
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸು ಭರದಲ್ಲಿ ಮತ್ತೆ ವಿವಾದಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು 'ನುಸುಳುಕೋರರು' ಎಂದು ಬಿಜೆಪಿ ಕೋಪಕ್ಕೆ ಕಾರಣವಾಗಿದ್ದ ಚೌಧರಿ ಇದೀಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ದೇಶದ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ' ಸೀತಾರಾಮನ್' ಎಂದಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲೋಕಸಭೆಯಲ್ಲಿ ಸೋಮವಾರ ಮಧ್ಯಾಹ್ನದ ವೇಳೆ 'ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ (2019) ಯ ಕುರಿತು ಚರ್ಚೆ ನಡೆಯುವ ವೇಳೆ ನಿರ್ಮಲಾ ಸೀತಾರಾಮನ್ ಬಗ್ಗೆ ಹೀಗೆ ಕಾಮೆಂಟ್ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಒಬ್ಬ ಅರ್ಥ ಮಂತ್ರಿಯಾಗಿ ಸ್ವಂತಿಕೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಯಾರದ್ದೋ ಮರ್ಜಿಗೆ ಒಳಗಾಗಿ ಮಾತನಾಡುತ್ತಾರೆ ಎಂದು ಹೇಳಲು ಹೋಗಿ ಹೀಗೆ ಅಸಂಬದ್ದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. ‘ನಿಮ್ಮ ಕುರಿತಾಗಿ ಗೌರವವೇನೋ ಇದೆ ಆದರೆ ನಿಮ್ಮನ್ನು ನಿರ್ಮಲಾ ಸೀತಾರಾಮನ್ ಎಂದು ಕರೆಯುವ ಬದಲು ‘ನಿರ್ಬಲ’ ಸೀತಾರಾಮನ್ ಎಂದು ಕರೆಯಬಹುದೇ? ಹೀಗೆ ನನಗೆ ಎಷ್ಟೋ ಸಲ ಅನ್ನಿಸಿದ್ದಿದೆ. ನೀವು ಮಂತ್ರಿಯೇನೋ ಹೌದು ಆದರೆ ನಿಮ್ಮ ಸ್ವಂತಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದೀರೇ? ಎಂದು ಚೌಧರಿ ಅವರು ಸೀತಾರಾಮನ್ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ್ದಾರೆ.
from India & World News in Kannada | VK Polls https://ift.tt/2r58GwD