ಬೆಂಗಳೂರು/ಶಿರಸಿ: ರಾಜ್ಯದ ಸುಪರ್ದಿಯಲ್ಲಿದ್ದ 80,000 ಕೋಟಿ ರೂ.ಗಳನ್ನು ಕೇಂದ್ರದ ಬೊಕ್ಕಸಕ್ಕೆ ವರ್ಗಾವಣೆ ಮಾಡುವುದಕ್ಕಾಗಿಯೇ ಅವರು 15 ಗಂಟೆಗಳ ಮಟ್ಟಿಗೆ ಮಹಾರಾಷ್ಟ್ರ ಸಿಎಂ ಪಟ್ಟಕ್ಕೇರಿದರು ಎಂಬ ಸುಳ್ಳು ಸುದ್ದಿಯನ್ನು ಮಹಾ ಸತ್ಯವೆಂದು ನಂಬಿ ಚುನಾವಣಾ ಪ್ರಚಾರದ ವೇಳೆ ಭಾಷಣ ಬಿಗಿದ ಕಾರವಾರ ಕ್ಷೇತ್ರದ ಬಿಜೆಪಿ ಸಂಸದ ಸರ್ವತ್ರ ಗೇಲಿಗೆ ಒಳಗಾಗಿದ್ದಾರೆ. ಸ್ವತಃ ಫಡ್ನವಿಸ್ ಅವರೇ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣ ನೀಡಿದ್ದಾರೆ. 80 ಗಂಟೆಗಳ ಕಾಲ ಅಧಿಕಾರದಲ್ಲಿದ್ದ ಫಡ್ನವಿಸ್, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ಗಂಟೆಯೊಳಗೇ ತಮ್ಮ ಸುಪರ್ದಿಯಲ್ಲಿದ್ದ 40,000 ಕೋಟಿ ರೂ.ಗಳನ್ನು ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡಿ, ನಂತರ ರಾಜೀನಾಮೆ ನೀಡಿದರು. ಅದೇ ಉದ್ದೇಶಕ್ಕಾಗಿ ಈ 'ಮಹಾ' ನಾಟಕ ನಡೆದಿತ್ತು ಎಂದು ಹೆಗಡೆ ಹೇಳಿದ್ದರು. ಈ ಹೇಳಿಕೆ ಈಗ ಎಲ್ಲೆಡೆ ಟ್ರೋಲ್ ಆಗುವುದರ ಜತೆಗೆ ಕೇಂದ್ರ ಸರಕಾರವನ್ನೂ ಮುಜುಗರಕ್ಕೆ ಸಿಲುಕಿಸಿದೆ. ಶಿರಸಿ ತಾಲೂಕಿನ ಬಂಕನಾಲಾದಲ್ಲಿ ನ.29ರಂದು ಚುನಾವಣಾ ಪ್ರಚಾರದ ವೇಳೆ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಅವರು ನೀಡಿದ ಹೇಳಿಕೆ ಅನಂತ್ ಕುಮಾರ್ ಅವರಿಗೇ ತಿರುಗುಬಾಣವಾಗಿದೆ. ಸ್ವತಃ ಫಡ್ನವಿಸ್ ಅವರೇ ಈ ಹೇಳಿಕೆ ತಿರಸ್ಕರಿಸಿದರೂ, ವಿವಾದ ತಣ್ಣಗಾಗಿಲ್ಲ. ಈ ಹೇಳಿಕೆಯಿಂದಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಗೆ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ. ಫಡ್ನವಿಸ್ ಅವರೇ 'ಕತೆ' ಎಂದರುಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಅನಂತ್ ಕುಮಾರ್ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ''ಮಹಾರಾಷ್ಟ್ರ ಸರಕಾರ ಬುಲೆಟ್ ರೈಲು ಯೋಜನೆಗಾಗಿ ಕೇಂದ್ರದಿಂದ ಯಾವುದೇ ಹಣ ಕೇಳಿರಲಿಲ್ಲ,'' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅನಂತ್ ಕುಮಾರ್ ಹಳೆ ವಿವಾದಗಳು
- ರಾಹುಲ್ ಗಾಂಧಿ ಹೈಬ್ರಿಡ್. ಮುಸ್ಲಿಂ ತಂದೆ-ಕ್ರೈಸ್ತ ತಾಯಿಯ ಮಗ 'ಗಾಂಧಿ' ಹೆಸರಿನಲ್ಲಿ ಬ್ರಾಹ್ಮಣ ಆಗಲು ಹೇಗೆ ಸಾಧ್ಯ? ರಾಹುಲ್ ಗಾಂಧಿ ಹಿಂದೂ ಎಂಬುದಕ್ಕೆ ಆಧಾರವಿದೆಯೇ? ಡಿಎನ್‌ಎ ಸಾಕ್ಷ್ಯಗಳನ್ನು ನೀಡಲಿ. (ಸರ್ಜಿಕಲ್ ಸ್ಟ್ರೈಕ್ ಪ್ರಶ್ನಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕುರಿತು)
- ಮನುಸ್ಮೃತಿ ನಮ್ಮ ಮೊದಲ ಸಂವಿಧಾನ. ವಿದೇಶಿ ಶಕ್ತಿಗಳಿಗೆ ತಮ್ಮನ್ನು ಮಾರಿಕೊಂಡಿರುವ ಬುದ್ಧಿಜೀವಿಗಳನ್ನು ಇದನ್ನು ಒಪ್ಪಲು ಸಿದ್ಧವಿಲ್ಲ. 'ಜಾತ್ಯತೀತ' ಎಂಬ ಪದವನ್ನು ಒಳಗೊಂಡ ಸಂವಿಧಾನವನ್ನು ನಾವು (ಬಿಜೆಪಿ) ಬದಲಾಯಿಸುತ್ತೇವೆ. ಸಂವಿಧಾನವನ್ನು ಬದಲಾಯಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ.
- ಕಾಗೆಗಳು, ಮಂಗಗಳು, ನರಿಗಳು ಮತ್ತು ಕತ್ತೆಗಳು ಬಿಜೆಪಿಯನ್ನು ಎದುರಿಸಲು ಒಂದಾಗುತ್ತಿವೆ (ಪ್ರತಿಪಕ್ಷಗಳನ್ನು ಕುರಿತು ಟೀಕೆ)
- ಹಿಂದೂ ಹುಡುಗಿಯನ್ನು ಮುಟ್ಟಿದವರ ಕೈಯನ್ನು ಕತ್ತರಿಸಬೇಕು. (ಕೊಡಗಿನಲ್ಲಿಹೇಳಿದ್ದು)
from India & World News in Kannada | VK Polls https://ift.tt/2sCcVQF