ಹೊಸದಿಲ್ಲಿ: ಅನರ್ಹ ಶಾಸಕರ ಮೇಲ್ಮನವಿ ಅರ್ಜಿ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರವೂ ಮುಂದುವರಿದೆ. ಕಾಂಗ್ರಸ್ ಪರ ವಕೀಲ ಕಪಿಲ್ ಸಿಬಲ್ ವಾಂದಮಂಡಿಸಿದ್ದ, ಅನರ್ಹ ಶಾಸಕರಿಗೆ ಯಾವ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ವಾದ ಮಂಡಿಸಿದ್ದಾರೆ. ಒಂದು ವೇಳೆ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು ಎಂದಾದರೆ, ಅನರ್ಹತೆಗೆ ಯಾವ ಬೆಲೆ ಇದೆ. ಸದನದ ಆಂತರಿಕ ವಿಚಾರಗಳಲ್ಲಿ ನ್ಯಾಯಾಲಯ ಪ್ರವೇಶ ಮಾಡಬಾರದು ಎಂದು ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ನ್ಯಾಯಮೂರ್ತಿಗಳ ಪ್ರಶ್ನೆ: ರಾಜೀನಾಮೆಯನ್ನು ಅಂಗೀಕರಿದ್ದಿದ್ದೇ ಆದರೆ, ಅನರ್ಹತೆಯ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಅಲ್ಲವೇ? ಎಂದು ನ್ಯಾಯಮೂರ್ತಿಗಳು ಕಪಿಲ್ ಸಿಬಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಕಪಿಲ್ ಸಿಬಲ್ ವಾದ: ಕರ್ ಕಾರ್ಯವ್ಯಾಪ್ತಿ ಶಾಸಕರಿಗೆ ಸಂಬಂಧಿಸಿದೆ. ಹೀಗಾಗಿಯೇ ಶಾಸಕರನ್ನು ಅನರ್ಹಗೊಳಿಸಲಾಗಿದೆ. ರಾಜೀನಾಮೆ ನೀಡಿದ ಶಾಸಕರು ತಮ್ಮ ಸ್ವಕ್ಷೇತ್ರಕ್ಕೆ ತೆರಲಬೇಕಿತ್ತು. ತಮ್ಮ ಕ್ಷೇತ್ರದ ಜನರೊಟ್ಟಿಗೆ ಮಾತನಾಡಬೇಕಿತ್ತು. ಅಥವಾ ಸುಮ್ಮನಿರಬೇಕಿತ್ತು. ಆದರೆ ರಾಜೀನಾಮೆ ನೀಡಿದ ನಂತರ ಇವರು ಮಾಡಿದ್ದೇನೆ? ಪಕ್ಷ ವಿರೋದಿ ಚಟುವಟಿಕೆಯಲ್ಲಿ ಏಕೆ ತೊಡಬೇಕಿತ್ತು ಎಂದು ಕಪಿಲ್ ಸಿಬಲ್ ವಾದಿಸಿದರು.
from India & World News in Kannada | VK Polls https://ift.tt/2W9kl8S