'ಅವರಿಗೆ ಮೆದುಳಿಲ್ಲ' ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್‌ಗೆ ಚಾನ್ಸ್‌ ನೀಡದ ಬಗ್ಗೆ ಬಟ್‌ ಗರಂ!

ಮುಂಬೈ: ಹಾಗೂ ವಿರಾಟ್ ಕೊಹ್ಲಿ ಸಂಯೋಜನೆಯಲ್ಲಿ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರಿಗೆ ಟೆಸ್ಟ್ ತಂಡದಲ್ಲಿ ಸರಿಯಾಗಿ ಚಾನ್ಸ್ ನೀಡದ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ನ್ಯೂಜಿಲೆಂಡ್‌ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 372 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಈ ಸರಣಿಯಲ್ಲಿ ಒಟ್ಟು 14 ವಿಕೆಟ್‌ ಪಡೆದಿದ್ದ ಆರ್‌ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಂಗ್ಲೆಂಡ್‌ ಟೆಸ್ಟ್ ಸರಣಿ ವೇಳೆ ಆರ್‌ ಅಶ್ವಿನ್‌ಗೆ ಯಾಕೆ ಅವಕಾಶ ನೀಡಲಾಗಿರಲಿಲ್ಲ ಎಂಬಂತೆ ಅಭಿಮಾನಿಯೊಬ್ಬರು ಸಲ್ಮಾನ್‌ ಬಟ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಪಾಕ್‌ ಮಾಜಿ ನಾಯಕ, ಅವರ ತಲೆಯಲ್ಲಿ ಮೆದುಳು ಇರಲಿಲ್ಲ ಹಾಗೂ ಈ ಪ್ರಶ್ನೆಗೆ ಆಗಿನ ಟೀಮ್‌ ಮ್ಯಾನೇಜ್‌ಮೆಂಟ್ ಉತ್ತರ ನೀಡಬೇಕು ಎಂದು ಹೇಳಿದರು. "ಇದರ ಬಗ್ಗೆ ನಾನು ಏನು ಹೇಳಬಹುದು? ಅವರು(ಅಶ್ವಿನ್‌) ಆಡಬೇಕೆಂದು ನಾವು ಪದೇ-ಪದೆ ಹೇಳುತ್ತಿದ್ದೆವು. ಈಗಲೂ ನಾನು ಹೇಳುತ್ತೇನೆ, ಇತರರಿಗಿಂತ ಆರ್‌ ಅಶ್ವಿನ್ ಅತ್ಯುತ್ತಮ ಸ್ಪಿನ್ನರ್‌. ಪ್ರಸ್ತುತ ಸನ್ನಿವೇಶದಲ್ಲಿ ಅವರು ಅದ್ಭುತ ಸ್ಪಿನ್ನರ್‌ ಆಗಿದ್ದಾರೆ. ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಅವರು ಯಾಕೆ ಆಡಲಿಲ್ಲ? ರವಿ ಶಾಸ್ತ್ರಿ ಹಾಗೂ ನಾಯಕ ಇದಕ್ಕೆ ಸೂಕ್ತ ಉತ್ತರ ನೀಡಬಹುದು," ಎಂದು ಬಟ್‌ ತಿಳಿಸಿದ್ದಾರೆ. "ತಂಡಕ್ಕೆ ಮರಳಿದಾಗಲೆಲ್ಲಾ ಅವರು ತಮ್ಮ ಮಹತ್ವವನ್ನು ಪ್ರತಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅವರ ಉಪಸ್ಥಿತಿ ತಂಡದಲ್ಲಿ ಹೆಚ್ಚಿನ ವಿಭಿನ್ನತೆಯನ್ನು ತಂದುಕೊಡುತ್ತದೆ. ಇದರ ಹೊರತಾಗಿಯೂ ಅವರನ್ನು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡಿಸದೆ ಇದ್ದಿದ್ದು ನಿಜಕ್ಕೂ ನನಗೆ ಆಘಾತ ತಂದಿತ್ತು. ಆದರೆ, ಅನುಭವ ಇಲ್ಲದ ಬೌಲರ್‌ಗಳನ್ನು ಇಲ್ಲಿ ಆಡಿಸಲಾಗಿತ್ತು," ಎಂದು ಸಲ್ಮಾನ್‌ ಬಟ್‌ ತಮ್ಮ ಮಾತನ್ನು ಮುಗಿಸಿದರು. ನ್ಯೂಜಿಲೆಂಡ್‌ ವಿರುದ್ಧ ತವರು ಸರಣಿಗಳಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿರುವ ಭಾರತ ತಂಡ ಇದೇ ತಿಂಗಳಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ. ಕುಂಬ್ಳೆ ದಾಖಲೆ ಮುರಿದಿದ್ದ ಅಶ್ವಿನ್‌: ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಟಾಮ್‌ ಲೇಥಮ್‌ ಅವರನ್ನು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ದಾಖಲೆಯ 8ನೇ ಬಾರಿ ಔಟ್‌ ಮಾಡಿದ ಅಶ್ವಿನ್‌, ಇದೇ ವೇಳೆ ವರ್ಷ ಒಂದರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಬಾರಿ 50ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು. ಪಂದ್ಯದ ಮೂರನೇ ದಿನದಾಟದಲ್ಲಿ 17 ಓವರ್‌ಗಳನ್ನು ಎಸೆದ ಆಫ್‌ ಸ್ಪಿನ್ನರ್‌ 27ಕ್ಕೆ 3 ವಿಕೆಟ್‌ಗಳನ್ನು ಪಡೆದರು. ಅಶ್ವಿನ ವರ್ಷ ಒಂದರಲ್ಲಿ 50 ಟೆಸ್ಟ್‌ ವಿಕೆಟ್‌ಗಳ ಸಾಧನೆಯನ್ನು ನಾಲ್ಕು ಬಾರಿ ಮಾಡಿದ್ದಾರೆ. 2015ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಅನಿಲ್‌ ಕುಂಬ್ಳೆ ಮತ್ತು ಮೂರು ಬಾರಿ ಈ ಸಾಧನೆ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rH3VGA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...