ಐಎಂಎ ವಂಚನೆ ಪ್ರಕರಣ; ಶೀಘ್ರದಲ್ಲೇ ಜಪ್ತಿಯಾಗಲಿದೆ ಮಾಜಿ ಸಚಿವ ರೋಷನ್‌ ಬೇಗ್ ಆಸ್ತಿ!

ಬೆಂಗಳೂರು: ಹೈಕೋರ್ಟ್‌ ತಪರಾಕಿ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ, ಐಎಂಎ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ಕೊನೆಗೂ ಕ್ರಮ ಕೈಗೊಂಡಿದೆ. ಇಮ್ರಾನ್‌ ಪಾಷಾ ಮತ್ತಿತರರು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಕುರಿತು ಸರಕಾರ ಶುಕ್ರವಾರ ಮಾಹಿತಿ ನೀಡಿದೆ. ಏಪ್ರಿಲ್‌ನಲ್ಲಿಯೇ ನಿರ್ದೇಶನ ನೀಡಿದ್ದರೂ ಸರಕಾರ ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿದ ಕ್ರಮವನ್ನು ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದ್ದರ ಹೊರತಾಗಿಯೂ ಬೇಗ್‌ ಮಾಡಲು ಸರಕಾರ ಏಕೆ ನಿರ್ಧಾರ ಕೈಗೊಂಡಿಲ್ಲ. ಆರೋಪಿಯು ಆಸ್ತಿ ಪರಭಾರೆ ಮಾಡಿದರೆ ಯಾರು ಹೊಣೆ? ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ಕಾರ್ಯ ವಿಳಂಬ ಮಾಡಲಾಗುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿತ್ತು. ಸರಕಾರಿ ವಕೀಲರು, ‘ರೋಷನ್‌ ಬೇಗ್‌ ಆಸ್ತಿಗೆ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಬೇಗ್‌ ಆಸ್ತಿಯ ವಿವರಗಳ ಮಾಹಿತಿ ನೀಡಲು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರದಲ್ಲಿ ರೋಷನ್‌ ಬೇಗ್‌ ಆಸ್ತಿಯ ವಿವರಗಳಿವೆ. ಆಸ್ತಿಯ ಬಗ್ಗೆ ಸ್ಪಷ್ಟ ವಿವರ ಲಭ್ಯವಾದ ನಂತರ ಕೆಪಿಐಡಿ ಕಾಯಿದೆಯಡಿ ಜಪ್ತಿಗೆ ಕ್ರಮ ಜರುಗಿಸಲಾಗುತ್ತದೆ. ಆಸ್ತಿ ಪರಭಾರೆಗೂ ಮುನ್ನ ಹೈಕೋರ್ಟ್‌ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ‘ಸರಕಾರಿ ಶಾಲೆಗೆ ಐಎಂಎ ಕಂಪನಿಯು 10 ಕೋಟಿ ರೂ. ದೇಣಿಗೆ ನೀಡಿದೆ. ಆ ಹಣವನ್ನು ಹಿಂದಿರುಗಿಸಲು ಸಾಧ್ಯವಿಲ್ಲ’ ಎಂದು ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ಅದನ್ನು ಪರಿಗಣಿಸಿದ ನ್ಯಾಯಪೀಠ, ದೇಣಿಗೆ ನೀಡುವ ಸರಕಾರ ಮತ್ತು ಎಐಎಂ ಕಂಪನಿಯ ನಡುವೆ ಆಗಿರುವ ಒಪ್ಪಂದದ ಬಗೆಗಿನ ಕಾನೂನಾತ್ಮಕ ಅಂಶಗಳನ್ನು ನ್ಯಾಯಾಧಿಲಯ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಎಲ್ಲಾ ಪಕ್ಷಗಾರರ ವಾದ ಆಲಿಸಲಾಗುವುದು. ಠೇವಣಿದಾರರ ಹಣವನ್ನು ದೇಣಿಗೆ ನೀಡಬಹುದೇ? ಎಂಬ ಅಂಶದ ಕುರಿತು ವಾದ ಮಂಡಿಸುವಂತೆ ಸರಕಾರಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.


from India & World News in Kannada | VK Polls https://ift.tt/3zZiEOB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...