ಒಡಿಶಾ: ಬೀಗರ ಊಟಕ್ಕೆ ಮಟನ್‌ ಬಡಿಸಲಿಲ್ಲ ಎನ್ನುವ ಕಾರಣಕ್ಕೆ ಮದುವೆ ಸಂಬಂಧ ಮುರಿದ ಯುವಕ: ತಕ್ಷಣ ಮತ್ತೊಂದು ವಿವಾಹ

ಭುವನೇಶ್ವರ: 'ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು' ಎಂಬುವಂತೆ ಒಡಿಶಾದ ಗಂಡೊಂದು ಬೀಗರ ಊಟಕ್ಕೆ ಮಟನ್‌ ಬಡಿಸಲಿಲ್ಲ ಎನ್ನುವ ಸಣ್ಣ ಕಾರಣಕ್ಕೆ ಮುನಿಸಿಕೊಂಡು ಸಂಬಂಧವನ್ನೇ ತುಂಡರಿಸಿಕೊಂಡ ಘಟನೆ ನಡೆದಿದೆ. ಕಿಯೋಂಜರ್‌ ಜಿಲ್ಲೆಯ ರಮಾಕಾಂತ್‌ ಪಾತ್ರ (27) ಎಂಬ ಗಂಡುಗಲಿ ಇಂತಹದ್ದೊಂದು ಮುನಿಸು ಮೆರೆದು, ಅದೇ ದಿನ ಬೇರೊಂದು ಹುಡುಗಿಯ ಕತ್ತಿಗೆ ತಾಳಿಕಟ್ಟಿದ್ದಾನೆ. ಊಟದ ಮೆನು ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದ ಪಾತ್ರ, ಮದುವೆಗೆ ಮೊದಲೇ 'ಮಟನ್‌ ಮೆನು' ಕಡ್ಡಾಯ ಎಂದು ತಾಕೀತು ಮಾಡಿದ್ದ. ''ಆಯ್ತು ಬಿಡಿ, ಅದೇನು ದೊಡ್ಡದು,'' ಎಂದು ಹುಡುಗಿ ಕಡೆಯವರು ಒಪ್ಪಿಕೊಂಡಿದ್ದರು. ಧಾಮ್‌ಧೂಮ್‌ ಮದುವೆ ಮುಗಿಯಿತು. ಎಲ್ಲರೂ ಊಟಕ್ಕೆ ಕುಳಿತರು. ತಟ್ಟೆಯಲ್ಲಿಎಲ್ಲವೂ ಶುದ್ಧ ಸಸ್ಯಾಹಾರ. ಗಂಡು ಕಿಡಿಕಿಡಿಯಾದ. ''ಎಲ್ಲಿ ಮಟನ್‌,'' ಎಂದು ಕೇಳಿದ. ''ಅದನ್ನು ನಂತರದ ಕಾರ್ಯಕ್ರಮದ ವೇಳೆ ಬಡಿಸೋಣ. ಈಗ ಸಸ್ಯಾಹಾರಕ್ಕೆ ಸಮಾಧಾನಪಟ್ಟುಕೊಳ್ಳಿ,'' ಎಂದು ವಧುವಿನ ಕಡೆಯವರು ಕೇಳಿಕೊಂಡರು. ''ಸಾಧ್ಯವೇ ಇಲ್ಲ,'' ಎಂದು ಗುಡುಗಿ, ಪೋಷಕರನ್ನು ಕರೆದುಕೊಂಡು ಹೊರ ನಡೆದ ಗಂಡು, ನೆರೆ ಗ್ರಾಮದ ತಮ್ಮ ನೆಂಟರೊಬ್ಬರ ಮನೆಗೆ ತೆರಳಿ, ಅಲ್ಲಿಯೇ ಹೊಸದೊಂದು ಸಂಬಂಧ ಕುದುರಿಸಿ, ಅದೇ ದಿನ ಸಂಜೆ ಹೊಸ ಹುಡುಗಿಗೆ ತಾಳಿಕಟ್ಟಿ ತನ್ನ ಊರು ಸೇರಿದ್ದಾನೆ. ಇದರಿಂದ ಬೆಪ್ಪಾದ ಹುಡುಗಿ ಮನೆಯವರು, ಪೊಲೀಸ್‌ ದೂರು ನೀಡಲು ಹಿಂದೇಟು ಹಾಕಿದ್ದು, ಪ್ರಕರಣ ಮಾತ್ರ ವೈರಲ್‌ ಆಗಿದೆ.


from India & World News in Kannada | VK Polls https://ift.tt/3A471Gj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...