾಚರಣೆ ಆರಂಭವಾಯ್ತು. ನೌಕಾಪಡೆ ದಿನಾಚರಣೆ ಹಿನ್ನೆಲೆ 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಟ್ರೈಡೆಂಟ್‌ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಪಾಕಿಸ್ತಾನದ ನಾಲ್ಕು ಯುದ್ಧ ನೌಕೆಗಳನ್ನು ಭಾರತ ಪುಡಿಗಟ್ಟಿತ್ತು. ಪಿಎನ್‌ಎಸ್ ಖಲಿಬರ್ ಸೇರಿದಂತೆ ಪಾಕಿಸ್ತಾನ ನೌಕಾಪಡೆಯ ಪ್ರಮುಖ ಯುದ್ಧ ನೌಕೆಗಳೇ ನೀರು ಪಾಲಾಗಿದ್ದವು. ಈ ಕಾರ್ಯಾಚರಣೆ ವೇಳೆ ನೂರಾರು ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ, ಭಾರತದ ಹಲವು ಯೋಧರು ಹುತಾತ್ಮರಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ನೌಕಾಪಡೆ ದಿನಾಚರಣೆ ವೇಳೆ, ಇಡೀ ವಾರ ನೌಕಾಪಡೆ ಸಪ್ತಾಹ ಆಚರಿಸಲಾಗುತ್ತದೆ. ಯೋಧರಿಗಾಗಿ ಈಜುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸಾರ್ವಜನಿಕರಿಗೆ ನೌಕಾಪಡೆಯ ಸಮರ ನೌಕೆಗಳನ್ನು ನೋಡಲು ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಶಾಲಾ ವಿದ್ಯಾರ್ಥಿಗಳಿಗಾಗಿ ಹಾಗೂ ನಿವೃತ್ತ ನೌಕಾಪಡೆ ಯೋಧರಿಗಾಗಿ ಹಲವು ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ.


from India & World News in Kannada | VK Polls https://ift.tt/383VTv7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...