ಅಟ್ಟಾರಿ ಮಾರ್ಗದಿಂದ ವ್ಯಾಪಾರ: ಪಾಕಿಸ್ತಾನದೊಂದಿಗಿನ ಗಡಿ ತೆರೆಯಲು ಸಿಧು ಒತ್ತಾಯ

ಅಮೃತಸರ: ತಮ್ಮ ಪರ ಪ್ರೇಮದಿಂದ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ , ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಡಿಯಲ್ಲಿ ಭಾರಿ ಭದ್ರತೆಯ ನಡುವೆಯೂ ಉಗ್ರರು ಒಳನುಸುಳಿ ಬಂದು ಸೈನಿಕರು ಮತ್ತು ಉಗ್ರರನ್ನು ಹತ್ಯೆ ಮಾಡುತ್ತಿರುವಾಗ, ಅಟ್ಟಾರಿ- ವಾಘಾ ಗಡಿಯನ್ನು ವ್ಯಾಪಾರಕ್ಕೆ ತೆರೆಯುವಂತೆ ಸಿಧು ಒತ್ತಾಯಿಸಿದ್ದಾರೆ. ಗಡಿಯನ್ನು ನಿರ್ಬಂಧ ಮುಕ್ತಗೊಳಿಸುವ ಪರ ಮತ್ತೆ ಬ್ಯಾಟ್ ಬೀಸಿರುವ ಸಿಧು, ಸಾಂಪ್ರದಾಯಿಕ ರೇಷ್ಮೆ ಮಾರ್ಗ ತೆರೆದರೆ, ಪಂಜಾಬ್ ಆರ್ಥಿಕತೆ ಗಣನೀಯ ಪ್ರಗತಿ ಕಾಣಲಿದೆ ಎಂದು ಹೇಳಿದ್ದಾರೆ. ಪಂಜಾಬ್ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ (ಪಿಐಟಿಇಎಕ್ಸ್) ಸಂದರ್ಭದಲ್ಲಿ ಶನಿವಾರ ಮಾತನಾಡಿದ ಸಿಧು, ಮುಂಬಯಿ ಮತ್ತು ಕರಾಚಿ ನಡುವೆ ವ್ಯಾಪಾರ ಮಾರ್ಗ ಇರಬೇಕಾದರೆ, ಪಂಜಾಬ್ ಜತೆಗೆ ಏಕೆ ಇರಬಾರದು ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದಿಂದ ಕಳ್ಳಮಾರ್ಗಗಳಲ್ಲಿ ಪಂಜಾಬ್‌ಗೆ ಮಾದಕವಸ್ತು ಪೂರೈಕೆಯಾಗುತ್ತಿದೆ ಎಂಬ ಆರೋಪಗಳಿವೆ. ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ಪಂಜಾಬ್ ಗಡಿಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪ್ರತಿಪಾದಿಸಿದ್ದರು. ವಿಶ್ವ ಯುದ್ಧಗಳ ಸಂದರ್ಭದಲ್ಲಿ ಯುರೋಪಿಯನ್ ದೇಶಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೂ ಯುರೋಪಿಯನ್ ದೇಶಗಳು ಒಂದೇ ವೀಸಾದಡಿ ತಮ್ಮ ಗಡಿಗಳನ್ನು ತೆರೆದುಕೊಂಡಿವೆ ಎಂದು ಸಿಧು ಉದಾಹರಣೆ ನೀಡಿದ್ದಾರೆ. ಇದರಿಂದ ಭಾರತದ ಸರಕುಗಳನ್ನು ನೆರೆಯ ದೇಶದಲ್ಲಿ ಮಾರಬಹುದು. ಅಟ್ಟಾರಿಯಿಂದ ಪಾಕಿಸ್ತಾನ ಕೇವಲ 20 ಕಿಮೀ ದೂರದಲ್ಲಿದೆ. ಈಗ ಅದೇ ಸರಕುಗಳು ದುಬೈ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಿದೆ ಎಂದು ತಿಳಿಸಿದ್ದಾರೆ. ಅಟ್ಟಾರಿ ಗಡಿಯ ಇಂಟಿಗ್ರೇಟೆಡ್ ಚೆಕ್ ಪಾಯಿಂಟ್‌ಗಳಲ್ಲಿ (ಐಸಿಪಿ) ಭವಿಷ್ಯದಲ್ಲಿ ಸ್ಕ್ಯಾನರ್‌ಗಳನ್ನು ಅಳವಡಿಸುವ ಬಗ್ಗೆ ಕೇಳಿದ್ದೇನೆ. ವ್ಯಾಪಾರವನ್ನು ಉತ್ತೇಜಿಸುವ ಯಾವುದೇ ಹೆಜ್ಜೆಯನ್ನು ಸ್ವಾಗಿಸುತ್ತೇನೆ ಎಂದು ಸಿಧು ಹೇಳಿದ್ದಾರೆ. ಧಾನ್ಯಗಳಿಗೂ 67,000ಕ್ಕೂ ಹೆಚ್ಚು ಮಂದಿ ಕರ್ತಾರ್ಪುರ ಸಾಹಿಬ್‌ಗೆ ಪ್ರಯಾಣಿಸಿದ್ದಾರೆ. ಆದರೆ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಪಾಕಿಸ್ತಾನದೊಂದಿಗಿನ ಗಡಿಯನ್ನು ತೆರೆದ ಕೆಲವೇ ದಿನಗಳಲ್ಲಿ ಗೋಧಿ ಮತ್ತು ಭತ್ತದ ಎಂಎಸ್‌ಪಿ ಏರಿಕೆಯಾಗಲಿದೆ. ಇತರೆ ತರಕಾರಿಗಳ ಬೆಲೆಯೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಟ್ಟಾರಿ-ವಾಘಾ ಗಡಿಯನ್ನು ತೆರೆದರೆ 60 ವರ್ಷಗಳ ಅಭಿವೃದ್ಧಿ ಆರು ತಿಂಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದಿದ್ದಾರೆ. ಪಂಜಾಬ್ ಸರ್ಕಾರವು ಧಾನ್ಯಗಳನ್ನು ಖರೀದಿಸಲಿದೆ ಮತ್ತು ಧಾನ್ಯಗಳಿಗಾಗಿ ರೈತರಿಗೆ ಎಂಎಸ್‌ಪಿ ನೀಡಲಿದೆ ಎಂದು ತಾವು ದೊಡ್ಡ ಘೋಷಣೆ ಮಾಡುತ್ತಿರುವುದಾಗಿ ಸಿಧು ಹೇಳಿದ್ದಾರೆ. ನಾವು ಹೊರಗಿನಿಂದ ಧಾನ್ಯಗಳನ್ನು ಖರೀದಿಸುತ್ತಿರುವಾಗ ಅವುಗಳಿಗೆ ಎಂಎಸ್‌ಪಿ ನೀಡಲು ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/3Dp1RVR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...