ಇಸ್ಲಾಮಾಬಾದ್(): ಸರ್ವಧರ್ಮ ಸಮನ್ವಯತೆಯ ಮನೋಭಾವ ಬಿಂಬಿಸುವ ಉದ್ದೇಶದಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾರಿಡಾರ್ ಉದ್ಘಾಟಿಸಿ ಸಿಖ್ ಯಾತ್ರಾರ್ಥಿಗಳನ್ನು ಗುರುದ್ವಾರಕ್ಕೆ ಆಹ್ವಾನಿಸಿದ್ದಾರೆ. ಆದ್ರೆ, ಪಾಕಿಸ್ತಾನದಲ್ಲಿನ ಧಾರ್ಮಿಕ ಮೂಲಭೂತವಾದಿಗಳನ್ನು ಮಾತ್ರ ಮಟ್ಟ ಹಾಕುವಲ್ಲ ಇಮ್ರಾನ್ ಸೋತಿದ್ದಾರೆ. ಕರ್ತಾರ್‌ಪುರ ಕಾರಿಡಾರ್ ಮಾರ್ಗವಾಗಿ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಯಾವೊಬ್ಬ ಸಿಖ್ ಯಾತ್ರಾರ್ಥಿಯೂ ಬರಬಾರದು ಎಂದು ಪಾಕಿಸ್ತಾನದ ಮುಸ್ಲಿಂ ಮೌಲ್ವಿಯೊಬ್ಬ ಆವಾಜ್ ಹಾಕಿದ್ದಾನೆ. ತನ್ನ ದೇಶದೊಳಗೆ ಅನ್ಯಧರ್ಮೀಯರು ಯಾರೊಬ್ಬರೂ ಕಾಲಿಡಬಾರದು ಎಂದು ಆತ ಗುಡುಗಿದ್ದಾನೆ. ಪಾಕಿಸ್ತಾನ ಅನ್ನೋ ಹೆಸರಿನಲ್ಲೇ ಪಾಕ್ ಇದೆ. ಪಾಕ್ ಎಂದರೆ ಇಸ್ಲಾಂ ಧರ್ಮನಿಷ್ಠ ಎಂದರ್ಥ. ಹೀಗಾಗಿ ಸಿಖ್ಖರಿಗೆ ನಮ್ಮಲ್ಲಿ ಪ್ರವೇಶವಿಲ್ಲ ಎಂದು ಇಸ್ಲಾಂ ಧರ್ಮಗುರು ಖಾದಿಮ್ ಹುಸೇನ್ ರಿಝ್ವಿ ಹೇಳಿದ್ದಾರೆ. ಅಷ್ಟೇ ಅಲ್ಲ ಕರ್ತಾರ್‌ಪುರ ಗುರುದ್ವಾರದಲ್ಲಿ ಯಾತ್ರಾರ್ಥಿಗಳಿಗೆ ನೀಡಿರುವ ಸವಲತ್ತುಗಳಿಗೂ ಆಕ್ಷೇಪ ಎತ್ತಿದ್ದಾರೆ. ಪಾಕಿಸ್ತಾನದಲ್ಲಿ ತೆಹ್ರಿಕ್ ಇ ಲಬೈಕ್ ಎಂಬ ಸಂಘಟನೆ ಸ್ಥಾಪಿಸಿರುವ ರಿಝ್ವಿ, 2015ರಿಂದಲೂ ತನ್ನ ಸಂಘಟನೆ ಮೂಲಕ ರಾಜಕೀಯ ಹಾಗೂ ಧಾರ್ಮಿಕವಾಗಿ ಕಾರ್ಯನಿರತನಾಗಿದ್ದಾನೆ. ಪಾಕಿಸ್ತಾನದಲ್ಲಿ ಇಸ್ಲಾಂ ವಿರೋಧಿ ಕಾನೂನುಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವಲ್ಲಿ ಖಾದಿಮ್ ರಿಝ್ವಿ ಮುಂಚೂಣಿಯಲ್ಲಿದ್ದಾನೆ. ನಮ್ಮ ನೆಲದಲ್ಲಿ ಪ್ರವಾದಿ ಮೊಹಮ್ಮದ್ ಹಾಗೂ ಮೆಕ್ಕಾ ಮಾತ್ರ ಪವಿತ್ರವಾದದ್ದು ಎಂದು ಹೇಳಿರುವ ರಿಝ್ವಿ, ಸಿಖ್ಖರು ಬೇಕಿದ್ದರೆ ಅಮೃತಸರದಲ್ಲಿ ತೀರ್ಥಯಾತ್ರೆ ಮಾಡಿಕೊಳ್ಳಲಿ, ನಮ್ಮ ನೆಲಕ್ಕೆ ಕಾಲಿಡೋದು ಬೇಡ ಎಂದಿದ್ದಾನೆ. ಹಾಗೆ ನೋಡಿದ್ರೆ, ಖರ್ತಾರ್‌ಪುರ ಕಾರಿಡಾರ್ ಮೂಲಕ ಸಿಖ್ಖರಿಗೆ ಗುರುದ್ವಾರ ದರ್ಶನಕ್ಕೆ ಅನುವು ಮಾಡಿಕೊಟ್ಟ ಇಮ್ರಾನ್, ಮೋದಿ ಸರ್ಕಾರಕ್ಕೆ ಸಡ್ಡು ಹೊಡೆಯುವ ತಂತ್ರಗಾರಿಕೆ ಅನುಸರಿಸಿದ್ದರು. ಸಿಖ್ಖರ ಸಹಾನುಭೂತಿ ಗಿಟ್ಟಿಸುವುದು ಹಾಗೂ ಪ್ರತ್ಯೇಕತಾವಾದಿ ಚಳವಳಿಗೆ ಕುಮ್ಮುಕ್ಕು ಕೊಡೋದು ಪಾಕಿಸ್ತಾನದ ತಂತ್ರಗಾರಿಕೆ ಅನ್ನೋ ಸುದ್ದಿಯನ್ನು ಕೆನಡಾ ಮೂಲಕ ಟಿವಿ ವಾಹಿನಿಯೊಂದು ಬಹಿರಂಗಪಡಿಸಿತ್ತು. ಆದ್ರೆ, ಇಮ್ರಾನ್ ಖಾನ್ ತಂತ್ರಗಾರಿಕೆ ಅರಿಯದ ಧರ್ಮಾಂಧ , ಇದೀಗ ತಮ್ಮದೇ ದೇಶದ ಪ್ರಧಾನಿ ರೂಪಿಸಿದ್ದ ತಂತ್ರಗಾರಿಕೆಗೆ ಉಲ್ಟಾ ಹೊಡೆದಿದ್ದಾನೆ.
from India & World News in Kannada | VK Polls https://ift.tt/37YAeo0