ಕೊನೆಗೂ ಬೋನಿಗೆ ಬಿತ್ತು ನರಭಕ್ಷಕ ಚಿರತೆ : 40 ಜನರ, ಸತತ 25 ದಿನಗಳ ಕಾರ್ಯಾಚರಣೆಗೆ ಫಲ

ಕುಣಿಗಲ್‌: ಕೊನೆಗೂ ಬೋನಿಗೆ ಬೀಳುವ ಮೂಲಕ ಸತತ 25 ದಿನಗಳ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ಜಿಲ್ಲೆಯ ತಾಲೂಕಿನ ಗಿಡದಪಾಳ್ಯ ಸಮೀಪ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಮೇಕೆ ತಿನ್ನಲು ಬಂದ ಚಿರತೆ ಮಂಗಳವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ. ಸುಮಾರು 5-6 ವರ್ಷ ವಯಸ್ಸಿನ ಹೆಣ್ಣು ಚಿರತೆ ಸರೆ ಸಿಕ್ಕಿದೆ. ಅದರೆ ಇದೇ ನರಭಕ್ಷಕ ಚಿರತೆಯೇ ಎಂದು ವೈದ್ಯರು ಖಚಿತ ಪಡಿಸಬೇಕಾಗಿದೆ ಎಂದು ಅರ್‌ಎಫ್‌ಒ ಮಂಜುನಾಥ್‌ ಹೇಳಿದ್ದಾರೆ. ನಿಟ್ಟುಸಿರು ಬಿಟ್ಟ ಜನತೆ: ಕಳೆದ ಎರಡು ತಿಂಗಳಲ್ಲಿಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಹಾಗಾಗಿ, ಈ ಭಾಗದ ಜನತೆ ತೀರ ಭಯಬೀತರಾಗಿದ್ದರು. ಅಲ್ಲದೆ ಚತುರ ಚಿರತೆ ಪದೇ ಪದೆ ಕಾಣಿಕೊಂಡು ಜನ ಜಾನುವಾರುಗಳ ಮೇಲೆ ದಾಳಿ ಮುಂದುವರಿಸಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಜನ ರಾತ್ರಿ ವೇಳೆ ಮನೆ ಬಿಟ್ಟು ಹೊರಗೆ ಬಾರದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ತಾಲೂಕು ಅಡಳಿತ ಕೂಡ ಟಾಂ ಟಾಂ ಹಾಗೂ ಕರಪತ್ರ ಮುದ್ರಿಸಿ ಹಂಚಿಕೆ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗಿತ್ತು ಈಗ ಕೊನೆಗೂ ಚಿರತೆ ಬೋನಿಗೆ ಬಿದ್ದಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಕಾರ್ಯಾಚರಣೆಗೆ 40 ಸಿಬ್ಬಂದಿ ಅರಣ್ಯ ಇಲಾಖೆಯ 40ಕ್ಕೂ ಹೆಚ್ಚು ಸಿಬ್ಬಂದಿ ಕಳೆದ 25 ದಿನಗಳಿಂದ ಆಪರೇಷನ್‌ ಚೀತಾ ಕಾರ್ಯಾಚರಣೆಯಲ್ಲಿತೊಡಗಿದ್ದರು. ಇವರೆಲ್ಲಮನೆ, ಕುಟುಂಬ ತೊರೆದು ಕಾರ್ಯಚರಣೆಯಲ್ಲಿಸೆರೆಗೆ ಸಿಗದೇ ನಿದ್ಡೆಗೆಡಿಸಿದ್ದ ಚಿರತೆಯನ್ನು ಕೊನೆಗೂ ಬಲೆಯೊಳಕ್ಕೆ ಬೀಳಿಸಿದ್ದಾರೆ. ಹಾಗಾಗಿ, ಸಿಬ್ಬಂದಿ ಕೂಡ ನೆಮ್ಮದಿಯಿಂದ ಮನೆಯತ್ತ ಮರಳಿದ್ದಾರೆ. ಚಿರತೆ ಬೋನಿಗೆ ಸೆರೆ ಸಿಕ್ಕಿರುವ ಗಿಡದಪಾಳ್ಯಕ್ಕೆ ಶಾಸಕ ಡಾ. ಎಚ್‌.ಡಿ. ರಂಗನಾಥ್‌ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಕಳೆದ 25 ದಿನಗಳಿಂದ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸಿದರು. ಈ ಮೂಲಕ ಮತ್ತೆ ಮನುಷ್ಯನ ಮೇಲೆ ದಾಳಿಯಾಗುವುದನ್ನು ತಡೆದಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಶಾಸಕರು ಶ್ಲಾಘಿಘಿಸಿದರು. ಚಿರತೆ ಮಾತನಾಡಿಸಿದ ಶಾಸಕ: ಶಾಸಕ ಡಾ.ರಂಗನಾಥ್‌ ಬೋನಿನಲ್ಲಿಸೆರೆಯಾಗಿರುವ ಚಿರತೆಯನ್ನು ಮಾತನಾಡಿಸಿದರು. ಏಯ್‌ ಸುಮ್ಮನಿರು ಎಂದ ಶಾಸಕ ರಂಗನಾಥ್‌, ಬಹಳ ರೋಷಭರಿತವಾಗಿದೆ ಚಿರತೆ ಎಂದು ಅಧಿಕಾರಿಗಳಿಗೆ ಹೇಳುತ್ತಿರುವಾಗ ಬೋನಿನಲ್ಲೇ ಶಾಸಕರ ಮೇಲೆ ಗುಟುರು ಹಾಕಿ ಎಗರಲು ಚಿರತೆ ಮುಂದಾಯಿತು. ಈ ವೇಳೆ ಶಾಸಕರು ಕೂಡ ಭಯಬೀತರಾದರು


from India & World News in Kannada | VK Polls https://ift.tt/2tLHX9f

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...