ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ: ಮಾಜಿ ಪೊಲೀಸ್ ಅಧಿಕಾರಿಗೆ 22 ವರ್ಷ ಜೈಲು ಶಿಕ್ಷೆ

ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ಸಂಘರ್ಷದ ಭಾರಿ ವಿವಾದ, ಪ್ರತಿಭಟನೆಗೆ ಕಾರಣವಾಗಿದ್ದ ಆಫ್ರಿಕಾ ಮೂಲದ ಅಮೆರಿಕನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶುಕ್ರವಾರ 22 ವರ್ಷ, 6 ತಿಂಗಳ ವಿಧಿಸಲಾಗಿದೆ. ನ್ಯಾಯಾಲಯದಲ್ಲಿ ಫ್ಲಾಯ್ಡ್ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದರೂ, ಕ್ಷಮೆ ಕೋರದ 45 ವರ್ಷದ ಚೌವಿನ್‌ಗೆ ನ್ಯಾಯಾಧೀಶ ಪೀಟರ್ ಕಾಹಿಲ್ ಶಿಕ್ಷೆ ತೀರ್ಪು ಪ್ರಕಟಿಸಿದರು. 30 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸುವಂತೆ ಕೋರಿದ್ದ ಪ್ರಾಸಿಕ್ಯೂಷನ್ ಮನವಿಯನ್ನು ಅವರು ಪುರಸ್ಕರಿಸಿದರು. 'ಈ ಜೈಲು ಶಿಕ್ಷೆ ಅವಧಿಯು ನಿಮ್ಮ ನಂಬಿಕೆ ಮತ್ತು ಅಧಿಕಾರದ ಸ್ಥಾನವನ್ನು ನೀವು ಉಲ್ಲಂಘಿಸಿದ ರೀತಿ ಹಾಗೂ ಮುಖ್ಯವಾಗಿ ಜಾರ್ಜ್ ಫ್ಲಾಯ್ಡ್ ವಿರುದ್ಧ ತೋರಿಸಿದ ಕ್ರೌರ್ಯದ ಆಧಾರದಲ್ಲಿ ನೀಡಲಾಗಿದೆ' ಎಂದು ಕಾಹಿಲ್ ಹೇಳಿದರು. ಫ್ಲಾಯ್ಡ್ ಅವರ ಏಳು ವರ್ಷದ ಮಗಳು ಮತ್ತು ಚೌವಿನ್ ಅವರ ತಾಯಿಯ ಮನವಿಗಳ ನಡುವೆ ನಡೆದ ತೀವ್ರ ವಾದ ವಿವಾದಗಳ ಬಳಿಕ ಶಿಕ್ಷೆಯ ತೀರ್ಪು ಪ್ರಕಟಿಸಲಾಗಿದೆ. ಅಮೆರಿಕದಲ್ಲಿನ ಜನಾಂಗೀಯ ದ್ವೇಷದ ವಿರುದ್ಧ ನೀಡಲಾಗಿರುವ ಐತಿಹಾಸಿಕ ಶಿಕ್ಷೆ ಇದು ಎಂದು ಫ್ಲಾಯ್ಡ್ ಕುಟುಂಬದ ವಕೀಲರು ವ್ಯಾಖ್ಯಾನಿಸಿದರು. 2020ರ ಮೇ ತಿಂಗಳಲ್ಲಿ 46 ವರ್ಷದ ಫ್ಲಾಯ್ಡ್ ಅವರನ್ನು ಮಿನ್ನೆಪೊಲಿಸ್‌ನ ಅಂಗಡಿಯೊಂದರಲ್ಲಿ ನಕಲಿ 20 ಡಾಲರ್ ಹಣ ಪಾವತಿಸಿದ ಅನುಮಾನದಡಿ ಚೌವಿನ್ ಹಾಗೂ ಅವರ ಸಹೋದ್ಯೋಗಿಗಳು ಬಂಧಿಸಿದ್ದರು. ಕೈಗಳಿಗೆ ಕೋಳ ತೊಡಿಸಿದ್ದ ಪೊಲೀಸರು, ಅವರ ಮುಖವನ್ನು ರಸ್ತೆಯಲ್ಲಿಯೇ ನೆಲದ ಮೇಲೆ ಮೊಣಕಾಲಿನಿಂದ ಒತ್ತಿಹಿಡಿದ ಚಿತ್ರ ವೈರಲ್ ಆಗಿತ್ತು. ಈ ದೃಶ್ಯವನ್ನು ಯುವತಿಯೊಬ್ಬಳು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಸುಮಾರು 10 ನಿಮಿಷಗಳವರೆಗೆ ಫ್ಲಾಯ್ಡ್ ಅವರ ಕುತ್ತಿಗೆಯನ್ನು ಚೌವಿನ್ ಒತ್ತಿ ಹಿಡಿದಿದ್ದರು. ಉಸಿರಾಡಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಫ್ಲಾಯ್ಡ್, ಜನರ ಕಣ್ಣಮುಂದೆಯೇ ನರಳಾಡಿ ಮೃತಪಟ್ಟಿದ್ದರು. ಈ ಘಟನೆ ಅಮೆರಿಕದಲ್ಲಿನ ಕಪ್ಪು ವರ್ಣೀಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.


from India & World News in Kannada | VK Polls https://ift.tt/2T7YFwI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...