ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಗಗನ ಕುಸುಮ; 46 ವರ್ಷವಾದ್ರೂ ಪ್ರಕ್ರಿಯೆ ಆರಂಭಕ್ಕೆ ಆಮೆ ನಡಿಗೆ!

ಎಸ್‌.ಜಿ.ಕುರ್ಯ ಉಡುಪಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ(1975-76) ವಿರುದ್ಧ ಹೋರಾಡಿ, ಜೈಲು ಶಿಕ್ಷೆ ಅನುಭವಿಸಿದವರಿಗೆ ಬೇಡಿಕೆ ಈಡೇರಿಕೆ ಪ್ರಕ್ರಿಯೆ 46 ವರ್ಷ ಬಳಿಕವೂ ಆಮೆ ನಡಿಗೆಯಲ್ಲಿದೆ. ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ‍್ಯದರ್ಶಿ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಜೈಲು ಶಿಕ್ಷೆಗೊಳಗಾದವರು ಹಾಗೂ ಬದುಕಿದವರ ಕುಟುಂಬದ ಮಾಹಿತಿಯನ್ನು ವಾರದೊಳಗೆ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಜೂ.24ರಂದು ಪತ್ರ ಬರೆದಿದ್ದಾರೆ. ಎಮರ್ಜೆನ್ಸಿ ವಿರುದ್ಧ ಹೋರಾಡಿದವರಿಗೆ ಸರಕಾರಿ ಸೌಲಭ್ಯದ ಭರವಸೆಯನ್ನು ಬಿಜೆಪಿಯು 2018ರ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗ ಎಮರ್ಜೆನ್ಸಿ ಹೋರಾಟಗಾರರಿಗೆ ಪಿಂಚಣಿ ಸಿಗದಿದ್ದರೆ ಇನ್ಯಾವಾಗ ಎನ್ನುವುದು ಹೋರಾಟಗಾರರ ಪ್ರಶ್ನೆಯಾಗಿದೆ. ದೇಶದಲ್ಲಿ 1.25 ಲಕ್ಷ ಹಾಗೂ ರಾಜ್ಯದಲ್ಲಿ 9,500 ಮಂದಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಮೀಸಾ ಹಾಗೂ ಡಿಐಆರ್‌ ಕಾನೂನಿನಡಿ ಜೈಲುಶಿಕ್ಷೆ ಅನುಭವಿಸಿದ್ದು, ಪ್ರಸ್ತುತ 4,200 ಮಂದಿಯಷ್ಟೇ ಬದುಕುಳಿದಿದ್ದಾರೆ. ಎಮರ್ಜೆನ್ಸಿಯನ್ನು ಎರಡನೇ ಸ್ವಾತಂತ್ರ್ಯ ಹೋರಾಟವಾಗಿ ಪರಿಗಣಿಸಿ ಪಿಂಚಣಿ ನೀಡಬೇಕು ಎನ್ನುವುದು ಹೋರಾಟಗಾರರ ಬೇಡಿಕೆಯಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಾಖಂಡ ಸಹಿತ 12 ರಾಜ್ಯಗಳಲ್ಲಿ ಎಮರ್ಜೆನ್ಸಿ ಹೋರಾಟಗಾರರಿಗೆ ಸರಕಾರಿ ಸೌಲಭ್ಯ ಸಿಗುತ್ತಿದೆ. ರಾಜ್ಯದಲ್ಲಿ ಅನಾರೋಗ್ಯ, ಆರ್ಥಿಕ ಸಮಸ್ಯೆ, ಮಕ್ಕಳಿಂದ ದೈಹಿಕ/ಮಾನಸಿಕ ಅಂತರ ಸಹಿತ ಕೋವಿಡ್‌ ಲಾಕ್‌ಡೌನ್‌ನಿಂದಾಗಿ 2,500 ಮಂದಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೋರಾಟದಲ್ಲಿ ಭಾಗವಹಿಸಿದವರಿಗೆ ದಾಖಲೆಗಳ ಕೊರತೆ ಇದ್ದು, ಜೈಲುಗಳು ದಾಖಲೆ ಒದಗಿಸಲು ಸೂಚಿಸುವಂತೆ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಗಾರರ ಅಖಿಲ ಭಾರತ ಸಂಘಟನೆ ಲೋಕತಂತ್ರ ಸೇನಾನಿ ಸಂಘ(ಕರ್ನಾಟಕ) ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ದಾಖಲೆ ಇಲ್ಲದವರಿಗೆ ರಾಷ್ಟ್ರ, ರಾಜ್ಯ ಪದಾಧಿಕಾರಿಗಳ ಐದು ಜನರ ಸಮಿತಿಯಿಂದ ದೃಢೀಕರಣ ವ್ಯವಸ್ಥೆಗೂ ಒತ್ತಾಯಿಸಿದೆ. ಬೇಡಿಕೆಗಳೇನು?
  • ಮಾಸಿಕ 25 ಸಾವಿರ ರೂ. ಪಿಂಚಣಿ
  • ಉಚಿತ ಸಾರಿಗೆ
  • ಉಚಿತ ವೈದ್ಯಕೀಯ ಸೌಲಭ್ಯ
  • ವಸತಿಗೆ ಆದ್ಯತೆ
  • ಮರಣಾ ನಂತರ ತಂದೆ, ತಾಯಿ, ಪತ್ನಿ, ಪತಿ, ಅಸಹಾಯಕ ಮಗ/ಮಗಳಿಗೆ ಸವಲತ್ತು ಮುಂದುವರಿಕೆ
  • ಮರಣಾ ನಂತರ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಮಾಸಿಕ ಪಿಂಚಣಿ ಎಷ್ಟು? ಛತ್ತೀಸ್‌ಗಢ: 25 ಸಾವಿರ ರೂ., ಮಧ್ಯಪ್ರದೇಶ: 25 ಸಾವಿರ ರೂ., ರಾಜಸ್ಥಾನ: 13,200 ರೂ., ಗುಜರಾತ್‌: 12 ಸಾವಿರ ರೂ., ಹರ್ಯಾಣ: 10 ಸಾವಿರ ರೂ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ 2025ರಲ್ಲಿ 50 ವರ್ಷ ತುಂಬಲಿದೆ. ಸ್ವಾಭಿಮಾನಿ ಹೋರಾಟಗಾರರು ಸಂಕಷ್ಟದಲ್ಲಿದ್ದು, ಎಮರ್ಜೆನ್ಸಿ ವಿರುದ್ಧದ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವಾಗಿ ಪರಿಗಣಿಸಿ ಸರಕಾರಿ ಸೌಲಭ್ಯ ಒದಗಿಸಬೇಕೆನ್ನುವ ಬೇಡಿಕೆ ಸರಕಾರದ ಮುಂದಿಟ್ಟಿದ್ದೇವೆ. ಅಗತ್ಯವುಳ್ಳವರಿಗೆ ಸಿಗಲಿ, ಅಗತ್ಯವಿಲ್ಲದವರು ಸೇವಾ ಸಂಸ್ಥೆಗಳಿಗೆ ನೀಡಬಹುದು. ಬಿ.ಎಸ್‌. ಮಂಜುನಾಥಸ್ವಾಮಿ, ಅಧ್ಯಕ್ಷರು, ಲೋಕತಂತ್ರ ಸೇನಾನಿ ಸಂಘ(ಕರ್ನಾಟಕ)


from India & World News in Kannada | VK Polls https://ift.tt/3qqzOR2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...