ಏನಿದು ಸೀಮಾ ನಿರ್ಣಯ? ಜಮ್ಮು ಮತ್ತು ಕಾಶ್ಮೀರದ ಮರು ರಚನೆಯಲ್ಲಿ ಇದರ ಪಾತ್ರವೇನು?: ಸಂಪೂರ್ಣ ವಿವರ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸುಮಾರು ಎರಡು ವರ್ಷದ ಬಳಿಕ ಪ್ರಧಾನಿ ಅವರು ಅಲ್ಲಿನ ರಾಜಕೀಯ ಮುಖಮಡರ ಜತೆ ಗುರುವಾರ ಮೊದಲ ಬಾರಿಗೆ ಸಭೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯನ್ನು ನಡೆಸುವ ಹಾಗೂ ಅದಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವ ಬಗ್ಗೆ ಕೂಡ ಪ್ರಧಾನಿ ಮೋದಿ ಈ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂದ ವಿಷಯವೆಂದರೆ ಅದು (ಡೆಲಿಮಿಟೇಷನ್) ಅಥವಾ . ಗುರುವಾರದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೋಕಸಭೆ ಅಥವಾ ವಿಧಾನಸಭೆ ಕ್ಷೇತ್ರಗಳ ಗಡಿಗಳನ್ನು ಮರು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಲ್ಲ ರಾಜಕೀಯ ಮುಖಂಡರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ನಮ್ಮ ಆದ್ಯತೆ. ಸೀಮಾ ನಿರ್ಣಯವು ತ್ವರಿತಗತಿಯಲ್ಲಿ ನಡೆಯಬೇಕಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರವು ಚುನಾಯಿತ ಸರಕಾರವನ್ನು ಪಡೆಯಲು ಅನುಕೂಲವಾಗಿವಂತೆ ಚುನಾವಣೆ ನಡೆಸಬಹುದಾಗಿದ್ದು, ಇದು ಅಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಬಲ ನೀಡಲಿದೆ' ಎಂದು ಮೋದಿ ಹೇಳಿದ್ದಾರೆ. ಸೀಮಾ ನಿರ್ಣಯ ಅಗತ್ಯವಿಲ್ಲ: ಒಮರ್ಆದರೆ, ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳ ಗಡಿಯನ್ನು ಪುನರ್ ರಚಿಸುವುದು ಅಗತ್ಯವಾಗಿಲ್ಲ ಎಂದು ಅಲ್ಲಿನ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರೋಧ ವ್ಯಕ್ತಪಡಿಸಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಏಕೆ ಸೀಮಾ ನಿರ್ಣಯಕ್ಕೆ ಉದ್ದೇಶಿಸಲಾಗಿದೆ? ಸೀಮಾ ನಿರ್ಣಯದ ಅಗತ್ಯವಿಲ್ಲ ಎಂದು ನಾವು ಹೇಳಿದ್ದೇವೆ. ಇತರೆ ರಾಜ್ಯಗಳಲ್ಲಿ ಕ್ಷೇತ್ರಗಳ ಸೀಮಾ ನಿರ್ಣಯ 2026ರಲ್ಲಿ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕವೇಕೆ? 2019ರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಣಯವು ರಾಜ್ಯವನ್ನು ಭಾರತದೊಂದಿಗೆ ಸೇರಿಸುವುದ್ದಾಗಿದ್ದರೆ, ಈಗ ನಡೆಸುವ ಸೀಮಾ ನಿರ್ಣಯವು ನಮ್ಮನ್ನು ಪರಿತ್ಯಜಿಸಲಾಗಿದೆ ಎಂಬ ಅರ್ಥವನ್ನು ನೀಡುವ ಮೂಲಕ ಆ ಪ್ರಕ್ರಿಯೆಯನ್ನು ವಿಫಲಗೊಳಿಸುತ್ತದೆ' ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಬಾಕಿಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿತ್ತು. ಇಲ್ಲಿ ಕ್ಷೇತ್ರಗಳ ಗಡಿಗಳ ಮರು ನಿರ್ಣಯ ನಡೆದ ಕೂಡಲೇ ಚುನಾಯಿತ ಶಾಸಕಾಂಗ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಹೇಳಿದೆ. 2018ರಲ್ಲಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದಕ್ಕೆ ಪಡೆದುಕೊಂಡ ಸಂದರ್ಭದಿಂದಲೂ ಇಲ್ಲಿ ವಿಧಾನಸಭೆ ಚುನಾವಣೆ ಬಾಕಿ ಇದೆ. ಏನಿದು ಸೀಮಾ ನಿರ್ಣಯ?ಒಂದು ಪ್ರದೇಶದಲ್ಲಿ ಉಂಟಾದ ಜನಸಂಖ್ಯಾ ಬದಲಾವಣೆಗಳನ್ನು ತೋರಿಸುವ ಸಲುವಾಗಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಗಡಿ ವ್ಯಾಪ್ತಿಗಳನ್ನು ಮರು ರಚಿಸುವುದು ಸೀಮಾ ನಿರ್ಣಯವಾಗಿದೆ. ಸೀಮಾ ನಿರ್ಣಯ ಆಯೋಗವು ಸ್ವತಂತ್ರ ಸಂಸ್ಥೆಯಾಗಿದೆ. ಇದರ ಕಾರ್ಯಾಚರಣೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳು ಹಸ್ತಕ್ಷೇಪ ನಡೆಸುವಂತಿಲ್ಲ. ಈ ಆಯೋಗವು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಕೆಲಸ ಮಾಡಲಿದ್ದು, ಮುಖ್ಯ ಚುನಾವಣಾ ಆಯುಕ್ತ ಅಥವಾ ಚುನಾವಣಾ ಆಯುಕ್ತ ಹಾಗೂ ರಾಜ್ಯ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ. ಜಮ್ಮು ಮತ್ತು ಕಾಶ್ಮೀರದ ಐವರು ಸಂಸದರು ಇದರ ಸಹ ಸದಸ್ಯರಾಗಿರುತ್ತಾರೆ. ಆದರೆ ಅವರ ಶಿಫಾರಸುಗಳನ್ನು ಆಯೋಗವು ಪರಿಗಣಿಸಲೇಬೇಕು ಎಂದಿಲ್ಲ. ಸೀಮಾ ನಿರ್ಣಯ ಆಯೋಗವು ನಡೆಸಿದ್ದ ಸಭೆಗಳನ್ನು ಫಾರೂಕ್ ಅಬ್ದುಲ್ಲಾ ಸೇರಿದಂತೆ ನ್ಯಾಷನಲ್ ಕಾನ್ಫರೆನ್ಸ್‌ನ ಮೂವರು ಸಂಸದರು ಬಹಿಷ್ಕರಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿರುವ ಪ್ರಕರಣವೊಂದು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುರಿಂದ, ಆಯೋಗದ ಅಧ್ಯಕ್ಷರು ತಮ್ಮ ಅಹವಾಲುಗಳನ್ನು ಆಲಿಸುವುದಾದರೆ ತಾವು ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಹೇಳಿದ್ದಾರೆ. 370ನೇ ವಿಧಿಯ ರದ್ದತಿ ಹಾಗೂ ಸೀಮಾ ನಿರ್ಣಯ ಚಟುವಟಿಕೆಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಇತರೆ ಪಕ್ಷಗಳು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಜಮ್ಮು ಮತ್ತು ಕಾಶ್ಮೀರದ ಸೀಮಾ ನಿರ್ಣಯವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವವರೆಗೂ ಜಮ್ಮು ಮತ್ತು ಕಾಶ್ಮೀರದ ಲೋಕಸಭೆ ಕ್ಷೇತ್ರಗಳ ಸೀಮಾನಿರ್ಣಯದ ಚಟುವಟಿಕೆಯನ್ನು ಭಾರತೀಯ ಸಂವಿಧಾನದ ನಿಯಮಗಳಂತೆ ನಡೆಸಲಾಗುತ್ತಿತ್ತು. ಹಾಗೂ ವಿಧಾನಸಭೆ ಕ್ಷೇತ್ರಗಳ ಮರು ವಿಂಗಡಣೆ ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಹಾಗೂ ಜಮ್ಮು ಮತ್ತು ಕಾಶ್ಮೀರ ಜನ ಪ್ರತಿನಿಧಿ ಕಾಯ್ದೆ 1957ಕ್ಕೆ ಅನುಗುಣವಾಗಿ ನಡೆಯುತ್ತಿತ್ತು. 1981ರ ಜನಗಣತಿಯ ಪ್ರಕಾರ 1995ರಲ್ಲಿ ಕೊನೆಯ ಬಾರಿ ಇಲ್ಲಿ ಸೀಮಾ ನಿರ್ಣಯ ನಡೆದಿತ್ತು. 1991ರಲ್ಲಿ ರಾಜ್ಯದಲ್ಲಿ ಗಣತಿ ನಡೆದಿರಲಿಲ್ಲ. 2001ರ ಗಣತಿ ಬಳಿಕ 2026ರವರೆಗೂ ಸೀಮಾನಿರ್ಣಯ ನಡೆಸದಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಕಾನೂನನ್ನು ಅಂಗೀಕರಿಸಿತ್ತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಹೇಗೆ ಮುಖ್ಯ?ವಿಶೇಷ ಸ್ಥಾನಮಾನವನ್ನು ಕಳೆದುಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಗಳೆರಡನ್ನೂ ಭಾರತ ಸಂವಿಧಾನಕ್ಕೆ ಅನುಗುಣವಾಗಿ ನಿರ್ಧರಿಸಬೇಕಾಗುತ್ತದೆ. ಇದಕ್ಕಾಗಿ ಕಳೆದ ವರ್ಷ ಹೊಸ ಸೀಮಾ ನಿರ್ಣಯ ಆಯೋಗವನ್ನು ಸ್ಥಾಪಿಸಲಾಗಿತ್ತು. ಕೋವಿಡ್ ಬಿಕ್ಕಟ್ಟಿನ ಕಾರಣ ಅದನ್ನು ವಿಸ್ತರಿಸಲಾಗಿದೆ. 2019ರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನಾ ಕಾಯ್ದೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಶಾಸಕಾಂಗವು 90 ಸೀಟುಗಳನ್ನು ಹೊಂದಲಿದೆ. ಕಳೆದ ವಿಧಾನಸಭೆಗಿಂತ ಏಳು ಹೆಚ್ಚಿನ ಕ್ಷೇತ್ರ್ಳು ಸೇರ್ಪಡೆಯಾಗಲಿವೆ. 2019ಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಸೀಟುಗಳು ಲಡಾಖ್‌ನ ನಾಲ್ಕು ಕ್ಷೇತ್ರಗಳನ್ನು ಒಳಗೊಂಡಂತೆ 87 ಇತ್ತು. ಇನ್ನು 24 ವಿಧಾನಸಭೆ ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವ್ಯಾಪ್ತಿಯಲ್ಲಿ ಇವೆ. ಸೀಮಾ ನಿರ್ಣಯಕ್ಕೆ ವಿರೋಧವೇಕೆ?ಒಟ್ಟು 87 ಕ್ಷೇತ್ರಗಳ ಪೈಕಿ 46 ಕಾಶ್ಮೀರದಲ್ಲಿ ಹಾಗೂ 37 ಕ್ಷೇತ್ರಗಳು ಜಮ್ಮು ಭಾಗದಲ್ಲಿ ಇವೆ. ಸೀಮಾ ನಿರ್ಣಯವು ಆಧಾರದಲ್ಲಿ ನಡೆಯಲಿದೆ. ಆದರೆ 2011ರ ಜನಗಣತಿ ಆಧಾರದಲ್ಲಿ ಸೀಮಾ ನಿರ್ಣಯ ಮಾಡುವುದನ್ನು ಜಮ್ಮುವಿನ ಅನೇಕ ಗುಂಪುಗಳು ವಿರೋಧಿಸುತ್ತಿವೆ. 20211ರ ಜನಗಣತಿ ಪ್ರಕಾರ ಕಾಶ್ಮೀರದ ಜನಸಂಖ್ಯೆ 68 ಲಕ್ಷ ಇದ್ದರೆ, ಜಮ್ಮುವಿನ ಜನಸಂಖ್ಯೆ 53 ಲಕ್ಷ ಇದೆ. ಜನಸಂಖ್ಯೆ ಅನುಪಾತದಲ್ಲಿ ಜಮ್ಮುವಿಗಿಂತ ಕಾಶ್ಮೀರ ಇನ್ನೂ ಹೆಚ್ಚಿನ ಸೀಟುಗಳನ್ನು ಪಡೆದುಕೊಳ್ಳಲಿದೆ. ದೇಶಾದ್ಯಂತ 2026ರಲ್ಲಿ ಸೀಮಾ ನಿರ್ಣಯ?ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ ಸೀಮಾ ನಿರ್ಣಯ ನಡೆದಿದ್ದು 1994-95ರಲ್ಲಿ. ಆಗ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕ್ಷೇತ್ರಗಳನ್ನು 76ರಿಂದ 87ಕ್ಕೆ ಹೆಚ್ಚಿಸಲಾಗಿತ್ತು. ಕಾಶ್ಮೀರದ ಸೀಟುಗಳು 42 ರಿಂದ 46ಕ್ಕೆ ಹಾಗೂ ಜಮ್ಮುವಿನ ಸೀಟುಗಳ ಸಂಖ್ಯೆ 32 ರಿಂದ 37ಕ್ಕೆ ಏರಿಕೆಯಾಗಿತ್ತು. 2026ರಲ್ಲಿ ದೇಶದ ಇತರೆ ರಾಜ್ಯಗಳಲ್ಲಿಯೂ ಸೀಮಾ ನಿರ್ಣಯ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಲೋಕಸಭೆ ಸೀಟುಗಳ ಸಂಖ್ಯೆ 543 ರಿಂದ 888ಕ್ಕೆ ಏರಿಕೆಯಾಗುವ ಹಾಗೂ ರಾಜ್ಯಸಭೆ ಸೀಟುಗಳ ಸಂಖ್ಯೆ 245 ರಿಂದ 384ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ.


from India & World News in Kannada | VK Polls https://ift.tt/2T49Oi4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...