ಮ್ಯಾನ್ಮಾರ್‌ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕಿ ಜೈಲು ಶಿಕ್ಷೆ 2 ವರ್ಷಗಳಿಗೆ ಇಳಿಕೆ

ಬ್ಯಾಂಕಾಕ್‌: ಕೋವಿಡ್‌ ನಿಯಮ ಉಲ್ಲಂಘನೆ ಹಾಗೂ ಶಾಂತಿಗೆ ಭಂಗ ಉಂಟುಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಗರಿಕ ಹೋರಾಟಗಳ ನಾಯಕಿ ಅವರಿಗೆ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಬಳಿಕ ಈ ಜೈಲು ಶಿಕ್ಷೆಯನ್ನು ಅಲ್ಲಿನ ಸೇನಾ ಮುಖ್ಯಸ್ಥರು ಎರಡು ವರ್ಷಗಳಿಗೆ ಇಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಸೇನಾ ದಂಗೆಯ ನಂತರ 76 ವರ್ಷದ ಸೂಕಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಕೋವಿಡ್‌ ನಿಯಮ ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಗಳು ಸೇರಿದಂತೆ ಒಟ್ಟು 10 ಆರೋಪಗಳು ಅವರ ಮೇಲಿವೆ. ಈ ಆರೋಪಗಳ ಸರಣಿಯ ಒಂದು ಪ್ರಕರಣದಲ್ಲಿ ಮಾತ್ರ ಪ್ರಸ್ತುತ ತೀರ್ಪು ಹೊರಬಿದ್ದಿದ್ದು, ಉಳಿದೆಲ್ಲಾ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ 100 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆಂಗ್‌ ಸಾನ್‌ ಸೂಕಿ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗುವುದೋ ಅಥವಾ ಗೃಹ ಬಂಧನದಲ್ಲಿರಿಸಲಾಗುವುದೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ನ್ಯಾಯಾಲಯ ಏನನ್ನೂ ಹೇಳಿಲ್ಲ. ಈ ಹಿಂದೆ ಪ್ರಜಾಪ್ರಭುತ್ವ ಪರ ಹೋರಾಟ ನಡೆಸಿದ ಸೂಕಿ ಅವರನ್ನು 1989ರಲ್ಲಿ 15 ವರ್ಷಗಳ ಕಾಲ ಗೃಹ ಬಂಧನಕ್ಕೆ ಒಳಡಿಸಲಾಗಿತ್ತು. ಜಾಗತಿಕ ಸಮುದಾಯ ಆಕ್ರೋಶಸೂಕಿ ಅವರಿಗೆ ಶಿಕ್ಷೆ ವಿಧಿಸಿರುವುದನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕು ತಜ್ಞರು ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ. "ಸೂಕಿ ಅವರ ವಿರುದ್ಧ ಆರೋಪಗಳು ಮತ್ತು ತೀರ್ಪು ಎರಡೂ ವಂಚನೆಯಿಂದ ಕೂಡಿವೆ. ಮ್ಯಾನ್ಮಾರ್‌ನ ನ್ಯಾಯಾಂಗವು ಅಲ್ಲಿನ ಮಿಲಿಟರಿ ಪ್ರಾಬಲ್ಯದ ಸರಕಾರದ ಕೈಗೊಂಬೆಯಾಗಿದ್ದು, ವಿಚಾರಣೆಯು ನ್ಯಾಯೋಚಿತವಾಗಿ ನಡೆದಿಲ್ಲ,'' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮಾಜಿ ಅಧಿಕಾರಿ ಯಾಂಘೀ ಲೀ ಹೇಳಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸೇರಿದಂತೆ ಇತರೆ ಪ್ರಮುಖ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳೂ ಈ ತೀರ್ಪನ್ನು ಖಂಡಿಸಿವೆ. ಅಧ್ಯಕ್ಷರಿಗೂ ನಾಲ್ಕು ವರ್ಷ ಜೈಲು ಮ್ಯಾನ್ಮಾರ್‌ ಅಧ್ಯಕ್ಷರಾಗಿದ್ದ ವಿನ್‌ ಮಿಯಿಂಟ್‌ ಅವರಿಗೂ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಸೂಕಿ ಜತೆಗೆ ಅವರ ಶಿಕ್ಷೆಯನ್ನೂ ಅರ್ಧಕ್ಕೆ ಇಳಿಸಲಾಯಿತು.


from India & World News in Kannada | VK Polls https://ift.tt/3dpVcA5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...