
ಹೊಸದಿಲ್ಲಿ: ಅಮೆರಿಕ ಸಂಸ್ಥಾನಗಳಲ್ಲಿ ನೈಋತ್ಯ ಫ್ಲೋರಿಡಾದ ಅಟ್ಲಾಂಟಿಕ್ ತೀರ ಪ್ರದೇಶದಲ್ಲಿ ಸ್ಥಿತಗೊಂಡಿರುವ ಅತ್ಯಂತ ಸುಂದರ ಹಾಗೂ ದೊಡ್ಡ ನಗರಗಳಲ್ಲಿ ಒಂದಾಗಿರುವ ಮಿಯಾಮಿಯಲ್ಲಿ ಟೀಮ್ ಇಂಡಿಯಾ ನಾಯಕ ಹಾಗೂ ಪತ್ನಿ ಬಹುಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ. ಭಾರತ ತಂಡವೀಗ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಸ್ನೇಹಿತರೊಂದಿಗೆ ಫ್ಲೋರಿಡಾದಲ್ಲಿ ಸಮಯ ಕಳೆದಿದ್ದಾರೆ. ತಮ್ಮ ಜೀವನದಲ್ಲಿ ಅನುಷ್ಕಾ ಅತಿ ಹೆಚ್ಚು ಪ್ರಭಾವ ಬೀರಿದ್ದು, ವೃತ್ತಿ ಜೀವನದ ಏರಿಳಿತಗಳಲ್ಲಿ ಬೆನ್ನಲುಬು ಆಗಿ ನಿಂತಿದ್ದಾರೆ ಎಂದು ಪತ್ನಿಯನ್ನು ಶ್ಲಾಘಿಸಿದ್ದರು. ಇನ್ನೊಂದೆಡೆ ತಮ್ಮ ಜೀವನದಲ್ಲಿ ಭೇಟಿಯಾದ ಅತ್ಯಂತ ಶಾಂತ ವ್ಯಕ್ತಿ ವಿರಾಟ್ ಅವರಾಗಿದ್ದಾರೆ ಎಂದು ಅನುಷ್ಕಾ ಹೇಳಿಕೆ ನೀಡಿದ್ದರು. ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲವೆಂಬ ವದಂತಿಗಳು ಹಬ್ಬಿದ್ದವು. ತಂಡದಲ್ಲಿ ಒಳ ಜಗಳ ಉಂಟಾಗಿದ್ದು, ಬಣ ರೂಪುಗೊಂಡಿದೆ ಎಂಬುದರ ಬಗ್ಗೆ ಮಾಹಿತಿಗಳು ಬಂದಿದ್ದವು. ಇದಕ್ಕೆ ಪುಷ್ಠಿ ನೀಡುವಂತೆಯೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನು ರೋಹಿತ್ ಶರ್ಮಾ ಅನ್ ಫಾಲೋ ಮಾಡಿದ್ದರು. ಆದರೆ ವಿಂಡೀಸ್ ಪ್ರವಾಸಕ್ಕೂ ಮುನ್ನ ಈ ಎಲ್ಲ ಮಿಥ್ಯಾ ಆರೋಪಗಳನ್ನು ಕ್ಯಾಪ್ಟಿನ್ ಕೊಹ್ಲಿ ತಳ್ಳಿ ಹಾಕಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LTIBcM