ಗುಜರಾತಿನ ಗೋದ್ರಾ ಮಾರಣಹೋಮಕ್ಕೆ ಕಾರಣರಾದವರಿಗೆ ತುರ್ತು ಪರಿಸ್ಥಿತಿಯನ್ನು ಟೀಕಿಸೋ ಹಕ್ಕಿಲ್ಲ, ಬಿ.ಕೆ ಹರಿಪ್ರಸಾದ್

ಬೆಂಗಳೂರು: ಗುಜರಾತಿನ ಗೋದ್ರಾ ಮಾರಣಹೋಮಕ್ಕೆ ಕಾರಣರಾದವರಿಗೆ ತುರ್ತು ಪರಿಸ್ಥಿತಿ ಯನ್ನು ಟೀಕಿಸಲು ಹಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುಜರಾತಿನ ಗೋದ್ರಾ ಮಾರಣ ಹೋಮಕ್ಕೆ ಕಾರಣರಾಗಿ, ಸಾವಿರಾರು ಮುಗ್ಧ ಅಮಾಯಕರ ಕಗ್ಗೂಲೆ ಮತ್ತು ರೂ.೫,೦೦೦ ಕೋಟಿ ನಷ್ಟಕ್ಕೆ ಕಾರಣರಾದವರಿಗೆ ತುರ್ತು ಪರಿಸ್ಥಿತಿ ಯನ್ನು ಟೀಕಿಸಲು ಹಕ್ಕಿಲ್ಲ ಎಂದಿದ್ದಾರೆ. ವಿಕೃತ ಆನಂದವನ್ನು ಅನುಭವಿಸುವವರಿಗೆ ಗುಜರಾತಿನ ಹಿರಿಯ ಪೋಲಿಸ್ ಅಧಿಕಾರಿ ಡಿ.ಜಿ ವಂಝಾರ ರವರು ಹೇಳಿದ "ಗುಜರಾತಿನ ಸಬರ್ಮತಿ ಜೈಲಿನಲ್ಲಿರಬೇಕಾದವರು ಭಾರತವನ್ನು ಆಳುತ್ತಿದ್ದಾರೆ" ಎಂಬ ಮಾತುಗಳನ್ನು ನೆನಪಿಸಬೇಕಾಗಿದೆ. ಅಮೆರಿಕದ ಪ್ರಭಾವಿ ವಿದೇಶಾಂಗ ಸಚಿವ ಹೆನ್ರಿ ಕಿಸಿಂಗರ್, ತಮ್ಮ ಆತ್ಮ ಚರಿತ್ರೆಯಲ್ಲಿ ಇಂದಿರಾಗಾಂಧಿಯವರನ್ನು ಹೊಗಳುತ್ತಾ 'ಇಂದಿರಾಗಾಂಧಿ ಒಬ್ಬ ಧೈರ್ಯ ಶಾಲಿ ಮತ್ತು ಚಾಣಾಕ್ಷ ನಾಯಕಿ' ಎಂದು ಬಣ್ಣಿಸಿದ್ದರು. ಇಂದಿರಾಗಾಂಧಿಯವರು ಪಾಕಿಸ್ತಾನವನ್ನು ಇಬ್ಬಾಗಮಾಡಿ, ಭವಿಷ್ಯದ ಪೀಳಿಗೆಗೆ ಆದರ್ಶರಾಗಿದ್ದಾರೆ.ಇವರು ಭಾರತವನ್ನು ಅಣುಶಕ್ತಿಯ ರಾಷ್ಟ್ರವನ್ನಾಗಿ ಮಾಡಿದ್ದಲ್ಲದೆ, ಆಹಾರ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಮಾಡಿದರು. ಬಿಜೆಪಿ ಸರ್ಕಾರಗಳ ಕೊಡುಗೆ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ಟೀಕಿಸುವ ಬಿಜೆಪಿ ಸರ್ಕಾರ ಈಗ ಅಘೋಷಿತ ತುರ್ತುಪರಿಸ್ಥಿತಿಯನ್ನು ಬಳಸಿ ರಾಜಕೀಯ ವಿರೋಧಿಗಳನ್ನು ಹಣಿಸಲು ಅವರ ಮೇಲೆ ಸಿಬಿಐ, ಐಟಿ, ಇಡಿ ಚೂಬಿಟ್ಟು, ಸದಬಡಿಯುತ್ತಿದೆ. ಈ ದಮನಕಾರಿ ಸರ್ಕಾರ ವಿರೋಧ ಪಕ್ಷಗಳ ಸರ್ಕಾರಗಳನ್ನು ಹೆದರಿಸಿ, ಆಮಿಷಗಳಿಂದ, ಪಕ್ಷಾಂತರ ಗಳಿಂದ ಉರುಳಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಸರ್ಕಾರ ವಾಕ್ ಸ್ವಾತಂತ್ರ್ಯಗಳ ಹೋರಾಟಗಾರರನ್ನು ಜೈಲಿನಲ್ಲಿರಿಸಿ ವೃದ್ದರು, ನಿಶ್ಯಕ್ತಿಯಿಂದ ನರಳುವವರಿಗೂ ಸಾಧಾರಣ ವೈದ್ಯಕೀಯ ನೆರವನ್ನೂ ಕೊಡದೆ ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಇವರಿಗೆ ತುರ್ತು ಪರಿಸ್ಥಿತಿಯನ್ನು ಟೀಕಿಸುವ ಅರ್ಹತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನುಚ್ಚುನೂರು ಮಾಡುತ್ತಿರುವ ಫ್ಯಾಸಿಸ್ಟರು ಇಂದಿರಾಗಾಂಧಿಯವರನ್ನು ಟೀಕಿಸುವ ಅಧಿಕಾರ, ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ


from India & World News in Kannada | VK Polls https://ift.tt/362dljD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...