ಬೆಂಗಳೂರು: ಇಸ್ರೋ ಯೋಜನೆಯ ಲ್ಯಾಂಡರ್ ವಿಕ್ರಮ್‌ನ ಅವಶೇಷಗಳನ್ನು ನಾಸಾದ ಲೂನರ್ ರೆಕೊನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಪತ್ತೆ ಮಾಡಿದೆ. ಸೆಪ್ಟಂಬರ್ 7ರಂದು ಚಂದ್ರನ ಮೇಲೆ ಇಳಿಯುವ ಸಂದರ್ಭ ನಿಯಂತ್ರಣ ತಪ್ಪಿ ಜೋರಾಗಿ ಬಿದ್ದು ಸಂಪರ್ಕ ಕಳೆದುಕೊಂಡಿತ್ತು. ಲ್ಯಾಂಡರ್ ವಿಕ್ರಮ್ ಪತ್ತೆಯಾಗಿರುವ ಬಗ್ಗ ವರದಿ ಮಾಡಿರುವ ನಾಸಾ ಎಲ್‌ಆರ್‍ಒ ಕ್ಲಿಕ್ಕಿಸಿದ ಫೋಟೊವನ್ನು ಬಿಡುಗಡೆ ಮಾಡಿದೆ. ಚಂದ್ರನ ಮೇಲೆ ನೀಲಿ ಮತ್ತು ಹಸಿರು ಡಾಟ್‌ಗಳನ್ನು ತೋರಿಸಿ ಲ್ಯಾಂಡರ್ ವಿಕ್ರಮ್‌ನ ಅವಶೇಷ ಮತ್ತು ಅದು ಬಿದ್ದುದರಿಂದ ಉಂಟಾದ ಪರಿಣಾಮವಿದು ಎಂದು ಹೇಳಿದೆ. ಹಸಿರು ಮಾರ್ಕ್ ಲ್ಯಾಂಡರ್ ವಿಕ್ರಮ್‌ನ ಅವಶೇಷ ಆಗಿರಬಹುದು ಎಂದಿದ್ದು, ನೀಲಿ ಡಾಟ್‌ಗಳು ಚಂದ್ರನ ನೆಲದಲ್ಲಿ ಉಂಟಾದ ತಗ್ಗುಗಳು ಎಂದಿದೆ. ಇನ್ನು 'S' ಎಂಬುದು ಶಣ್ಮುಗ ಸುಬ್ರಹ್ಮಣ್ಯ ಗುರುತಿಸಿದ ವಿಕ್ರಮ್‌ನ ಅವಶೇಷಗಳು ಎಂದಿದೆ. ಆದರೆ ನಾಸಾದ ವರದಿಯಲ್ಲಿ ಸುಬ್ರಮಣಿಯನ್ ಅವರು ಗುರುತಿಸಿದ ಬಗ್ಗೆ ವಿವರಿಸಿಲ್ಲ. ಸುಬ್ರಮಣಿಯನ್ ಅವರು ಎಲ್‌ಆರ್‌ಒವನ್ನು ಸಂಪರ್ಕಿಸಿ ವಿಕ್ರಮ್ ಲ್ಯಾಂಡರ್‌ನ ಅವಶೇಷಗಳು ಇರುವ ಸಾಧ್ಯತೆಗಳ ಬಗ್ಗೆ ಗಮನ ಸೆಳೆದಿದ್ದರು ಎಂದಿದೆ. ಚೆನ್ನೈನ ಟೆಕ್ಕಿ ಸುಬ್ರಮಣಿಯನ್ ಅವರು ನೀಡಿದ ಸುಳಿವಿನ ಮೇಲೆ ಹೆಚ್ಚು ಅಧ್ಯಯನ ನಡೆಸಿದಾಗ ಎಲ್‌ಐರ್‌ಒಸಿ ತಂಡವು ವಿಕ್ರಮ್ ಲ್ಯಾಂಡರ್ ಅವಶೇಷಗಳಿರುವುದನ್ನು ಖಾತರಿ ಪಡಿಸಿತು. ಸೆಪ್ಟಂಬರ್ 26ರಂದು ನಾಸಾ ಚಂದ್ರನ ಚಿತ್ರವನ್ನು ಬಿಡುಗಡೆ ಮಾಡಿತ್ತು. ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದ ಸುಬ್ರಮಣಿಯನ್ ವಿಕ್ರಮ್ ಇರುವಿಕೆ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಅಕ್ಟೋಬರ್ 14 ಮತ್ತು 15ರಂದು, ನವೆಂಬರ್ 11ರಂದು ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲೂ ವಿಕ್ರಮ್ ಲ್ಯಾಂಡರ್ ಇರುವಿಕೆಯ ಬಗ್ಗೆ ಸುಬ್ರಮಣಿಯನ್ ಅವರ ಗಮನ ಸೆಳೆದಿದ್ದವು.
from India & World News in Kannada | VK Polls https://ift.tt/2LhOHBF