ಮಹಾರಾಷ್ಟ್ರ ಫಲಿತಾಂಶ: 2 ಕ್ಷೇತ್ರಗಳಲ್ಲಿ ನೋಟಾಕ್ಕೆ ಎರಡನೇ ಸ್ಥಾನ!

ಮುಂಬಯಿ: ಮಹಾರಾಷ್ಟ್ರದ 2 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಜನರು ತಮ್ಮ ಚುನಾವಣೆ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ ಯಾರೂ ಅರ್ಹರಲ್ಲ ಎಂಬ ಆಯ್ಕೆ ಮಾಡಿದ್ದಾರೆ. ಲಾತುರ್‌ ಗ್ರಾಮೀಣ ಹಾಗೂ ಪಾಲಸ್ ಕಡೇಗಾಂವ್‌ ವಿಧಾನಸಭಾ ಕ್ಷೇತ್ರದಲ್ಲಿ ನೋಟಾ ಆಯ್ಕೆ ಮಾಡಿದವರ ಸಂಖ್ಯೆ ಹೆಚ್ಚಿದೆ. ಎರಡು ಕ್ಷೇತ್ರ ಕೈ ಪಾಲಾಗಿದ್ದು, ಮತಗಳಿಕೆಯ ಪ್ರಮಾಣದ ಲೆಕ್ಕಾಚಾರದಲ್ಲಿ ನೋಟಾಕ್ಕೆ(ಯಾವುದೇ ಅಭ್ಯರ್ಥಿಗೆ ಮತ ನೀಡಲ್ಲ ಎಂಬ ಆಯ್ಕೆ) 2 ನೇ ಸ್ಥಾನ ಸಿಕ್ಕಿದೆ. ಗುರುವಾರ ಸಂಜೆ ಪ್ರಕಟವಾದ ಪೂರ್ಣ ಪ್ರಮಾಣದ ಫಲಿತಾಂಶದ ಪ್ರಕಾರ ಮಾಜಿ ಸಿಎಂ ವಿಲಾಸ ರಾವ್‌ ದೇಶ್‌ಮುಖ್‌ ಪುತ್ರ ಧೀರಜ್‌ ದೇಶ್‌ಮುಖ್‌ಗೆ 1,35,006 ಮತಗಳು ಬಿದ್ದಿವೆ (67.64%). ಇವಿಎಂ ಮಷೀನ್‌ನ ಕೊನೆಯ ಆಯ್ಕೆಯಾಗಿರುವ ನೋಟಾವನ್ನು 27,500 ಮಂದಿ ಆಯ್ಕೆ ಮಾಡಿದ್ದಾರೆ. ಒಟ್ಟಾರೆ ಲಾತುರ್‌ ಗ್ರಾಮೀಣ ಕ್ಷೇತ್ರದಲ್ಲಿ ಶೇ.13.78 ರಷ್ಟು ಮತಗಳು ನೋಟಾಕ್ಕೆ ಬಿದ್ದಿವೆ. ಧೀರಜ್‌ ದೇಶ್‌ಮುಖ್‌ ಎದುರಾಳಿಯಾಗಿದ್ದ ಶಿವಸೇನೆಯ ಸಚಿನ್‌ ದೇಶ್‌ಮುಖ್‌ ಅವರಿಗೆ 13,459 ಮತಗಳು ಬಿದ್ದಿದ್ದು, ಮತಗಳಿಕೆಯ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಲಾತುರ್‌ ಗ್ರಾಮೀಣ ಕ್ಷೇತ್ರದಲ್ಲಿ 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. 16ನೇ ಆಯ್ಕೆಯಾಗಿ ನೋಟಾ ನೀಡಲಾಗಿತ್ತು. ಅಷ್ಟೇ ಅಲ್ಲದೆ ಒಟ್ಟರೆ 563 ಮಂದಿಯ ಅಂಚೆ ಮತದಾನದಲ್ಲಿಯೂ 51 ಮಂದಿ ನೋಟಾಕ್ಕೇ ಆಯ್ಕೆ ಮಾಡಿದ್ದಾರೆ. ಒಟ್ಟು 1,99,599 ಮಾನ್ಯ ಮತಗಳಾಗಿವೆ. ಸಾಂಗ್ಲಿ ಜಿಲ್ಲೆಯ ಪಾಲಸ್‌ ಕಾಡೆಗಾಂವ್‌ ಕ್ಷೇತ್ರದಲ್ಲೂ ನೋಟಾಕ್ಕೆ 2 ನೇ ಸ್ಥಾನ ಲಭಿಸಿದ್ದು, 20,631 ಮತಗಳು ಬಿದ್ದಿವೆ. ಕಾಂಗ್ರೆಸ್‌ನ ವಿಶ್ವಜೀತ್‌ ಕದಮ್‌ 1,71,497 ಮತಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದರೆ, ಶಿವಸೇನೆಯ ಸಂಜಯ್‌ ವಿಭೂಟೆ 8,976 ಮತಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಸುಪ್ರೀ ಕೋರ್ಟ್‌ ಆದೇಶದ ಬಳಿಕ 2014ರಲ್ಲಿ ನೋಟಾವನ್ನು ಆರಂಭಿಸಲಾಗಿತ್ತು.


from India & World News in Kannada | VK Polls https://ift.tt/2MLK5ox

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...