ಮತ್ತೆ ಮೂರು ಜಿಲ್ಲೆಗಳಿಗೆ ಅನ್‌ಲಾಕ್‌ 2 ಭಾಗ್ಯ, ಮೈಸೂರಿಗೆ ತುಸು ರಿಲ್ಯಾಕ್ಸ್‌

ಬೆಂಗಳೂರು/ಮೈಸೂರು: ಮತ್ತೆ ಮೂರು ಜಿಲ್ಲೆಗಳಲ್ಲಿ ಜಾರಿಗೊಳಿಸಿ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. , , ಅನ್‌ಲಾಕ್‌ಗೆ ಒಳಗಾದ ಜಿಲ್ಲೆಗಳಾಗಿವೆ. ಇದೇ ವೇಳೆ ಮೈಸೂರಿಗೆ ತುಸು ರಿಲೀಫ್‌ ನೀಡಲಾಗಿದ್ದು, ಜಿಲ್ಲೆಯಲ್ಲಿ ಅನ್‌ಲಾಕ್‌ 1 ಜಾರಿಗೆ ಬರಲಿದೆ. ಕಳೆದೊಂದು ವಾರದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕೆಳಕ್ಕೆ ಕುಸಿದ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಲ್ಲಿ ಕೊರೊನಾ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಈ ಮೂಲಕ ಅನ್‌ಲಾಕ್‌ 2 ಜಾರಿಗೊಂಡ ಜಿಲ್ಲೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಮೈಸೂರಿಗೆ ರಿಲೀಫ್‌ ಒಂದು ವಾರದಿಂದ ಕೊರೊನಾ ಪಾಸಿಟಿವಿಟಿ ರೇಟ್‌ ಶೇ. 10ರೊಳಗೆ ಬರುತ್ತಿರುವ ಕಾರಣ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಾಕ್‌ಡೌನ್‌ನಿಂದ ತುಸು ಸಡಿಲಿಕೆ ಭಾಗ್ಯ ದೊರಕಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. "ಮೈಸೂರಿಗೆ ಇದು ಶುಭಸುದ್ದಿ. ಜಿಲ್ಲೆಯನ್ನು ಸರಕಾರ ಕೆಟಗೆರಿ 3ರಿಂದ ಕೆಟಗೆರಿ 2ಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ. ಒಂದು ವಾರದಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‌ ಶೇ.10ಕ್ಕಿಂತ ಕಡಿಮೆ ಆಗುತ್ತಿರುವುದರಿಂದ ಸರಕಾರ ತುಸು ರಿಲ್ಯಾಕ್ಸ್‌ ನೀಡಿದೆ. ಶನಿವಾರ, ಭಾನುವಾರ ವೀಕೆಂಡ್‌ ಕಫ್ರ್ಯೂ ಇರುವುದರಿಂದ ಜೂ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ," ಎಂದು ಡಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು. ಮೈಸೂರಿನಲ್ಲಿ ಇಳಿಕೆಯಾದ ಪಾಸಿಟಿವಿಟಿ ರೇಟ್‌ ''ರಾಜ್ಯದೆಲ್ಲೆಡೆ ಅನ್‌ಲಾಕ್‌ ಆಗಿದ್ದರೂ ಮೈಸೂರಿಗೆ ಸ್ವಲ್ಪವೂ ಸಡಿಲಿಕೆ ಸಿಕ್ಕಿರಲಿಲ್ಲ. ಈಗ ವಾರದಿಂದ ಪಾಸಿಟಿವಿಟಿ ರೇಟ್‌ ಕಡಿಮೆಯಾಗುತ್ತಿರುವುದು ಸ್ವಲ್ಪ ರಿಲ್ಯಾಕ್ಸ್‌ಗೆ ಕಾರಣವಾಗಿದೆ. ಜೂ. 25ರಂದು (ಶೇ.6), 24ರಂದು (ಶೇ.6.8), 23ರಂದು (ಶೇ.7), 22ರಂದು (ಶೇ.8), 21, 20ರಂದು (ಶೇ.9.9) ಪಾಸಿಟಿವಿಟಿ ರೇಟ್‌ ಬಂದಿದೆ,'' ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ಆರ್‌. ಚೇತನ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್‌.ಗೀತಾ ಪ್ರಸನ್ನ, ಜಿಪಂ ಸಿಇಒ ಎ.ಎಂ.ಯೋಗೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್‌ ಸ್ವಾಮಿ ಸೇರಿದಂತೆ ಇತರರು ಇದ್ದರು.


from India & World News in Kannada | VK Polls https://ift.tt/2UEfQXb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...