ದಿಲೀಪ್ ಡಿ. ಆರ್.ಹೊಸ ದಿಲ್ಲಿ: ಕೈಲಾಸವಾಸಿಯಾಗಿದ್ದಾನೆ! ಶಿವನ ಪಾದ ಸೇರಿದ್ದಾನೆ ಅಂದ್ಕೋಬೇಡಿ! ಅನ್ನೋ ಪ್ರತ್ಯೇಕ ರಾಷ್ಟ್ರ ಕಟ್ಟಿಕೊಂಡುಬಿಟ್ಟಿದ್ದಾನೆ! ಲ್ಯಾಟಿನ್ ಅಮೆರಿಕ ಎಂದು ಕರೆಯಲಾಗುವ ದಕ್ಷಿಣ ಅಮೆರಿಕಾದ ಈಕ್ವೆಡಾರ್ ದೇಶದ ಬಳಿ ಇಡೀ ದ್ವೀಪವೊಂದನ್ನೇ ಖರೀದಿಸಿಬಿಟ್ಟಿದ್ದಾನೆ ನಿತ್ಯಾನಂದ! ವಿಶ್ವದ ಭೂಪಠದಲ್ಲಿ ನೋಡಿದ್ರೆ, ಅಮೆರಿಕ ದೇಶದ ಕೆಳಭಾಗದಲ್ಲಿ ಬರುತ್ತೆ ನಿತ್ಯಾನಂದನ ! ನಿತ್ಯಾನಂದ ಹೊಸ ದೇಶವನ್ನೇ ಕಟ್ಟಿಕೊಂಡುಬಿಟ್ಟಿದ್ದಾನೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯಾನಂದನ ಹೊಸ ದೇಶವಾದ ಕೈಲಾಸ ಭಾರೀ ಸದ್ದು ಮಾಡ್ತಿದೆ. ಒಂದಕ್ಕಿಂತಾ ಒಂದು ತಮಾಷೆಯಾಗಿಯೂ ಇದೆ. ಕೈಲಾಸ ದೇಶದ ಸ್ಥಾಪನೆಯಿಂದಾಗಿ ಥೈಲ್ಯಾಂಡ್‌ನ ಪಟ್ಟಾಯ ನಗರಕ್ಕೆ ಹೊಸ ಪ್ರತಿಸ್ಪರ್ಧಿ ಸಿಕ್ಕಂತಾಗಿದೆ ಎಂದು ಟ್ವಿಟರ್‌ನಲ್ಲಿ ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ನಿತ್ಯಾನಂದನಿಗೆ ನೀವು ಪ್ರಶಂಸೆ ಮಾಡಲೇಬೇಕು! ಆತ ಹಿಂದೂ ರಾಷ್ಟ್ರ ಕಟ್ಟಿದ್ದಾನೆ ಎಂದು ಎಂದು ಟ್ವೀಟ್‌ನಲ್ಲೇ ಕಿಚಾಯಿಸಿದ್ದಾರೆ. 2027ಕ್ಕೆ ಕೈಲಾಸ ರಾಷ್ಟ್ರ ವಿಶ್ವಕಪ್ ಕ್ರಿಕೆಟ್‌ನಲ್ಲೂ ಸ್ಪರ್ಧೆ ಮಾಡುತ್ತಂತೆ! ಇದಕ್ಕಾಗಿ ನಿತ್ಯಾನಂದ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಿಸಿಕೊಳ್ಳುತ್ತಾನಂತೆ! ನೂತನ ‘ಕೈಲಾಸ’ ರಾಷ್ಟ್ರದ ಅಧ್ಯಕ್ಷರು ಹೇಗಿರುತ್ತಾರೆ..? ಇಲ್ಲಿ ನೋಡಿ..! ಕೈಲಾಸಕ್ಕೆ ಹೋಗಲು ವೀಸಾ ಪಡೆಯುವುದು ಹೇಗೆ ಎಂದು ಪ್ರಶ್ನೆ ಎತ್ತಿದ್ದಾರೆ ಟ್ವಿಟರ್ ಖಾತೆದಾರ ರಾಜ್..!
from India & World News in Kannada | VK Polls https://ift.tt/2LhgceI